Friday, July 11, 2025

Latest Posts

ಈ ದಿನದ ಪ್ರಮುಖ ಸುದ್ಧಿಗಳು..!

- Advertisement -

1.ತಾಲಿಬಾನ್ ಪರ ಚೀನಾ ವಕಾಲತ್ತು

ಜಪ್ತಿಮಾಡಿರೋ ಅಫ್ಘಾನಿಸ್ತಾನದ ಆಸ್ತಿಗಳನ್ನು ಮುಕ್ತಗೊಳಿಸುವುಂತೆ ಅಮೆರಿಕಾಗೆ ತಾಲೀಬಾನ್ ನ ಒತ್ತಾಯಕ್ಕೆ ಚೀನಾ ಬೆಂಬಲಿಸಿದೆ. ಆಫ್ಘಾನಿಸ್ತಾನದಲ್ಲಿ ತಾಲಿಬಾನಿಯರ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಹಿಂಸಾತ್ಮಕ ನಡೆಗೆ ಕಿಡಿ ಕಾರಿದ್ದ ಅಮೆರಿಕಾ ಅಫ್ಘಾನಿಸ್ತಾನದ ಸೆಂಟ್ರಲ್ ಬ್ಯಾಂಕ್ ಗೆ ಸೇರಿದ ಸುಮಾರು 9.5 ಬಿಲಿಯನ್ ಮೊತ್ತದ ಆಸ್ತಿಯನ್ನು ಜಪ್ತಿಮಾಡಿತ್ತು. ಅಲ್ಲದೆ ಕಾಬೂಲ್ ಗೆ ನಗದು ಸಾಗಣೆ ತಡೆಯೋ ಮೂಲಕ ಸರ್ಕಾರ ನಡೆಸುತ್ತಿರೋ ತಾಲಿಬಾನಿಯರು ದೀವಾಳಿಯಾಗುವಂತೆ ಮಾಡಿತು. ಸದ್ಯ ಈ ಬಗ್ಗೆ ಪ್ರತಿಕ್ರಿಯಿಸಿರೋ ಚೀನಾ, ಆಫ್ಘಾನಿಸ್ತಾನದ ಆಸ್ತಿಗಳ ಮೇಲೆ ನಿರ್ಬಂಧ ಹೇರುವುದಕ್ಕೆ ಅಮೆರಿಕಾಕ್ಕೆ ಯಾವುದೇ ಕಾನೂನಾತ್ಮಕ ಹಕ್ಕಿಲ್ಲ ಅಂತ ಹೇಳಿದೆ.

2. ಚೀನಾದಲ್ಲಿ ಪ್ರಬಲ ಭೂಕಂಪ- ಮೂವರ ಸಾವು

ಚೀನಾದ  ಸಿಚುವಾಂಗ್ ಪ್ರಾಂತ್ಯದಲ್ಲಿ ಪ್ರಬಲ ಭೂಕಂಪ ಸಂಭವಿಸಿದ ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ. ರಿಕ್ಟರ್ ಮಾಪಕದಲ್ಲಿ 6.0ರಷ್ಟು ತೀವ್ರತೆ ದಾಖಲಾಗಿದೆ. ಇಂದು ಬೆಳಗಿನ ಜಾವ ಸುಮಾರು 4.30ರ ವೇಳೆಗೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಕಟ್ಟಡಗಳು ಹಾನಿಯಾಗಿವೆ. ಅಲ್ಲದೆ ಅವಶೇಷದಡಿ ಸಿಲುಕಿ ಮೂವರು ಮೃತಪಟ್ಟು ಸುಮಾರು 60ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ಇಲ್ಲಿನ ಲೌಝೂವು ನಗರದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ತುರ್ತು ಕಾರ್ಯಾಚರಣೆ ಶುರುವಾಗಿದ್ದು, ಸಿಚುವಾಂಗ್ ಸುತ್ತಮುತ್ತಲ ಪ್ರದೇಶದ ಸಾವಿರಾರು ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

3. ರಿಕಿಗೆ ಶ್ವೇತಭವನ ಬುಲಾವ್

ಕೋವಿಡ್ ವ್ಯಾಕ್ಸಿನ್ ಸುರಕ್ಷತೆ ಬಗ್ಗೆ ಪ್ರಶ್ನಿಸಿದ್ದ ಸುಪ್ರಸಿದ್ಧ ರ್ಯಾಪರ್ ನಿಕಿ ಮಿನಾಜ್ ರನ್ನು ಶ್ವೇತ ಭವನಕ್ಕೆ ಕರೆಯಲಾಗಿದೆ. ಲಸಿಕೆ ಅಡ್ಡ ಪರಿಣಾಮ ಕುರಿತು ಕೆಲದಿನಗಳ ಹಿಂದಷ್ಚೇ ನಿಕಿ ಮಿನಾಜ್ ಮಾಡಿದ್ದ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಇನ್ನು ಶ್ವೇತ ಭವನದಲ್ಲೂ ಜನರ ಪರವಾಗಿ ಲಸಿಕೆ ಸುರಕ್ಷತೆ ಕುರಿತಂತೆ ಪ್ರಶ್ನಿಸುತ್ತೇನೆ ಅಂತ ನಿಕಿ ಮತ್ತೊಂದು ಟ್ಪೀಟ್ ನಲ್ಲಿ ಹೇಳಿದ್ದಾರೆ.

4. ಗುಜರಾತ್ ನ 24 ನೂತನ ಸಚಿವರ ಪದಗ್ರಹಣ

ಗುಜರಾತ್ ನೂತನ ಸಿಎಂ ಭೂಪೇಂದ್ರ ಪಟೇಲ್ ಸಂಪುಟಕ್ಕೆ ಇವತ್ತು 24 ಶಾಸಕರು ಸಚಿವ ಸ್ಥಾನಕ್ಕೆ ಪದಗ್ರಹಣಗೊಂಡರು. ರಾಜಭವನದಲ್ಲಿ ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ರಾಜ್ಯಪಾಲ ಆಚಾರ್ಯ ದೇವವ್ರತ್ 10 ಶಾಸಕರಿಗೆ ಸಂಪುಟ ಸಂಪುಟ ದರ್ಜೆ ಸಚಿವಾಗಿ ಮತ್ತು 14 ಮಂದಿಗೆ ರಾಜ್ಯ ಸಚಿವರಾಗಿ ಹಾಗೂ ಐವರು ಸ್ವತಂತ್ರ ಖಾತೆ ಸಚಿವರು ಸೇರಿದಂತೆ ಒಟ್ಟು 24 ಮಂದಿಗೆ ಪ್ರಮಾಣವಚನ ಬೋಧಿಸಿದರು.

5. ಕಾಂಗ್ರೆಸ್ ಗೆ ಕನ್ಹಯ್ಯ ಕುಮಾರ್…?

ಸಿಪಿಐ ನಾಯಕ ಹಾಗೂ ಜೆಎನ್ಯೂ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್‌ ಶೀಘ್ರವೇ ಕಾಂಗ್ರೆಸ್‌ ಸೇರಲಿದ್ದಾರೆ ಅಂತ ಹೇಳಲಾಗ್ತಿದೆ.ಕನ್ಹಯ್ಯ ಕುಮಾರ್ ಮೊನ್ನೆಯಷ್ಟೇ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು ಇದಕ್ಕೆ ಪುಷ್ಟಿ ನೀಡ್ತಿದೆ.

ಕಮ್ಯನಿಷ್ಟ್ ಪಾರ್ಟಿ ಆಫ್‌ ಇಂಡಿಯಾದಲ್ಲಿ  ಕನ್ಹಯ್ಯಗೆ ಉಸಿರುಗಟ್ಟೋ ವಾತಾವರಣವಿದ್ದು ಪಕ್ಷ ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.

6. ಚಾರ್ ಧಾಮ್ ಯಾತ್ರೆಗೆ ಗ್ರೀನ್ ಸಿಗ್ನಲ್

ಚಾರ್ಧಾಮ್ ಯಾತ್ರೆಯ ಮೇಲಿನ ತಡೆಯಾಜ್ಞೆಯನ್ನು ಉತ್ತರಾಖಂಡ ಹೈಕೋರ್ಟ್  ಇಂದು ತೆರವುಗೊಳಿಸಿದೆ. ಕೋವಿಡ್ -19 ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸೋದ್ರೊಂದಿಗೆ ಯಾತ್ರೆ ನಡೆಸೋದಕ್ಕೆ ಅಡ್ಡಿಯಿಲ್ಲ ಅಂತ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.

ಯಾತ್ರೆ ಕೈಗೊಳ್ಳೋ  ಭಕ್ತರು ಕೋವಿಡ್ ನೆಗಟಿವ್ ವರದಿ ಹಾಗೂ ಎರಡೂ ಡೋಸ್ ಲಸಿಕೆ ಪಡೆದ ಪ್ರಮಾಣಪತ್ರವನ್ನು ಖಡ್ಡಾಯವಾಗಿ ಹೊಂದಿರಬೇಕು ಅಂತ ತಿಳಿಸಿದೆ.   ಇನ್ನು ಪ್ರತಿದಿನ  ಚಾರ್ ಧಾಮ್ ಗಳಾದ ಕೇದಾರನಾಥದಲ್ಲಿ ಕೇವಲ 800, ಬದರಿನಾಥದಲ್ಲಿ 1200, ಗಂಗೋತ್ರಿಯಲ್ಲಿ 600 ಮತ್ತು ಯಮುನೋತ್ರಿಯಲ್ಲಿ 400 ಯಾತ್ರಾರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಿದೆ.

7. ಒಂದೇ ದಿನ 600 ಕೋಟಿ ಸ್ಕೂಟರ್ ಮಾರಿದ ಓಲಾ

ಒಂದೇ ದಿನಕ್ಕೆ ದಾಖಲೆಯ ಪ್ರಮಾಣದಲ್ಲಿ ಪರಿಸರಸ್ನೇಹಿ ಇ-ಸ್ಕೂಟರ್ ಗಳನ್ನು ಓಲಾ ಸಂಸ್ಥೆ ಮಾರಾಟ ಮಾಡಿದೆ. ಮೊದಲ ದಿನವೇ 600 ಕೋಟಿ ರೂಪಾಯಿ ಮೌಲ್ಯದ ವಿದ್ಯುತ್ ಚಾಲಿತ ಸ್ಕೂಟರ್ ಗಳನ್ನು ಮಾರಾಟ ಮಾಡಿರೋ ಓಲಾ ಇಂದು ಮಧ್ಯರಾತ್ರಿ ವರೆಗೂ ಬುಕ್ಕಿಂಗ್ ಅವಕಾಶ ನೀಡಿದೆ. ಮುಂಗಡ 20 ಸಾವಿರ ರೂಪಾಯಿ ಪಾವತಿಸಿ ಬುಕ್ ಮಾಡಿದ ಗ್ರಾಹಕರಿಗೆ 72 ಗಂಟೆಗಳಲ್ಲಿ ಸ್ಕೂಟರ್ ಡೆಲಿವರಿ ಮಾಡಲಿದೆ.

8. ನಾಯಿ ಹಿಡಿಯಲು ಹೋಗಿ ಸಿಕ್ಕಿಬಿತ್ತು ಚಿರತೆ…!

ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿ ನಾಯಿ ಹಿಡಿಯಲು ಬಂದ ಚಿರತೆ ಕಡೆಗೆ ಬೋನಿನಲ್ಲಿ ಸಿಕ್ಕಿಬಿದ್ದಿದೆ. ಸಾಕು ನಾಯಿಯ ಬೋನ್ ನಲ್ಲಿ ನಿನ್ನೆ ರಾತ್ರಿ ಚಿರತೆ ಇದ್ದದ್ದನ್ನು ಗಮನಿಸಿದ ಸ್ಥಳೀಯರು ಕೂಡಲೇ ಬೋನ್ ಲಾಕ್ ಮಾಡಿದ್ರು. ಇನ್ನು ಬೋನ್ ನಲ್ಲಿದ್ದ ನಾಯಿ ಚಿರತೆ ಬಾಯಿಯಿಂದ ತಪ್ಪಿಸಿಕೊಂಡು ಜೀವ ಉಳಿಸಿಕೊಂಡಿದೆ.   ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಬೋನಿನ ಸಮೇತ ಚಿರತೆಯನ್ನು ತೆಗೆದುಕೊಂಡು ಹೋಗಿ ಕುಮಟಾದ ಅರಣ್ಯ ಪ್ರದೇಶಕ್ಕೆ  ಬಿಟ್ಟಿದ್ದಾರೆ.

9. ಚಾರ್ಜ್ ಶೀಟ್ ನಲ್ಲಿ ಶಿಲ್ಪಾ ಶೆಟ್ಟಿ ಹೇಳಿಕೆ

ಅಶ್ಲೀಲ ಚಿತ್ರ ತಯಾರಿಕೆ ಪ್ರಕರಣದಲ್ಲಿ ಶಿಲ್ಪಾಶೆಟ್ಟಿ ಪತಿ,  ಉದ್ಯಮಿ ರಾಜ್ ಕುಂದ್ರಾ ವಿರುದ್ಧ ತನಿಖಾಧಿಕಾರಿಗಳು 1500 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಇನ್ನು ಚಾರ್ಜ್ ಶೀಟ್ ನಲ್ಲಿ ನಟಿ ಶಿಲ್ಪಾ ಶೆಟ್ಟಿ, ಶೆರ್ಲಿನ್ ಚೋಪ್ರಾ, ಶೇಜಲ್ ಷಾ ಸೇರಿದಂತೆ ಸುಮಾರು 43 ಮಂದಿಯ ಹೇಳಿಕೆಗಳನ್ನು ದಾಖಲಿಸಲಾಗಿದೆ. ಕಳೆದ ಜುಲೈ 19ರಂದು ಅಶ್ಲೀಲ ಚಿತ್ರ ತಯಾರಿಕೆ ಪ್ರಕರಣದಲ್ಲಿ ರಾಜ್ ಕುಂದ್ರಾ ಸೇರಿ 11 ಮಂದಿಯನ್ನು ಪೊಲೀಸರು ಬಂಧಿಸಿದ್ದರು. 

10. ಟಿ-20 ಬಳಿಕ ರವಿಶಾಸ್ತ್ರಿ ಔಟ್..?

ಅಕ್ಟೋಬರ್ ನಲ್ಲಿ ಆರಂಭವಾಗಲಿರೋ ಟಿ-20 ಟೂರ್ನಿಗೆ ಟೀಮ್ ಇಂಡಿಯಾ ಸಿದ್ಧವಾಗ್ತಿರೋ . ತಂಡದ ಮುಖ್ಯ ಕೋಚ್ ರವಿಶಾಸ್ತ್ರಿ ಟೂರ್ನಿ ಮುಗಿದ ಮೇಲೆ ತಮ್ಮ ಸ್ಥಾನದಿಂದ ಕೆಳಗಳಿಯಲಿದ್ದಾರೆ. ಇನ್ನು ಈ ಮಹತ್ವದ ಟೂರ್ನಿ ಬಳಿಕ ರವಿಶಾಸ್ತ್ರಿ ಅವಧಿ ಮುಗಿಯುತ್ತೆ. ಆದ್ರೆ ಈವರೆಗೂ ಒಪ್ಪಂದ ನವೀಕರಣಕ್ಕೆ ಮುಂದಾಗದ ರವಿಶಾಸ್ತ್ರಿ ಈಗಾಗಲೇ ತಮ್ಮ ನಿರ್ಧಾರವನ್ನು ಬಿಸಿಸಿಐಗೆ ತಿಳಿಸಿದ್ದಾರೆ ಅಂತ ಹೇಳಲಾಗ್ತಿದೆ.

- Advertisement -

Latest Posts

Don't Miss