1.ತಾಲಿಬಾನ್ ಹುಟ್ಟುಗುಣ ಸುಟ್ರೂ ಹೋಗಲ್ಲ
ಆಫ್ಧಾನಿಸ್ತಾನವನ್ನು ತನ್ನ ಕಪಿಮುಷ್ಟಿಯಲ್ಲಿ ಹಿಡಿದುಕೊಂಡಿರೋ ತಲಿಬಾನ್ ಇದೀಗ ಆಫ್ಘನ್ ಮಹಿಳಾ ಉದ್ಯೋಗಿಗಳಿಗೆ ಸಚಿವಾಲಯ ಪ್ರವೇಶಕ್ಕೆ ನಿಷೇಧ ಹೇರಿದೆ. ಅಫ್ಘಾನಿಸ್ತಾನದ ಮಹಿಳಾ ವ್ಯವಹಾರಗಳ ಸಚಿವಾಲಯದೊಳಕ್ಕೆ ಮಹಿಳಾ ಉದ್ಯೋಗಿಗಳು ಪ್ರವೇಶಿಸದಂತೆ ತಾಲಿಬಾನ್ ನಿರ್ಬಂಧ ಹೇರಿದ್ದು, ಸಚಿವಾಲಯದೊಳಕ್ಕೆ ಕೇವಲ ಪುರುಷ ಉದ್ಯೋಗಿಗಳ ಪ್ರವೇಶಕ್ಕೆ ಮಾತ್ರ ಅನುಮತಿ ಕಲ್ಪಿಸಿಕೊಟ್ಟಿರುವುದಾಗಿ ತಿಳಿಸಿದೆ.
2. ಭಾರತ-ಪಾಕ್ ಗಡಿ ಸಮಸ್ಯೆ ಚರ್ಚೆ
ಭಾರತ-ಚೀನಾ ಗಡಿ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸುವ ಕುರಿತು ವಿದೇಶಾಂಗ ಸಚಿವ ಎಸ್. ಜೈಶಂಕರ್, ಚೀನಾದ ವಿದೇಶಾಂಗ ಸಚಿವ ವಾಗ್ ಯಿ ಜೊತೆ ಮಾತುಕತೆ ನಡೆಸಿದ್ದಾರೆ. ಎಲ್‌ಎಸಿ ಗಡಿಯಲ್ಲಿರುವ ಪರಿಸ್ಥಿತಿ ಕುರಿತು ಪರಸ್ಪರ ಅಭಿಪ್ರಾಯ ವಿನಿಯಮ ಮಾಡಿಕೊಂಡರು. ಹಾಗೆಯೇ, ಬಾಕಿ ಉಳಿದಿರುವ ಸಮಸ್ಯೆಗಳ ಶೀಘ್ರದಲ್ಲೇ ಬಗೆಹರಿಸುವುದಕ್ಕಾಗಿ ಎರಡೂ ರಾಷ್ಟ್ರಗಳ ಮಿಲಿಟರಿ ಹಾಗೂ ರಾಜತಾಂತ್ರಿಕ ಅಧಿಕಾರಿಗಳು ಭೇಟಿಯಾಗಿ ಚರ್ಚಿಸಲು ಉಭಯ ನಾಯಕರು ಒಪ್ಪಿಗೆ ಸೂಚಿಸಿದ್ದಾರೆ.
3. ಅಪಘಾತಕ್ಕೀಡಾದವ್ರಿಗೆ ನೆರವಾದ್ರೆ 5 ಸಾವಿರ ಬಹುಮಾನ
ರಸ್ತೆ ಅಪಘಾತಕ್ಕೀಡಾದವರಿಗೆ ಸಹಾಯ ಮಾಡಿದ್ರೆ 5 ಸಾವಿರ ರೂಪಾಯಿ ಬಹುಮಾನ ಮತ್ತು ಪ್ರಮಾಣಪತ್ರ ನೀಡೋದಾಗಿ ರಾಜಸ್ಥಾನ ಸರ್ಕಾರ ಘೋಷಿಸಿದೆ. ಅಪಘಾತದಲ್ಲಿ ಗಾಯಗೊಂಡವರಿಗೆ ಸಹಾಯ ಮಾಡಲು ಹೆಚ್ಚಿನ ಜನ ಕಾನೂನಿಗೆ ಹೆದರಿ ಮುಂದೆ ಬರುವುದಿಲ್ಲ. ಪರಿಣಾಮ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ ಅನೇಕ ಜನ ಸಾವನ್ನಪ್ಪುತ್ತಿದ್ದಾರೆ. ಈಗ ಅಂತಹ ಜನರ ಜೀವ ಉಳಿಸಲು ರಾಜಸ್ಥಾನ ಸರ್ಕಾರ ಹೊಸ ಯೋಜನೆಯನ್ನು ಆರಂಭಿಸಿದೆ.
4. ಕುಸಿದು ಬಿತ್ತು ಫ್ಲೈಓವರ್…!
ನಿರ್ಮಾಣ ಹಂತದ ಫ್ಲೈ ಓವರ್ ಕುಸಿದ ಪರಿಣಾಮ 14 ಮಂದಿ ಗಾಯಗೊಂಡಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಇಲ್ಲಿನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಬಳಿ ನಿರ್ಮಾಣ ಹಂತದಲ್ಲಿದ್ದ ಫ್ಲೈಓವರ್‌ನ ಒಂದು ಭಾಗ ಮುಂಜಾನೆ 4-30ರ ಸುಮಾರಿನಲ್ಲಿ ಕುಸಿದು ಬಿತ್ತು. ಕೂಡಲೇ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಅವಶೇಷದಡಿ ಸಿಲುಕಿದ್ದ ಕಾರ್ಮಿಕರನ್ನು ರಕ್ಷಿಸಿದ್ದಾರೆ. ಅದೃಷ್ಟವಾಶಾತ್ ಪ್ರಾಣ ಹಾನಿಯಾಗಿಲ್ಲ ಘಟನೆಯಲ್ಲಿ 14 ಜನರಿಗೆ ತೀವ್ರ ಗಾಯಗಳಾಗಿವೆ.
5. ಜೂಜು-ಬೆಟ್ಟಿಂಗ್ ಆಡಿದ್ರೆ ಜೈಲು ಗ್ಯಾರೆಂಟಿ
ಕರ್ನಾಟಕದಲ್ಲಿ ಆನ್ ಲೈನ್ ಬೆಟ್ಟಿಂಗ್ ಮತ್ತು ಜೂಜಾಟಕ್ಕೆ ಕಡಿವಾಣ ಹಾಕಲು ತೀರ್ಮಾನಿಸಲಾಗಿದೆ. ಇಂದು ವಿಧಾನಸಭೆಯಲ್ಲಿ ಮಹತ್ವದ ವಿಧೇಯಕವನ್ನು ಮಂಡನೆಯಾಯ್ತು. ಹೀಗಾಗಿ ಇನ್ಮುಂದೆ ಕರ್ನಾಟಕದಲ್ಲಿ ಆನ್ಲೈನ್ ಗ್ಯಾಂಬ್ಲಿಂಗ್ , ಬೆಟ್ಟಿಂಗ್ ನಲ್ಲಿ ತೊಡಗಿದ್ರೆ ಒಂದರಿಂದ 3 ವರ್ಷಗಳ ವರೆಗೂ ಜೈಲು ಶಿಕ್ಷೆ ಜೊತೆಗೆ ಲಕ್ಷ ದಂಡ ವಿಧಿಸಲಾಗುತ್ತೆ.
6. ಭಿಕ್ಷೆ ಬೇಡಿದ ಕಲಾವಿದರು..!
ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲು ಅನುಮತಿ ನೀಡಬೇಕೆಂದು ಆಗ್ರಹಿಸಿ, ಹುಬ್ಬಳ್ಳಿಯಲ್ಲಿ ಶ್ರೀ ಮಲ್ಲಿಕಾರ್ಜುನ ಅಲೆ ಮಾರಿ ಸಂಘ ಹಾಗೂ ಜಾನಪದ ಗೊಂಬೆ ಕುಣಿತ ಕಲಾವಿದರ ಸಂಘದ ಸದಸ್ಯರು, ನಗರದಲ್ಲಿಂದು ಸಾಂಕೇತಿಕವಾಗಿ ಭಿಕ್ಷಾಟನೆ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು. ಕೋವಿಡ್ ನಿಂದಾಗಿ ಕಳೆದೆರಡು ವರ್ಷಗಳಿಂದ ಎಲ್ಲಾ ಕಾರ್ಯಕ್ರಮಗಳಿಗೂ ನಿಷೇಧ ಹೇರಿರೋದ್ರಿಂದ ನಾವು ಭಿಕ್ಷೆ ಬೇಡುವ ಪರಿಸ್ಥಿತಿ ತಲುಪಿದ್ದೇವೆ ಅಂತ ಕಲಾವಿದರು ಅಳಲು ತೋಡಿಕೊಂಡ್ರು. ಕೂಡಲೆ ಸಾಂಸ್ಕೃತಿಕ ಕಾರ್ಯಕ್ರಮಗಳ ಮೇಲೆ ಹೇರಿರೋ ನಿಷೇಧ ತೆರವುಗೊಳಿಸ ಬೇಕು ಅಂತ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ರು.
7. 21 ದಿನ ಅವಕಾಶ ಬೇಕಂತೆ..!
ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಹಾವಳಿ ಹನಮಂತ ದೇವಸ್ಥಾನದ ಎದುರಿಗೆ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿ ವಿಸರ್ಜನೆಗೆ 21 ದಿನಗಳವರೆಗೆ ಕಾಲಾವಕಾಶ ಕೋಡಬೇಕು ಅಂತ ಹಿಂದೂ ಮಹಾಗಣಪತಿ ಸೇವಾ ಮಂಡಳಿಯವರು ಸರಕಾರ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದ್ರು. ಪ್ರತಿವರ್ಷವೂ ಇಲ್ಲಿ ಪ್ರತಿಷ್ಟಾಪಿಸಲಾಗೋ ಗಣೇಶ ಮೂರ್ತಿಯನ್ನು 21 ನೇ ದಿನದ ಬಳಿಕ ವಿಸರ್ಜನೆ ಮಾಡಲಾಗುತ್ತೆ ಹೀಗಾಗಿ ಈ ವರ್ಷವೂ ನಮಗೆ ಅನುಮತಿ ನೀಡಬೇಕು ಅಂತ ಮಂಡಳಿ ಸದಸ್ಯರು ಆಗ್ರಹಿಸಿದ್ರು.
8. ಹೊಲದಲ್ಲಿ ಬೆಳೆದಿದ್ದ 60 ಕೆಜಿ ಗಾಂಜಾ ವಶ
ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಬು.ಕೊಪ್ಪ ಗ್ರಾಮದಲ್ಲಿ ಅಕ್ರಮವಾಗಿ ಬೆಳೆಯಲಾಗಿದ್ದ 60 ಕೆಜಿ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡು ಮೂವರು ರೈತರನ್ನು ಬಂಧಿಸಿದ್ದಾರೆ. ಗುಡಗೇರಿ ಪಿಎಸ್ಐ ಸವಿತಾ ಮುನ್ಯಾಳ ನೇತೃತ್ವದಲ್ಲಿ ಎಎಸ್ಐ ಮಠಪತಿ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು . ಸ್ಥಳಕ್ಕೆ ತಹಶೀಲ್ದಾರ ಅಶೋಕ್ ಶಿಗ್ಗಾಂವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಈ ಕುರಿತು ಗುಡಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
9. ಐಟಿ ದಾಳಿಗೆ ತೀವ್ರ ಟೀಕೆ
ಬಾಲಿವುಡ್ ನಟ, ಸಮಾಜಸೇವಕ ಸೋನು ಸೂದ್ ಮೇಲೆ ಐಟಿ ದಾಳಿ ಮುಂದುವರಿದಿದೆ. ಮುಂಬೈ, ನಾಗ್ಪುರ ಮತ್ತು ಜೈಪುರದಲ್ಲಿ ಸೋನು ಸೂದ್ ಅವರಿಗೆ ಸೇರಿದ ಆಸ್ತಿಪಾಸ್ತಿಗಳ ಮೇಲೆ ಸೋನು ಗೆ ಸೇರಿದ ಮತ್ತಷ್ಟು ಸ್ಥಳಲ್ಲಿ ಪರಿಶೀಲನೆ ನಡೆಸಿದ್ದಾರೆ . ಕೋವಿಡ್ ವೇಳೆ ಸಾವಿರಾರು ಮಂದಿಗೆ ನೆರವಾಗಿ ಆಪತ್ಭಾಂದವನೆನಿಸಿಕೊಂಡಿದ್ದ ಸೋನು ಸೂದ್ ಮೇಲೆ ಐಟಿ ದಾಳಿ ನಡೆದಿರೋದು ಸಾರ್ವಜನಿಕ ವಲಯದಲ್ಲಿ ಟೀಕೆಗೆ ಕಾರಣವಾಗಿದೆ.
10. ಪಾಕ್ ಸಹವಾಸವೇ ಬೇಡಾಪ್ಪ….!
ಪಾಕಿಸ್ತಾನದಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಭದ್ರತಾ ಅಪಾಯ ಸಾಧ್ಯತೆಯಿದೆ ಅನ್ನೋ ಗುಪ್ತಚರ ಮಾಹಿತಿ ಹಿನ್ನೆಲೆಯಲ್ಲಿ ಇವತ್ತು ಆರಂಭವಾಗಬೇಕಿದ್ದ ಪಾಕ್ ಪ್ರವಾಸವನ್ನು ನ್ಯೂಜಿಲೆಂಡ್ ರದ್ದುಗೊಳಿಸಿದೆ. ಸುದ್ದಿ ತಿಳಿದ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಪಾಕ್ ಪ್ರವಾಸವನ್ನೇ ರದ್ದುಗಳಿಸಿದೆ. ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ಇಂದು ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವೆ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯ ನಿಗದಿಯಾಗಿತ್ತು.