Saturday, July 12, 2025

Latest Posts

ಈ ದಿನದ ಪ್ರಮುಖ ಸುದ್ದಿಗಳು..!

- Advertisement -
  1. 1. ಶ್ವೇತ ಭವನಕ್ಕೆ ಭಾರತೀಯನ ನೇಮಕ..!

ಭಾರತೀಯ- ಅಮೆರಿಕನ್ ವೈಮಾನಿಕ ಮತ್ತು ರಕ್ಷಣಾ ಪರಿಣಿತ ರವಿ ಚೌಧರಿ ಅವರನ್ನು ಯುಎಸ್ ನ ಪೆಂಟಗಾನ್ ನಲ್ಲಿ ಪ್ರಮುಖ ಹುದ್ದೆಯೊಂದಕ್ಕೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ನಾಮನಿರ್ದೇಶನ ಮಾಡಿರುವುದಾಗಿ ಶ್ವೇತ ಭವನ ತಿಳಿಸಿದೆ. ಅಮೆರಿಕ ವಾಯುಪಡೆಯ ಮಾಜಿ ಅಧಿಕಾರಿ ಹಾಗೂ ಪೈಲಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಚೌಧರಿ ಸದ್ಯ ವಾಯುಪಡೆಯ ಇಂಧನ ಪರಿಸರ ಮತ್ತು ಪರಿಸರ ವಿಭಾಗದ ಸಹಾಯಕ ಕಾರ್ಯದರ್ಶಿ ಹುದ್ದೆಗೆ ನಾಮನಿರ್ದೇಶಿತರಾಗಿದ್ದಾರೆ. ಇನ್ನು ಇದಕ್ಕೆ ಅಮೆರಿಕದ ಸೆನೆಟ್ ನಿಂದ ದೃಢೀಕರಣ ಮಾತ್ರ ಬಾಕಿ ಇದೆ.

  1. 2. ರಷ್ಯಾದಲ್ಲಿ ಒಂದೇ ದಿನ ಸಾವಿರ ಬಲಿ…!

ವಿಶ್ವಾದ್ಯಂತ ಮನುಕುಲವನ್ನು ಕಾಡುತ್ತಿರೋ ಕೊರೋನಾ ಮಹಾಮಾರಿ ತನ್ನ ಅಟ್ಟಹಾಸ ಮುಂದುವರೆಸಿದೆ. ಇದೇ ಮೊದಲ ಬಾರಿಗೆ ರಷ್ಯಾದಲ್ಲಿಂದು ಒಂದೇ ದಿನ ಒಂದು ಸಾವಿರ ಮಂದಿ ಕೊರೋನಾ ಸೋಂಕಿತರು ಸಾವನ್ನಪ್ಪಿದ್ದಾರೆ.
ರಷ್ಯಾದಲ್ಲಿ ಲಸಿಕಾ ಅಭಿಯಾನ ಚಾಲ್ತಿಯಲ್ಲಿರೋ ಹೊರತಾಗಿಯೂ ಸಾವಿನ ಸಂಖ್ಯೆ ಏರಿಕೆಯಾಗಿರೋದು ಆತಂಕಕ್ಕೆ ಕಾರಣವಾಗಿದೆ. ಈ ವರೆಗೂ ರಷ್ಯಾದಲ್ಲಿ ಕೇವಲ 31ರಷ್ಟು ಮಂದಿಗೆ ಮಾತ್ರ ಸಂಪೂರ್ಣ ಲಸಿಕೆ ಹಾಕಲಾಗಿದೆ. ಇನ್ನು ರಷ್ಯಾದಲ್ಲಿ ಕೊರೋನ ತಗ್ಗಿಸಲು ಕಠಿಣ ಕ್ರಮಗಳನ್ನು ಜಾರಿಗೊಳಿಸದೇ ಇರೋದು ಸೋಂಕಿತರ ಸಂಖ್ಯೆ ಹೆಚ್ಚಾಗಲು ಕಾರಣ ಅಂತ ಹೇಳಲಾಗ್ತಿದೆ.

  1. 3. ನಾನು ಕಾಂಗ್ರೆಸ್ ಪೂರ್ಣಾವಧಿ ಅಧ್ಯಕ್ಷೆ

ನಾನು ಕಾಂಗ್ರೆಸ್ನ ಹಂಗಾಮಿ ಅಧ್ಯಕ್ಷೆಯಲ್ಲ. ಪೂರ್ಣಾವಧಿ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ ಅಂತ ಎಐಸಿಸಿ ಅಧಿನಾಯಕಿ ಸೋನಿಯಾಗಾಂಧಿ ಹೇಳಿದ್ದಾರೆ. ದೆಹಲಿಯ ಎಐಸಿಸಿ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಸೋನಿಯಾ ಗಾಂಧಿ, ಕಾಂಗ್ರೆಸ್ ಮುನ್ನೆಡೆಸುವ ಒಗ್ಗಟ್ಟಿನ ಅಗತ್ಯವಿದೆ ಎಂದ್ರು. ಇನ್ನು ಏನೇ ಹೇಳಬಯಸಿದ್ದರೂ ಅದನ್ನು ನನ್ನ ಬಳಿಯೇ ನೇರವಾಗಿ ಹೇಳಿ. ನನ್ನೊಂದಿಗೆ ಯಾವುದೇ ವಿಚಾರ ಚರ್ಚಿಸೋದಕ್ಕೂ ನಿಮಗೆ ಸ್ವಾತಂತ್ರ‍್ಯವಿದೆ. ಮಾಧ್ಯಮಗಳ ಮೂಲಕ ಅದನ್ನು ನನಗೆ ತಿಳಿಸೋ ಅಗ್ಯವಿಲ್ಲ ಅಂತ ಸೋನಿಯಾ ಗಾಂಧಿ ಜಿ23 ನಾಯಕರಿಗೆ ಕಾರ್ಯಕಾರಿ ಸಭೆಯಲ್ಲಿ ತಿಳಿಸಿದ್ದಾರೆ.

  1. 4. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಗೆ ಡೆಂಗ್ಯೂ

ಅನಾರೋಗ್ಯದಿಂದ ದೆಹಲಿಯ ಏಮ್ಸ್ ಗೆ ದಾಖಲಾಗಿರುವ ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂ???ವರಿಗೆ ಡೆಂಗ್ಯೂ ಸೋಂಕು ತಗುಲಿರೋದು ಪತ್ತೆಯಾಗಿದೆ. ಇನ್ನು ಡೆಂಗ್ಯೂ ಸೋಂಕಿನಿAದಾಗಿ ಪ್ಲೇಟ್ ಲೆಟ್ಸ್ ಕುಸಿದಿತ್ತು. ಆದ್ರೆ ಚಿಕಿತ್ಸೆ ಪಡೆಯುತ್ತಿರೋದ್ರಿಂದ ಮನಮೋಹನ್ ಸಿಂಗ್ ಆರೋಗ್ಯದಲ್ಲಿ ಚೇತರಿಕೆ ಕಂಡುಬAದಿದೆ. ಇನ್ನು ಮನಮೋಹನ್ ಸಿಂಗ್. ತೀವ್ರ ಜ್ವರ, ಸುಸ್ತು ಮತ್ತು ಎದೆನೋವಿನಿಂದಾಗಿ ಕಳೆದ ಬುಧವಾರದಿಂದ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

  1. 5. ಶೀಘ್ರವೇ 1-5ನೇ ತರಗತಿ ಪ್ರಾರಂಭ

ಇನ್ನೆರಡು ದಿನಗಳಲ್ಲಿ 1 ರಿಂದ 5ನೇ ತರಗತಿ ಶಾಲೆ ಆರಂಭಿಸುವ ಕುರಿತಾಗಿ ನಿರ್ಧಾರ ತೆಗೆದುಕೊಳ್ಳಲಾಗುವುದು ಅಂತ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದ್ದಾರೆ. ಶನಿವಾರ, ಭಾನುವಾರಗಳಂದೂ ತರಗತಿ ನಡೆಸುವ ಬಗ್ಗೆ ಚಿಂತನೆ ನಡೆಸಲಾಗಿದ್ದು, ಪಠ್ಯ ಕಡಿತದ ಕುರಿತು ಯಾವುದೇ ಪ್ರಸ್ತಾಪ ಇಲ್ಲ ಎಂದು ಬಿ.ಸಿ.ನಾಗೇಶ್ ಸ್ಪಷ್ಟಪಡಿಸಿದ್ದಾರೆ. 1 ರಿಂದ 5 ನೇ ತರಗತಿವರೆಗೆ ಶಾಲೆ ಆರಂಭಕ್ಕೆ ಶಿಕ್ಷಣ ಇಲಾಖೆ ತೀರ್ಮಾನ ಮಾಡಿದೆಯಾದ್ರೂ ತಾಂತ್ರಿಕ ಸಲಹಾ ಸಮಿತಿ ಸಲಹೆಯಂತೆ ನಿರ್ಧರಿಸಲಾಗುತ್ತೆ ಅಂತ ನಾಗೇಶ್ ತಿಳಿಸಿದ್ದಾರೆ.

  1. 6. ಕೇರಳಾದಲ್ಲಿ ರೆಡ್ ಅಲರ್ಟ್

ಕೇರಳದಲ್ಲಿ ಭಾರಿ ಮಳೆ ಮುಂದುವರೆದಿದ್ದು, ಮಳೆಯಿಂದಾಗಿ ರಾಜ್ಯದ ನದಿಗಳು ಉಕ್ಕಿ ಹರಿಯುತ್ತಿವೆ.
ಹೀಗಾಗಿ ಪತ್ತನಂತಿಟ್ಟ,ಕೊಟ್ಟಾಯA,ಎರ್ನಾಕುಲA,ಇಡುಕ್ಕಿ ಮತ್ತು ತ್ರಿಶೂರ್ ಜಿಲ್ಲೆಗಳಲ್ಲಿ ‘ರೆಡ್ ಅಲರ್ಟ್’ ಘೋಷಿಸಲಾಗಿದೆ. ಅಲ್ಲದೆ ಮುಂದಿನ ಇಪ್ಪತ್ನಾಲ್ಕು ಗಂಟೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದ್ದು,ಎಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತಗಳಿಗೆ ಹವಾಮಾನ ಇವಾಖೆ ಸೂಚಿಸಿದೆ. ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಕಾರಣ ಭಾರೀ ಮಳೆಯಾಗುತ್ತಿದ್ದು, ಜಲಾಶಯದ ಆಸುಪಾಸಿನ ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳುವAತೆ ಸೂಚನೆ ನೀಡಲಾಗಿದೆ.

  1. 7. ಗ್ರಾಹಕರಿಗೆ ಉಚಿತ ಪೆಟ್ರೋಲ್

ತಮ್ಮ ಕುಟುಂಬದಲ್ಲಿ ಹೆಣ್ಣು ಮಗು ಜನನವಾದ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಪೆಟ್ರೋಲ್ ಬಂಕ್ ಮಾಲೀಕನೊಬ್ಬ ತನ್ನ ಗ್ರಾಹಕರಿಗೆ ಉಚಿತವಾಗಿ ಪೆಟ್ರೋಲ್ ವಿತರಿಸಿದ್ದಾರೆ. ಮಾತುಬಾರದ ಶ್ರವಣದೋಷವೂ ಇರೋ ತಮ್ಮ ಅಣ್ಣನ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ ಅನ್ನೋ ವಿಚಾರ ತಿಳಿದು ಸಂತೋಷಗೊAಡ ರಾಜೇಂದ್ರ ಸೈನಾನಿ, ಬೇತಲ್ ನಲ್ಲಿನ ತಮ್ಮ ಪೆಟ್ರೋಲ್ ಬಂಕ್ ನಲ್ಲಿ ಅಂದು ತನ್ನೆಲ್ಲಾ ಗ್ರಾಹಕರಿಗೂ ಶೇಕಡಾ 10 ರಷ್ಟು ಪೆಟ್ರೋಲ್ ಹೆಚ್ಚುವರಿಯಾಗಿ ನೀಡಿದ್ದಾರೆ. ಇನ್ನು ನೂರು ರೂಪಾಯಿಗೆ ಪೆಟ್ರೋಲ್ ಹಾಕಿಸಿದ್ರೆ ಶೇಕಡಾ 5 ರಷ್ಟು ಮತ್ತು 200 ರಿಂದ 500 ರೂಪಾಯಿ ಪೆಟ್ರೋಲ್ ಹಾಕಿಸಿಕೊಂಡವರಿಗೆ ಶೇಕಡಾ 10 ರಷ್ಟು ಉಚಿತ ಪೆಟ್ರೋಲ್ ಹಾಕಲಾಗಿದೆ.

  1. 8. ತಲೈವಿ ಪುತ್ರ ರಿಲೀಸ್..!

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಸೇರಿದ್ದ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾರವರ ಪುತ್ರ ಸುಧಾಕರನ್ ಇಂದು ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಬೆಂಗಳೂರಿನ ಪರಪ್ರನ ಅಗ್ರಹಾರದಲ್ಲಿ ಕಳೆದ 5 ವರ್ಷಗಳಿಂದ ಶಿಕ್ಷೆ ಅನುಭವಿಸಿದುತ್ತಿದ್ದ ಜಯಲಲಿತಾ ದತ್ತು ಪುತ್ರ ಸುಧಾಕರನ್, ನ್ಯಾಯಾಲಯ ವಿಧಿಸಿದ್ದ ದಂಡ ಕಟ್ಟದ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಯ್ತು. ಆದ್ರೀಗ ಶಿಕ್ಷೆ ಅವಧಿ ಪೂರ್ಣಗೊಂಡ ಬಳಿಕ ಸುಧಾಕರನ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

  1. 9. ರಾಜ್ ಕುಂದ್ರಾ, ಶಿಲ್ಪಾ ಶೆಟ್ಟಿ ವಿರುದ್ಧ ದೂರು…

ಅಶ್ಲೀಲ ಚಿತ್ರ ತಯಾರಿಕೆ ಪ್ರಕರಣದಲ್ಲಿ ಬಂಧಿಸಲ್ಪಟ್ಟು ಇತ್ತೀಚೆಗೆ ಜಾಮೀನಿನ ಮೇಲೆ ರಿಲೀಸ್ ಆಗಿರೋ ಉದ್ಯಮಿ ರಾಜ್ ಕುಂದ್ರಾ ಮತ್ತು ಅವರ ಪತ್ನಿ ನಟಿ ಶಿಲ್ಪಾಶೆಟ್ಟಿ ವಿರುದ್ಧ ಬಾಲಿವುಡ್ ನಟಿ ಶೆರ್ಲಿನ್ ಚೋಪ್ರಾ ಲೈಂಗಿಕ ಕಿರುಕುಳ ದೂರು ದಾಖಲಿಸಿದ್ದಾರೆ. ರಾಜ್ ಕುಂದ್ರಾ ನನಗೆ ಲೈಂಗಿಕ ಕಿರುಕುಳ ನೀಡಿದ್ದರು. ಈ ಬಗ್ಗೆ ಇಂದು ದೂರು ನೀಡಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ ಅಂತ ಶೆರ್ಲಿನ್ ಚೋಪ್ರಾ ಹೇಳಿದ್ದಾರೆ. ಇನ್ನು ಶಿಲ್ಪಾಳಿಂದ ನಾನು ನಿರಂತರ ಮಾನಸಿಕ ಕಿರುಕುಳ ಅನುಭವಿಸಿದ್ದೇನೆ ಅಂತಲೂ ಶೆರ್ಲಿನ್ ತಿಳಿಸಿದ್ದಾರೆ. ಇನ್ನು ಈ ಹಿಂದೆ ಕೂಡ ನಟಿ ಶೆರ್ಲಿನ್ ಚೋಪ್ರಾ ಹಲವು ಬಾರಿ ಶಿಲ್ಪಾ ಶೆಟ್ಟಿ ದಂಪತಿ ವಿರುದ್ಧ ಆರೋಪ ಮಾಡಿದ್ದಾರೆ.

10. ಬೆಳ್ಳಿ ಪರದೆಯಲ್ಲಿ ಐಸಿಸಿ ಟಿ-20 ವಿಶ್ವಕಪ್

ನಾಳೆಯಿಂದ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಆಡುವ ಎಲ್ಲಾ ಪಂದ್ಯಗಳನ್ನೂ ಬೆಳ್ಳಿ ಪರದೆಯಲ್ಲಿ ಪ್ರದರ್ಶಿಸೋದಕ್ಕೆ ಐನಾಕ್ಸ್ ಸಂಸ್ಥೆ ನಿರ್ಧಾರ ಮಾಡಿದೆ. ಇದಕ್ಕಾಗಿ ಈಗಾಗಲೇ ಐನಾಕ್ಸ್ ಸಕಲ ಸಿದ್ಧತೆ ಮಾಡಿಕೊಂಡಿದೆ. ದೇಶದ 70ನಗರಗಳಲ್ಲಿ 56 ಮಲ್ಟಿಪ್ಲೆಕ್ಸ್ ಗಳ 658 ಸ್ಕ್ರೀನ್ ಗಳಲ್ಲಿ ವರ್ಲ್ಡ್ ಕಪ್ ಟೂರ್ನಿಯಲ್ಲಿ ಭಾರತ ಆಡುವ ಎಲ್ಲಾ ಪಂದ್ಯಗಳನ್ನು ನೋಡುವ ಅವಕಾಶ ಮಾಡಿ ಕೊಡಲಿದೆ. ಇನ್ನು ಆಕ್ಟೋಬರ್ 24ರಂದು ಭಾರತ ತನ್ನ ಸಂಪ್ರಾದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಸೆಣಸಾಡಲಿದೆ. ಪಂದ್ಯ ವೀಕ್ಷಣೆಗೆ 200ರಿಂದ 500 ರೂಪಾಯಿ ಫಿಕ್ಸ್ ಮಾಡಲಾಗಿದೆ

- Advertisement -

Latest Posts

Don't Miss