Friday, November 28, 2025

Latest Posts

ಡ್ರಗ್ಸ್ ಕೇಸ್: ಎನ್‌ಸಿಬಿಯಿಂದ ಮತ್ತೊಬ್ಬ ನಟಿಯ ಅರೆಸ್ಟ್

- Advertisement -

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ನಟಿಯನ್ನು ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ನಟಿ ಶ್ವೇತ ಕುಮಾರಿ ಬಂಧನಕ್ಕೊಳಗಾದ ನಟಿ.

ಟಾಲಿವುಡ್ ಮೂಲಕದ ಶ್ವೇತ ಕುಮಾರಿ ಕನ್ನಡದ ರಿಂಗ್ ಮಾಸ್ಟರ್ ಸಿನಿಮಾದಲ್ಲಿ ನಟಿಸಿದ್ದರು. ಕಳೆದ ಎರಡು ದಿನಗಳ ಹಿಂದಷ್ಟೇ ಮುಂಬೈ ಡ್ರಗ್ ಪೆಡ್ಲರ್ ಕರೀಂನ ಸಹಚರ ಆಗಿದ್ದ ಚಾಂದ್ ಶೇಖ್ ಎಂಬಾತನನ್ನು ಎನ್‌ಸಿಬಿ ಅಧಿಕಾರಿಗಳು ಬಂಧಿಸಿ, ಆತ ನೀಡಿದ ಮಾಹಿತಿ ಆಧಾರದ ಮೇಲೆ ನಟಿ ಶ್ವೇತ ಕುಮಾರಿಯನ್ನು ಅರೆಸ್ಟ್ ಮಾಡಿದ್ದಾರೆ.

ನಟಿ ಶ್ವೇತಾ, ಡ್ರಗ್ಸ್ ಪಡೆಯುವುದರ ಜೊತೆ ಮಾರಾಟದಲ್ಲಿಯೂ ತೊಡಗಿದ್ದರಂತೆ. ಅಲ್ಲದೇ ಡ್ರಗ್ ಪೆಡ್ಲರ್ ಓರ್ವನ ಸಂಪರ್ಕ ಸಹ ಹೊಂದಿದ್ದರು ಎನ್ನಲಾಗ್ತಿದೆ. ನಟಿಯ ಬಂಧನದ ವೇಳೆ 10 ಗ್ರಾಂ ಮಾದಕ ವಸ್ತು ಹಾಗೂ ಹತ್ತು ಲಕ್ಷ ನಗದನ್ನು ವಶಪಡಿಸಿಕೊಳ್ಳಲಾಗಿದೆಯಂತೆ. ನಟಿಯ ಮೊಬೈಲ್ ಅನ್ನು ಎನ್‌ಸಿಬಿ ವಶಪಡಿಸಿಕೊಂಡಿದ್ದು ಕರೆ ಮಾಹಿತಿ, ಸಂಪರ್ಕ ಸಂಖ್ಯೆ, ವಾಟ್ಸ್‌ಆಪ್ ಚಾಟ್‌ಗಳನ್ನು ಹುಡುಕುತ್ತಿದ್ದಾರೆ.

ಅಂದಹಾಗೇ ಶ್ವೇತ ಕನ್ನಡ ಸಿನಿಮಾಗಿಂತಲೂ ಹೆಚ್ಚಾಗಿ ತೆಲುಗು ಸಿನಿಮಾಗಳಲ್ಲಿ ನಟಿಸಿದ್ದು, ಒಂದು ತಮಿಳು ಮೂವೀ ಸಹ ಮಾಡಿದ್ದಾರೆ.

- Advertisement -

Latest Posts

Don't Miss