District News: Hanagal: ಟೊಮ್ಯಾಟೋ ಬೆಲೆ ಗಗನಕ್ಕೇರುತ್ತಿದ್ದಂತೆ ಇಲ್ಲೊಬ್ಬ ವ್ಯಾಪಾರಸ್ಥ ಅಚ್ಚರಿ ಎಂಬಂತೆ ಸಿಸಿಟಿವಿ ಕಾವಲಿನಲ್ಲಿ ಟೊಮ್ಯಾಟೋ ಮಾರಾಟ ಮಾಡಿ ಸುದ್ದಿಯಾಗಿದ್ದಾನೆ. ಹೌದು ಟೊಮ್ಯಾಟೋಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು.
ಟೊಮ್ಯಾಟೊ ಕಳ್ಳತನ ಆಗದಂತೆ ಎಚ್ಚರಿಕೆ ವಹಿಸಿದ ವ್ಯಾಪಾರಸ್ಥ ಸಿಸಿ ಟಿವಿ ಕಾವಲಿನಲ್ಲಿ ಟೊಮ್ಯಾಟೋ ವ್ಯಾಪಾರ ಮಾಡಿದ್ದಾನೆ. 1 ಕೆ.ಜಿ ಟೊಮ್ಯಾಟೊ ಬೆಲೆ 150 ರೂಪಾಯಿ ಹಿನ್ನಲೆ. ಖರೀದಿ ಮಾಡೊ ನೆಪದಲ್ಲಿ ಜನ ಟೊಮ್ಯಾಟೋ ಖದಿಯಬಾರದು ಎಂಬ ಕಾರಣಕ್ಕೆ ಸಿ.ಸಿ ಅಳವಡಿಸಲಾಗಿದೆ. ಹಾನಗಲ್ ತಾಲೂಕು ಅಕ್ಕಿಆಲೂರು ಗ್ರಾಮದಲ್ಲಿ ಟೊಮ್ಯಾಟೊ ವ್ಯಾಪಾರಸ್ಥ ಕೃಷ್ಣಪ್ಪರಿಂದ ಸಿಸಿ ಕ್ಯಾಮರಾ ಅಳವಡಿಕೆಯಾಗಿದೆ. ಒಂದು ಎರಡು ಟೊಮ್ಯಾಟೋ ಕದ್ದರೂ ನಷ್ಟ. ಹೀಗಾಗಿ ಸಿ.ಸಿ ಟಿವಿ ಇಟ್ಟಿದಿನಿ ಎಂದ ವ್ಯಾಪಾರಸ್ಥ ಕೃಷ್ಣಪ್ಪ. ತನ್ನ ವ್ಯಾಪಾರ ವ್ಯವಸ್ಥೆಯಲ್ಲಿ ಬದಲಾವಣೆ ತಂದು ಅಚ್ಚರಿ ಮೂಡಿಸಿದ್ದಾನೆ.
ನಿಗಮ ಮಂಡಳಿಯ ಗಾದಿಗಾಗಿ ನಡೆಯುತ್ತಿದೆ ಬಿಗ್ ಫೈಟ್: ಟಿಕೆಟ್ ತಪ್ಪಿದವರ ಸರ್ಕಸ್..!
ಸೀಟ್ ಹಿಡಿಯಲು ವಿದ್ಯಾರ್ಥಿಗಳ ಸರ್ಕಸ್: ವಿಂಡೋ ರಾಡ್ ನಿಂದ ಕೈಗೆ ಹೊಡೆತ..!