Friday, September 20, 2024

Latest Posts

Recipe: ಟೊಮೆಟೋ ದೋಸೆ ರೆಸಿಪಿ

- Advertisement -

ಬೇಕಾಗುವ ಸಾಮಗ್ರಿ: ಎರಡು ಟೊಮೆಟೋ, ಸಣ್ಣ ತುಂಡು ಶುಂಠಿ, ಚಿಟಿಕೆ ಅರಿಶಿನ, ಖಾರದ ಪುಡಿ, ಉಪ್ಪು, ಕೊಂಚ ಎಣ್ಣೆ, ಅರ್ಧ ಕಪ್ ರವೆ, ಅರ್ಧ ಕಪ್ ಅಕ್ಕಿ ಹಿಟ್ಟು, ಎರಡು ಹಸಿಮೆಣಸು, 1 ಸಣ್ಣಗೆ ಹೆಚ್ಚಿದ ಈರುಳ್ಳಿ, ಕೊಂಚ ಜೀರಿಗೆ.

ಮಾಡುವ ವಿಧಾನ: ಮೊದಲು ಟೊಮೆಟೋ, ಶುಂಠಿ, ಅರಿಶಿನ, ಖಾರದ ಪುಡಿ, ಉಪ್ಪನ್ನು ಮಿಕ್ಸಿ ಜಾರ್‌ಗೆ ಹಾಕಿ, ರುಬ್ಬಿ, ಪೇಸ್ಟ್ ತಯಾರಿಸಿ. ಬಳಿಕ ಇದನ್ನು ಒಂದು ಮಿಕ್ಸಿಂಗ್‌ ಬೌಲ್‌ಗೆ ಹಾಕಿ, ರವೆ ಮತ್ತು ಅಕ್ಕಿ ಹಿಟ್ಟನ್ನು ಮಿಕ್ಸ್ ಮಾಡಿ, ಅರ್ಧ ಗಂಟೆ ಬದಿಗಿರಿಸಿ. ಬಳಿಕ ಇದಕ್ಕೆ ಈರುಳ್ಳಿ, ಹಸಿಮೆಣಸು, ಜೀರಿಗೆ ಹಾಕಿ ಮಿಕ್ಸ್ ಮಾಡಿ, ಪ್ಯಾನ್ ಬಿಸಿ ಮಾಡಿ, ಎಣ್ಣೆ ಸವರಿ ದೋಸೆ ಮಾಡಿದ್ರೆ, ಟೊಮೆಟೋ ದೋಸೆ ರೆಡಿ. ಇದನ್ನು ಕಾಯಿ ಚಟ್ನಿಯೊಂದಿಗೆ ಸರ್ವ್ ಮಾಡಿ.

- Advertisement -

Latest Posts

Don't Miss