Friday, November 22, 2024

Latest Posts

Lemon: ಕೈ ಸುಡುವ ಬಿಸಿಯಲ್ಲಿ ಟೊಮ್ಯಾಟೊ ಬೆಲೆ: ಪರ್ಯಾಯ ಮಾರ್ಗ ಕಂಡುಕೊಂಡ ಗ್ರಾಹಕರು..!

- Advertisement -

ಹುಬ್ಬಳ್ಳಿ: ಟೊಮ್ಯಾಟೊ ಹಣ್ಣಿಗೆ ಈಗ ಸಿಕ್ಕಾಪಟ್ಟೆ ಡಿಮ್ಯಾಂಡ್ ಬಂದಿದೆ. ಈ ಹಿನ್ನಲೆ ದುಬಾರಿ ಬೆಲೆ ಕೊಟ್ಟು ಟೊಮ್ಯಾಟೊ ಕೊಂಡುಕೊಳ್ಳುಲು ಆಗುತ್ತಿಲ್ಲ. ಇದರಿಂದ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಸಾರ್ವಜನಿಕರು, ಅಡುಗೆಗೆ ಟೊಮ್ಯಾಟೊ ಬದಲು ನಿಂಬೆಹಣ್ಣಿನ ಮೊರೆ ಹೋಗಿದ್ದಾರೆ. ಇದರಿಂದ ನಿಂಬೆ ಹಣ್ಣಿಗೂ ಡಿಮ್ಯಾಂಡ್ ಬಂದಿದೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ..

ಕೆಜಿ ಬೆಂಡೆಕಾಯಿಗೆ 80 ರೂಪಾಯಿ, ಮೆಣಸಿನಕಾಯಿ 100ರೂಪಾಯಿ, ಬಜಿ ಮೆಣಸಿನಕಾಯಿ 60 ರೂಪಾಯಿ, ಶುಂಠಿ 400 ರೂಪಾಯಿ, ಮೂಲಂಗಿ 40‌ರೂಪಾಯಿ, ಆಲುಗಡ್ಡೆ‌ 40 ರೂಪಾಯಿ, ನವಿಲು ಕೋಸು 60 ರೂಪಾಯಿ, ಬೀನ್ಸ್ 180 ರೂಪಾಯಿ, ಹಾಗಲಕಾಯಿ 50 ರೂಪಾಯಿ, ಬೆಳ್ಳುಳ್ಳಿ 300 ರೂಪಾಯಿ ಆಗಿದೆ. ಇದರ ಜೊತೆ ಕೆಂಪು ಸುಂದರಿ ಟೊಮ್ಯಾಟೊ ಬೆಲೆ ಕೆ.ಜಿಗೆ 150 ರೂಪಾಯಿ ಆಗಿದೆ. ಇದರಿಂದ ತಲೆ ಕೆಡಿಸಿಕೊಂಡಿರುವ ಗ್ರಾಹಕರು, ಈಗ ಟೊಮ್ಯಾಟೊ ಸಹವಾಸದ ಬದಲು ಪರ್ಯಾಯವಾಗಿ ನಿಂಬೆಹಣ್ಣಿನ ಹುಳಿಗೆ ಮೊರೆ ಹೋಗಿದ್ದು, ದುಬಾರಿ ತರಕಾರಿಯಿಂದ ಗ್ರಾಹಕರು ವಿಮುಖರಾಗಿದ್ದಾರೆ.

ಟೊಮ್ಯಾಟೊ ದುಬಾರಿಯಾಗಿ ಆಪಲ್ ಬೆಲೆ ಮೀರಿಸಿದೆ. ಇತ್ತಿಚಿಗೆ ಹುಣಸೆ ಹಣ್ಣು ಸಹ ದುಬಾರಿಯಾಗಿದೆ. ಇದರಿಂದ ಮಹಿಳೆಯರು ಟೊಮ್ಯಾಟೊನೂ ಬೇಡ, ಹುಣಸೆ ಹಣ್ಣು ಬೇಡ, ಅದರ ಬದಲು ಹುಳಿ ಹುಳಿ ನಿಂಬೆಹಣ್ಣಿನ ಮೊರೆ ಹೊಗ್ತಿದ್ದಾರೆ. ಈಗ ಮಳೆಗಾಲ ಇರುವ ಕಾರಣ ನಿಂಬೆ ಹಣ್ಣು ಬೆಲೆ ತುಂಬಾ ಕಡಿಮೆ, ಎರಡು ರೂಪಾಯಿಗೆ ನಿಂಬೆಹಣ್ಣು ಸಿಗುತ್ತಿದೆ ಅಂತ ಚಿತ್ರನ್ನದಿಂದ ಹಿಡಿದು ಕೆಲವು ಅಡುಗೆಗೆ ನಿಂಬೆಹಣ್ಣಿನ ಹುಳಿ ಬಳಸುತ್ತಿದ್ದಾರೆ. ಒಟ್ಟಿನಲ್ಲಿ ಹುಳಿರಾಣಿ ಟೊಮ್ಯಾಟೊ ಬದಲು ಗೃಹಿಣಿಯರು ಈಗ ಹುಳಿರಾಜ ನಿಂಬೆಹಣ್ಣಿನ ಮೊರೆ ಹೋಗಿದ್ದು, ಅಡುಗೆಗೆ ಟೊಮ್ಯಾಟೊ ಬದಲು ನಿಂಬೆಹಣ್ಣು ಬಳಸುತ್ತಿದ್ದಾರೆ.

CM Siddaramaiah: ನಿತಿನ್ ಗಡ್ಕರಿಯನ್ನುಭೇಟಿಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ

Annabhagya: ಅಕ್ಕಿ ಬದಲು ರೊಕ್ಕ ಕೊಡೋದು ಬ್ಯಾಡ್ರಿ ಜೋಳ ಕೊಡ್ರಿ

 

- Advertisement -

Latest Posts

Don't Miss