Friday, October 18, 2024

Latest Posts

ಗಗನಕ್ಕೇರಿದ ಟೊಮ್ಯಾಟೊ ಬೆಲೆ: ಗ್ರಾಹಕರು ಕಂಗಾಲು..!

- Advertisement -

Hubballi News:ಹುಬ್ಬಳ್ಳಿ: ತರಕಾರಿಗಳ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೆ ಏರುತ್ತಿದ್ದು, ಮಾರುಕಟ್ಟೆಗೆ ಹೋದರೇ ಅಬ್ಬಾ! ತರಕಾರಿಗಳ ಬೆಲೆ ಇಷ್ಟೊಂದು ಆಗಿದೆಯಾ ಎಂದು ಗ್ರಾಹಕರು ಬಾಯಿ ಮೇಲೆ ಬೆರಳು ಇಟ್ಟುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಮುಂಜಾನೆ ಅಲ್ಪಪೋಪಹಾರದಿಂದ ಹಿಡಿದು ರಾತ್ರಿಯ ಭೋಜನಕ್ಕೂ ತರಕಾರಿಗಳೇ ಬಹುತೇಕ ಬೇಕಾಗಿರುತ್ತದೆ. ಆದರೆ ಮುಂಗಾರು ಕೈ ಕೊಟ್ಟ ಹಿನ್ನೆಲೆಯಲ್ಲಿ ತರಕಾರಿ ಇಳುವರಿ ತೀವ್ರ ಪ್ರಮಾಣದಲ್ಲಿ ಇಳಿಕೆಯಾಗಿದೆ. ಕೆಲವೆಡೆ ಕಡಿಮೆ ಪ್ರಮಾಣದಲ್ಲಿ ತರಕಾರಿಗಳ ಬೆಳೆದಿರುವುದರಿಂದಾಗಿ ಬೆಲೆ ಗಗನಕ್ಕೆ ಏರಿದೆ.

ಸದ್ಯ ತರಕಾರಿಗಳಿಗೆ ಬಂಗಾರದ ಬೆಲೆ ಬಂದಂತಾಗಿದ್ದು, ಈ ಹಿಂದೆ ಟೊಮೆಟೊ ಬೆಲೆ 20-30 ಇದ್ದಿದ್ದು, ಇದೀಗ ದಿಢೀರ್ 100-120 ರ ಗಡಿ ದಾಟಿದರೇ, ಮೆಣಸಿನಕಾಯಿ 40-50 ಇದ್ದೀದ್ದು, ಈಗ 100 ನೂರರ ಗಡಿಗೆ ಬಂದು ನಿಂತಿದ್ದು, ಡೊಣ್ಣಗಾಯಿ 80-90, ಬದನೆಕಾಯಿ 80-100, ಬೆಂಡಿಕಾಯಿ 50-60, ಹಿರೇಕಾಯಿ 60-70, ಸೌತೆಕಾಯಿ 60-70, ಚವಳಿಕಾಯಿ 50-60 ಹಾಗಲಕಾಯಿ 50-60, ಗಜ್ಜರಿ 50-60, ಹಾಗಲಕಾಯಿ 50-60 ಹೀಗೆ ತರಕಾರಿಗಳ ಬೆಲೆ ಕೇಳಿದರೇ ತಲೆ ತಿರುಗುವಂತಾಗಿದ್ದು, ಗ್ರಾಹಕರು ಖರೀದಿಗೆ ಹಿಂದೇಟು ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ವಾಣಿಜ್ಯ ನಗರಿ ಹುಬ್ಬಳ್ಳಿಯ ಜನತಾ ಬಜಾರ್, ದುರ್ಗದಬೈಲ್, ಹಳೇ ಹುಬ್ಬಳ್ಳಿಯ ಮಾರುಕಟ್ಟೆ ಸೇರಿದಂತೆ ವಿವಿಧೆಡೆ ತರಕಾರಿಗಳನ್ನು ಕೊಳ್ಳಲು ಗ್ರಾಹಕರು ಹಿಂದೇಟು ಹಾಕುವಂತಾಗಿದ್ದು, ಏನಪ್ಪಾ ಇದು ತರಕಾರಿಗಳಿಗೆ ಇಷ್ಟೊಂದು ಹಣ ಖರ್ಚು ಮಾಡಿದರೇ ಮುಂದಿನ ಜೀವನ ಸಾಗಿಸುವುದಾದರೂ ಹೇಗೆ ಎಂಬ ಪ್ರಶ್ನೆ ಸಹಜವಾಗಿ ಮೂಡುವಂತಾಗಿದೆ.

ಬೆಲೆ ಕೇಳಿದರೇ ತಿನ್ನಂಗಿಲ್ಲ ಸೊಪ್ಪು:
ತರಕಾರಿಗಳ ಬೆಲೆ ಏರಿಕೆಯ ಮಧ್ಯೆಯು ಸೊಪ್ಪು ನಾನೇನು ಕಮ್ಮಿ ಎನ್ನುವಂತೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ.

ಇದೀಗ ಕರಿಬೇವಿನ 1 ಕೆಜಿ ಬೆಲೆ ಇದೀಗ 100 ರಿಂದ 110 ತಲುಪಿದ್ದು, 100 ಕಟ್ಟು ಕೊತಂಬರಿ ಗೆ 800 ರಿಂದ 1000 ಗಡಿ ತಲುಪಿದೆ. ಮೆಂತೆ 800 ರಿಂದ 1000 ಆಗಿದ್ದು, ಪುದೀನಾ 500 ರಿಂದ 600 ತಲುಪಿದೆ. ಮೂಲಂಗಿ 500 ರ ಗಡಿ ದಾಟಿದರೇ, ಪಾಲಕ್ ಕೂಡಾ 500 ರೂ. ದಾಟಿದೆ.

ತರಕಾರಿ ಬೆಲೆ ಏರಿಕೆಯಿಂದಾಗಿ ತರಕಾರಿಗಳನ್ನು ಖರೀದಿ ಮಾಡಲು ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ. ಕೆಲವರಂತೂ ತರಕಾರಿ ಬೆಲೆ ಕೇಳಿ 1 ಕೆಜಿ ಟೊಮ್ಯಾಟೊ, ಮೆಣಸಿನಕಾಯಿ ತಗೊಳೊವವರು 250 ಗ್ರಾಂ ಕೊಡಿ ಸಾಕು ಅಂತಾರೆ. ಇಲ್ಲಾ ಅಂದರೆ ಮರಳಿ ಹೋಗುತ್ತಾರೆ. ಹೀಗಾದರೇ ನಾವು ಜೀವನ ಹೇಗೆ ನಡೆಸಬೇಕೆಂದು ಅಳಲು ತೊಡಿಕೊಂಡಿದ್ದಾರೆ ವ್ಯಾಪರಸ್ಥರಾದ
ಹನಮವ್ವ.

ಇನ್ನೂ ತರಕಾರಿಗಳ ಬೆಲೆ ಕೇಳಿದ್ರೆ ಮಾರುಕಟ್ಟೆಗೆ ಬರಲು ನೊರೆಂಟು ಸಲಾ ವಿಚಾರ ಮಾಡುವಂತಹ ಸನ್ನಿವೇಶ ಎದುರಾಗಿದೆ. ಮುಂಗಾರು ಮಳೆ ಕೊರತೆ ಹಿನ್ನೆಲೆ ತರಕಾರಿಗಳ ಬೆಲೆ ಏರಿಕೆಯಾಗಿದೆ. ಈ ನಿಟ್ಟಿನಲ್ಲಿ ಜೀವನ ನಡೆಸುವುದೇ ದುಸ್ಥರವಾಗಿದೆ ಎನ್ನುತ್ತಾರೆ
ಗ್ರಾಹಕ ಶೇಖಪ್ಪ.‌

ಒಟ್ಟಿನಲ್ಲಿ ತರಕಾರಿ ಬೆಲೆ ಏರಿಕೆಯಿಂದ ಜನಸಾಮಾನ್ಯರ ಜೇಬಿಗೆ ಕತ್ತರಿ ಬಿದ್ದಿದ್ದು, ಇನ್ನು ಯಾವಾಗ ಬೆಲೆ ಕಡಿಮೆಯಾಗುತ್ತೋ ಎಂದು ಗ್ರಾಹಕರು ಚಿಂತೆಯಲ್ಲಿದ್ದಾರೆ.

ಹುಬ್ಬಳ್ಳಿ – ಧಾರವಾಡ ಪಾಲಿಕೆ ಆಯುಕ್ತರಾಗಿ ಭರತ್ ಎಸ್ ನೇಮಕ: NWKRTCಯಿಂದ HDMCಗೆ…!

ವಾಹನ ಸವಾರರಿಗೆ ಗುಡ್ ನ್ಯೂಸ್..?!

ಟೊಮ್ಯಾಟೋ ತೋಟಕ್ಕೆ ಕನ್ನ ಹಾಕಿದ ಕಳ್ಳರು..!

- Advertisement -

Latest Posts

Don't Miss