ಚಳಿಗಾಲದಲ್ಲಿ ಹೆಚ್ಚು ಟೀ – ಕಾಫಿ ? ಹಾಗಿದ್ರೆ ಅಪಾಯ ತಪ್ಪಿದ್ದಲ್ಲ !

ಹವಾಮಾನ ತಂಪಾಗಿರುವಾಗ ಒಂದು ಕಪ್ ಬಿಸಿ ಕಾಫಿ ಅಥವಾ ಚಹಾ ಕುಡಿಯಬೇಕೆನಿಸುವುದು ಸಹಜ. ಚಳಿಯಲ್ಲಿ ಬಿಸಿ ಪಾನೀಯಗಳನ್ನು ಸಿಪ್ ಮಾಡುವುದು ಒಂದು ವಿಶೇಷ ಅನುಭವ. ಆದರೆ ಚಳಿಯನ್ನು ತಡೆಯಲು ಮತ್ತು ಸೋಮಾರಿತನ ಹೋಗಲಾಡಿಸಲು ಅದನ್ನು ಅತಿಯಾಗಿ ಸೇವಿಸುವ ಅಭ್ಯಾಸ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ತಜ್ಞರು ಎಚ್ಚರಿಸುತ್ತಾರೆ.

ಚಳಿಗಾಲದಲ್ಲಿ ಜನರು ಬಿಸಿ ಆಹಾರ ಮತ್ತು ಪಾನೀಯಗಳಿಗೆ ಹೆಚ್ಚು ಒತ್ತು ಕೊಡುತ್ತಾರೆ. ವಿಶೇಷವಾಗಿ ಟೀ ಮತ್ತು ಕಾಫಿ ಚಳಿಯಲ್ಲಿ ದೇಹಕ್ಕೆ ತಾತ್ಕಾಲಿಕವಾಗಿ ತಾಪ ನೀಡುತ್ತವೆ. ಆದರೆ ದಿನದುದ್ದಕ್ಕೂ ಇವುಗಳನ್ನು ಅತಿಯಾಗಿ ಕುಡಿಯುವುದರಿಂದ ದೇಹಕ್ಕೆ ಅನೇಕ ರೀತಿಯಲ್ಲಿ ಹಾನಿಯಾಗಬಹುದು. ಹಾಗಾಗಿ ಈ ಕಾಲದಲ್ಲಿ ಆರೋಗ್ಯದ ಬಗ್ಗೆ ಹೆಚ್ಚುವರಿ ಕಾಳಜಿ ಅಗತ್ಯ.

ಅತಿಯಾದ ಚಹಾ ಮತ್ತು ಕಾಫಿ ಸೇವನೆಯಿಂದ ಮೂಳೆ ಸಂಬಂಧಿತ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ವಿಶೇಷವಾಗಿ ಮೊಣಕಾಲಿನ ನೋವು ಹೆಚ್ಚಾಗುವ ಸಾಧ್ಯತೆ ಇದೆ. ಇದಲ್ಲದೆ ಹಸಿವು ಕಡಿಮೆಯಾಗುವುದು, ಅಗತ್ಯ ಪೌಷ್ಟಿಕಾಂಶಗಳ ಲಾಭ ಕಡಿಮೆಯಾಗುವುದು ಮತ್ತು ದೇಹದ ಶಕ್ತಿಯ ಮಟ್ಟದ ಮೇಲೂ ದುಷ್ಪ್ರಭಾವ ಬೀರುತ್ತವೆ. ಆದ್ದರಿಂದ ಆರೋಗ್ಯಕರ ಆಹಾರ, ಹಣ್ಣುಗಳು ಮತ್ತು ಬಿಸಿ ನೀರಿನ ಸೇವನೆ ಉತ್ತಮ.

ದಿನಕ್ಕೆ ಹೆಚ್ಚು ಎಂದರೆ ಎರಡು ಕಪ್‌ಗಿಂತ ಹೆಚ್ಚು ಚಹಾ ಅಥವಾ ಕಾಫಿ ಸೇವಿಸುವುದು ತಪ್ಪು. ಅದನ್ನು ಮೀರಿಸಿದರೆ ಅನೇಕ ರೀತಿಯ ಸಮಸ್ಯೆಗಳ ಸಂಭವ ಹೆಚ್ಚುತ್ತದೆ. ತೂಕ ಕಡಿಮೆ ಮಾಡಲು ಯತ್ನಿಸುತ್ತಿರುವವರು ಈ ಪಾನೀಯಗಳನ್ನು ಸಾಧ್ಯವಾದಷ್ಟು ಕಡಿಮೆ ಅಥವಾ ಸಂಪೂರ್ಣವಾಗಿ ಬಿಟ್ಟುಬಿಡುವುದು ಉತ್ತಮ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ…

ವರದಿ : ಗಾಯತ್ರಿ ನಾಗರಾಜ್

About The Author