Friday, July 18, 2025

Latest Posts

2ನೇ ವಾರಕ್ಕೆ ಟಾಪ್ 1 – ಕರ್ಣನ ರೇಟಿಂಗ್ ಎಷ್ಟು?

- Advertisement -

ಕರ್ಣ ಧಾರಾವಾಹಿ ಶುರುವಾಗಿ ಕೆಲವೇ ದಿನಗಳಾದ್ರು ಜನಪ್ರಿಯತೆ ಜೋರಾಗಿದೆ. TRP ರಾಕೆಟ್ ವೇಗದಲ್ಲಿದ್ದು ಎರಡಂಕಿ ದಾಟಿದೆ. ಜನಮನ ಗೆದ್ದಿರುವ ಜೀ ಕನ್ನಡ ವಾಹಿನಿಯ ‘ಕರ್ಣ’ ಧಾರಾವಾಹಿ ಈಗಾಗಲೇ ಪ್ರಥಮ ಸ್ಥಾನದಲ್ಲಿದೆ. ಕನ್ನಡ ಕಿರುತೆರೆಯ ಟಿಆರ್‌ಪಿಯಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದೆ.

ಜೀ ಕನ್ನಡ ವಾಹಿನಿಯಲ್ಲಿ ಹೊಸದಾಗಿ ಆರಂಭವಾದ “ಕರ್ಣ” ಧಾರಾವಾಹಿಯು ಪ್ರಾರಂಭದಲ್ಲಿಯೇ ಕೆಲ ಅಡೆತಡೆಗಳನ್ನು ಎದುರಿಸಿತ್ತು. ಆದರೆ ಆ ಎಲ್ಲಾ ಕಷ್ಟಗಳನ್ನು ಮೀರಿ, ಧಾರಾವಾಹಿಯು ಈಗ ಜನಮನ ಗೆದ್ದಿದೆ.

ಕರ್ಣ ಸೀರಿಯಲ್‌ನಲ್ಲಿ ಕಿರಣ್ ರಾಜ್, ಭವ್ಯಾ ಗೌಡ ಮತ್ತು ನಮ್ರತಾ ಗೌಡ ಅವರು ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದಾರೆ. ಅವರ ಅಭಿನಯ, ಧಾರಾವಾಹಿಯ ಶೈಲಿ, ಹಾಡುಗಳು, ಫೈಟ್ ಸೀನ್‌ಗಳು, ದೃಶ್ಯಕಲೆ, ಕಥೆಯ ತಿರುವುಗಳು ಎಲ್ಲವೂ ಪ್ರೇಕ್ಷಕರಿಗೆ ನೇರವಾಗಿ ಹೃದಯವನ್ನೂ ತಟ್ಟಿದೆ. ಈಗ ಈ ಧಾರಾವಾಹಿ 10+ ಟಿಆರ್‌ಪಿ ಪಡೆದು, ಎರಡನೇ ವಾರಕ್ಕೂ ಅಗ್ರ ಸ್ಥಾನದಲ್ಲಿದೆ ಎಂಬುದು ಒಂದು ದೊಡ್ಡ ಸಾಧನೆ.

ಕರ್ಣನ ನಂತರ ಎರಡನೇ ಸ್ಥಾನದಲ್ಲಿ ‘ಅಣ್ಣಯ್ಯ’ ಧಾರಾವಾಹಿ ಇದೆ. ವಿಕಾಶ್ ಉತ್ತಯ್ಯ ಮತ್ತು ನಿಶಾ ರವಿಕೃಷ್ಣನ್ ಅವರ ಅಭಿನಯವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಕುಟುಂಬ, ಬಂಧಗಳ ಬಗ್ಗೆ ಹೇಳುವ ಈ ಕಥೆಯೂ ದೊಡ್ಡ ಮಟ್ಟದಲ್ಲಿ ಜನಪ್ರಿಯವಾಗಿದೆ.

ಮೂರನೇ ಸ್ಥಾನದಲ್ಲಿ ‘ಲಕ್ಷ್ಮೀ ನಿವಾಸ’ ಧಾರಾವಾಹಿಯು ಮುನ್ನಡೆಯುತ್ತಿದೆ. ಈ ಧಾರಾವಾಹಿಯು ಸುಂದರ ಮನೆತನದ ಕಥೆ, ಸಂಸ್ಕೃತಿಯ ಸಾರವನ್ನೂ ಒದಗಿಸುತ್ತಿದೆ.

ನಾಲ್ಕನೇ ಸ್ಥಾನ ಪಡೆದಿರುವ ‘ನಾನಿನ್ನ ಬಿಡಲಾರೆ’ ಎಂಬ ಧಾರಾವಾಹಿ ಒಂದು ವಿಭಿನ್ನ ಪ್ರಯೋಗ. ಹಾರರ್ ಶೈಲಿಯ ಕಥೆ, ಮಾಟ-ಮಂತ್ರದ ಹಿನ್ನಲೆ, ಕಠಿಣ ಕಥಾ ತಿರುವುಗಳಿಂದ ಇದು ಗಮನ ಸೆಳೆದಿದೆ.

ಐದನೇ ಸ್ಥಾನದಲ್ಲಿ ‘ಅಮೃತಧಾರೆ’ ಇದೆ. ಇತ್ತೀಚೆಗೆ ಬಂದಿರುವ ಕಥಾ ತಿರುವುಗಳು, ಉದ್ವಿಗ್ನ ಪ್ರಸಂಗಗಳು, ಪ್ರೇಕ್ಷಕರ ಗಮನ ಸೆಳೆದಿದೆ.

ಜನರ ಬೆಂಬಲ, ಮೆಚ್ಚುಗೆ, ಟಿಆರ್‌ಪಿ ಇವೆಲ್ಲವನ್ನೂ ಹೇಗೆ ಮುಂದುವರೆಸುತ್ತಾರೆ ಅನ್ನೋದು ಇದೀಗ ‘ಕರ್ಣ’ ಧಾರಾವಾಹಿ ತಂಡಕ್ಕೆ ಸವಾಲು ಎದುರಾಗಿದೆ. ಮುಂದಿನ ವಾರಗಳಲ್ಲಿ ಇಡೀ ಧಾರಾವಾಹಿಗಳ ರೇಸ್ ಹೇಗಿರುತ್ತೆ, ‘ಕರ್ಣ’ ತಮ್ಮ ಸ್ಥಾನ ಕಾಯ್ದುಕೊಳ್ಳುತ್ತಾ? ಎಂಬ ಕುತೂಹಲವೇ ಇಡೀ ಧಾರಾವಾಹಿ ಜಗತ್ತಿಗೆ ಹೊಸ ಉತ್ಸಾಹ ತಂದಿದೆ.

- Advertisement -

Latest Posts

Don't Miss