Sunday, July 20, 2025

Latest Posts

112ಗೆ ಕರೆ ಮಾಡಿದ ಮಹಿಳೆಗೆ ಟಾರ್ಚರ್!

- Advertisement -

ನಂಬಿಕೆ, ಭದ್ರತೆ, ರಕ್ಷಣೆ ನಾವು ಇವನ್ನೆಲ್ಲಾ ನೋಡಿದಾಗ ಪೊಲೀಸ್ ಡಿಪಾರ್ಟ್ಮೆಂಟ್‌ ಜೊತೆ ಕನೆಕ್ಟ್ ಮಾಡ್ತೀವಿ. ಆದರೆ ರಕ್ಷಣೆಗೆ ಕರೆ ಮಾಡಿದ ಮಹಿಳೆಗೆ, ಇದೆ ಪೊಲೀಸರಿಂದಲೇ ಭಯಾನಕ ಅನುಭವ ಆಗತ್ತೆ ಅಂದ್ರೆ ಹೇಗಿರುತ್ತೆ? 112ಕ್ಕೆ ಕರೆ ಮಾಡಿದ ಮಹಿಳೆಯನ್ನು ರಕ್ಷಿಸಬೇಕಾದ ಪೊಲೀಸರು, ಹೇಗೆ ಆಕೆಯ ನಂಬಿಕೆಯನ್ನು ದುರ್ಬಳಕೆ ಮಾಡಿಕೊಂಡು ಆಕೆಯ ಜೀವನವೇ ಹಾಳು ಮಾಡಿದ್ರು ಅನ್ನೋದನ್ನ ಹೇಳ್ತಿವಿ ನೋಡಿ.

ಮಹಿಳೆಯೊಬ್ಬರು ತಮ್ಮ ಊರಲ್ಲಿ ನಡೆದ ಗಲಾಟೆ ಕುರಿತು 112 ಎಮರ್ಜೆನ್ಸಿ ಹೆಲ್ಪ್‌ಲೈನ್ ಗೆ ಕರೆ ಮಾಡುತ್ತಾರೆ. ಅದೇ ವೇಳೆಗೆ ಡ್ಯೂಟಿಯಲ್ಲಿ ಇದ್ದ ಪೊಲೀಸ್ ಕಾನ್ಸ್‌ಟೇಬಲ್‌ ಪುಟ್ಟಸ್ವಾಮಿ, 112 ವಾಹನದ ಚಾಲಕನಾಗಿ ಸ್ಥಳಕ್ಕೆ ಹೋಗ್ತಾನೆ. ಈ ನಡುವೆ, ಮಹಿಳೆಯ ಫೋನ್ ನಂಬರ್ ಪಡೆದು, ಮಹಿಳೆಯ ಜೊತೆಗೆ ಸಂಪರ್ಕ ಕಾಯ್ದುಕೊಂಡಿದ್ದಾನೆ.

ಮಹಿಳೆಯು ರಕ್ಷಣೆಗಾಗಿ ಕರೆ ಮಾಡಿದ ಅಧಿಕಾರಿಯೇ, ಆಕೆಯ ವಿಶ್ವಾಸವನ್ನು ದುರ್ಬಳಕೆ ಮಾಡಿಕೊಂಡಿದ್ದಾನೆ. ಪೊಲೀಸ್ ಪೇದೆ ಪುಟ್ಟಸ್ವಾಮಿ ಸಲುಗೆ ಬೆಳಸಿಕೊಂಡು, ಆಕೆಯ ಮನೆಗೆ ಹೋಗಿ ನಾಲ್ಕು ಬಾರಿ ಅತ್ಯಾಚಾರ ದೌರ್ಜನ್ಯ ಎಸಗಿದ್ದಾನೆ ಅನ್ನೋ ಆರೋಪವಿ. ಇದು ಎಷ್ಟು ಭಯಾನಕ ಅಂದ್ರೆ, ಆಕೆಯ ಒಪ್ಪಿಗೆಯಿಲ್ಲದೇ, ಆಕೆಯ ಮನೆಯಲ್ಲಿ ಇಂಥ ಕೃತ್ಯ ನಡೆದಿದೆ ಎನ್ನಲಾಗಿದೆ.

ಅಲ್ಲದೆ, ಆತ ಮಹಿಳೆಯಿಂದ ಒಟ್ಟು 12 ಲಕ್ಷ ರೂಪಾಯಿಗಳಷ್ಟು ಹಣವನ್ನು ವಂಚಿಸಿದ್ದಾನೆ ಎಂಬ ಗಂಭೀರ ಆರೋಪ ಕೂಡ ಕೇಳಿಬಂದಿದೆ. ಆಕೆಯ ಬಂಗಾರವನ್ನು ಅಡವಿಟ್ಟು ಹಣ ಕೊಟ್ಟಿದ್ದಾಳೆ. ಆದರೆ, ನಂತರ ಆಕೆ ಹಣ ಹಿಂದಿರುಗಿಸುವಂತೆ ಕೇಳಿದಾಗ, ಪುಟ್ಟಸ್ವಾಮಿ ದರ್ಪ ಮೆರೆದು ಕಿಡಿಕಾರಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಎಲ್ಲ ಅನ್ಯಾಯ, ಶೋಷಣೆ, ಬಲಾತ್ಕಾರ, ಹಣ ವಂಚನೆಯ ನಂತರ ಆಕೆ ಮಾನಸಿಕವಾಗಿ ಕುಸಿದು ಬಿದ್ದಿದ್ದಾಳೆ. ತನ್ನ ಮನೆಯಲ್ಲಿ ಆತ್ಮಹತ್ಯೆಗೆ ಕೂಡ ಯತ್ನಿಸಿದ್ದಾಳೆ ಎನ್ನಲಾಗಿದೆ. ಆದರೆ ಅದೃಷ್ಟವಶಾತ್ ಆಕೆಯ ಪ್ರಾಣ ಉಳಿದಿದೆ. ಇದರಿಂದ ತೀವ್ರ ಅಸ್ವಸ್ಥಗೊಂಡ ಮಹಿಳೆ ಕೊನೆಗೆ ರಾಮನಗರದ ಎಂ.ಕೆ. ದೊಡ್ಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರು ದಾಖಲಾದ ನಂತರ, ಪೇದೆ ಪುಟ್ಟಸ್ವಾಮಿ ತಕ್ಷಣವಾಗಿ ತಲೆಮರೆಸಿಕೊಂಡಿದ್ದಾನೆ. ತನ್ನ ಮೊಬೈಲ್ ನ್ನು ಆಫ್ ಮಾಡಿ ಹತ್ತಿರವಿಲ್ಲದ ಕಡೆಗೆ ಓಡಿದ್ದಾನೆ. ಆದರೆ ದೂರು ದಾಖಲಾದ ಕೂಡಲೇ, ಎಸ್‌ಪಿ ಶ್ರೀನಿವಾಸ ಗೌಡ ಅವರ ಆದೇಶದಂತೆ ಪೇದೆ ಪುಟ್ಟಸ್ವಾಮಿಯನ್ನು ಅಮಾನತು ಮಾಡಲಾಗಿದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss