Thursday, October 16, 2025

Latest Posts

ಮುಕ್ಕಲ್ ಗ್ರಾಮದ ಬಾಹುಬಲಿ..!

- Advertisement -

www.karnatakatv.net :ಹುಬ್ಬಳ್ಳಿ: ಅಧುನಿಕ ಯುಗದಲ್ಲಿನ  ಕಸರತ್ತು ಕಣ್ಮರೆಯಾಗುತ್ತಿವೆ. ಟ್ರ್ಯಾಕ್ಟರ್ ನ್ನು ತನ್ನ ಹೆಗಲಿಗೆ ಕಟ್ಟಿದ  ಹಗ್ಗದ ಮೂಲಕ ಎಳೆಯುವ ಮೂಲಕ ಸಾಹಸವನ್ನು ಮುಕ್ಕಲ್ ಗ್ರಾಮದ ವ್ಯಕ್ತಿಯೋಬ್ಬ ಮಾಡಿದ್ದಾನೆ.  

ಮುಂಡಗೋಡ ತಾಲ್ಲೂಕಿನ ಇಂದೂರ ಕೊಪ್ಪ ಗ್ರಾಮದಲ್ಲಿ ಟ್ರ್ಯಾಕ್ಟರ್ ಎಳೆಯುವ ಸ್ಪರ್ಧೆಯಲ್ಲಿ 1ನಿಮಿಷದಲ್ಲಿ 1ನೂರ ಮೂವತ್ತು ಫೂಟ್ ಎಳೆಯುವ ಮೂಲಕ ಎಲ್ಲರ ಕಣ್ಣು ತನ್ನತ್ತ ನೋಡುವಂತೆ ಮಾಡಿದ್ದಾನೆ. ಇನ್ನೂ ಮುಕ್ಕಲ್ ಗ್ರಾಮದ ಯುವ ಉತ್ಸಾಹಿ ಕೃಷ್ಣಪ್ಪ ಅವರನ್ನು ಮುಕ್ಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ನಿಂಗರೆಡ್ಡಿ ನಡುವಿನಮನಿ ನೇತೃತ್ವದಲ್ಲಿ ಗ್ರಾಮಸ್ಥರು ಸನ್ಮಾನಿಸಿ ಅಭಿನಂದನೆ ಸಲ್ಲಿಸಿದ್ದಾರೆ. ಪೆಟ್ರೋಲ್ ಖಾಲಿಯಾಗಿ ರಸ್ತೆಯಲ್ಲಿ ನಿಂತಿರುವ ಬೈಕ್ ತಳ್ಳಿಕೊಂಡು ಬರಲು ಹೆಣಗಾಡುವ ದಿನಮಾನಗಳಲ್ಲಿ ಈ ವ್ಯಕ್ತಿ ನೂರಾರು ಕೆಜಿ ತೂಕದ ಟ್ರ್ಯಾಕ್ಟರ್ ಅನ್ನು ತನ್ನ ಹೆಗಲಿಗೆ ಹಗ್ಗ ಕಟ್ಟಿಕೊಂಡು ಎಳೆಯುವ ಮೂಲಕ ಸಾಹಸ ಪ್ರದರ್ಶನ ಮಾಡಿದ್ದಾರೆ.

ಒಟ್ಟಿನಲ್ಲಿ ಹೆಗಲಿಗೆ ಹಗ್ಗ ಕಟ್ಟಿಕೊಂಡು ಟ್ರ್ಯಾಕ್ಟರ್ ಎಳೆದಿರುವ ಈ ಬಾಹುಬಲಿ ಸಾಹಸ ಎಲ್ಲೆಡೆಯೂ ಸಾಕಷ್ಟು ಸದ್ದು ಮಾಡುತ್ತಿದ್ದು, ಈ ವ್ಯಕ್ತಿಯ ಸಾಧನೆ‌ಗೆ ಎಲ್ಲೆಡೆಯೂ ಪ್ರಶಂಸೆ ವ್ಯಕ್ತವಾಗುತ್ತಿದೆ.

ಕರ್ನಾಟಕ ಟಿವಿ- ಹುಬ್ಬಳ್ಳಿ

- Advertisement -

Latest Posts

Don't Miss