Friday, October 18, 2024

Latest Posts

ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡೋರಿಗೆ ಮತ್ತೊಂದು ಶಾಕ್….!

- Advertisement -

ಬೆಂಗಳೂರು(ಫೆ.11): ಬೆಂಗಳೂರು ಟ್ರಾಫಿಕ್ ಸಮಸ್ಯೆ ಅಂದ್ರೆ ಅದು ಎಂದಿಗೂ ಮುಗಿಯದ ಮಾತು. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಜನಸಂಖ್ಯೆಯ ಮಧ್ಯೆ ಸ್ವಲ್ಪ ಯಾಮಾರಿದರೆ, ಟ್ರಾಫಿಕ್​ ರೂಲ್ಸ್ ಬ್ರೇಕ್ ಮಾಡಿದರೆ, ಖಂಡಿತವಾಗಲೂ ಹಣ ಪಾವತಿ ಮಾಡಲೇ ಬೇಕಾಗುವುದು ನಿಜ,  ಆದ್ರೆ ಇತ್ತೀಚೆಗೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದರೆ, ಕೇವಲ ಶೇ.50 ರಷ್ಟು ಅಷ್ಟೇ ಹಣ ಪಾವತಿ ಮಾಡಬೇಕು ಎಂದು ಸರ್ಕಾರ ನಿಯಮ ತಂದಿತ್ತು. ಇದೀಗ, ಇವತ್ತಿಗೆ ಶೇ.50 ರಷ್ಟು ಹಣ ಪಾವತಿ ಮಾಡುವ ನಿಯಮ ಕೊನೆ ದಿನವಾಗಲಿದೆ. ಇನ್ನೇನಿದ್ರೂ ಪೂರ್ತಿ ಹಣ ಕೊಡಬೇಕಾಗುತ್ತದೆ.

ನಗರದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ದಂಡ ಪಾವತಿಸುವವರಿಗೆ ಶೇ. 50 ವಿನಾಯಿತಿ ಘೋಷಣೆ ಮಾಡಿದ ಬೆನ್ನಲ್ಲೇ ವಾಹನ ಸವಾರರು ದಂಡ ಪಾವತಿಸಲು ಮುಗಿಬಿದ್ದಿದ್ದಾರೆ. ಹೀಗೆ ಸರ್ಕಾರದ ಬೊಕ್ಕಸಕ್ಕೆ ಕೋಟಿ ಕೋಟಿ ಹಣ ಹರಿದು ಬಂದಿದೆ. ಇದರೊಂದಿಗೆ 31.11 ಲಕ್ಷ ಪ್ರಕರಣಗಳಲ್ಲಿ 85‌.83 ಕೋಟಿ ರೂಪಾಯಿ ಹಣ ಕಲೆಕ್ಷನ್ ಆಗಿದೆ. 50% ರಿಯಾಯಿತಿಯಲ್ಲಿ ದಂಡ ಪಾವತಿಗೆ ಇಂದು ಕೊನೆಯ ದಿನವಾಗಿದೆ.

ಈ ಹಿನ್ನೆಲೆಯಲ್ಲಿ ಸಂಚಾರ ನಿಮಯ ಉಲ್ಲಂಘಿಸಿದ ವಾಹನ ಸವಾರರು ಕಳೆದ ಎರಡು ದಿನಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ದಂಡ ಪಾವತಿ ಮಾಡುತ್ತಿದ್ದಾರೆ. ಇಂದು ಕೊನೆ ದಿನವಾಗಿದ್ದರಿಂದ ದಂಡದ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ಇದರ ಮೇರೆಗೆ ಕಾನೂನು ಸೇವೆಗಳ ಪ್ರಾಧಿಕಾರ, ರಾಜ್ಯಾದ್ಯಂತ ಸಂಚಾರ ಪೊಲೀಸರು ದಾಖಲಿಸಿರುವ ಸಂಚಾರ ಉಲ್ಲಂಘನೆ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ.50 ವಿನಾಯಿತಿ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.

- Advertisement -

Latest Posts

Don't Miss