ಹುಬ್ಬಳ್ಳಿ: ವಾಹನ ಸವಾರರು ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ದಂಡ ಕಟ್ಟುವುದು ಹೊಸದೇನಲ್ಲ.ಆದರೆ ಪೊಲೀಸರೇ ನಿಯಮ ಉಲ್ಲಂಘಿಸಿದ್ರೆ ಏನ್ ಮಾಡ್ಬೇಕು. ಆದರೆ ಇಲ್ಲೊಬ್ಬ ಟ್ರಾಫಿಕ್ ಪೋಲಿಸ್ ಹೆಲ್ಮೆಟ್ ಇಲ್ಲದೆ ರಸ್ತೆಗಿಳಿದ ಪೊಲೀಸಪ್ಪನಿಗೆ ದಂಡ ಹಾಕಿದ ಘಟನೆ ಹುಬ್ಬಳಿಯ ಶಿರೂರು ಪಾರ್ಕ್ ನಲ್ಲಿ ನಡೆದಿದೆ.
ಅನೇಕ ಬಾರಿ ಪೊಲೀಸರೇ ರೂಲ್ಸ್ ಬ್ರೇಕ್ ಮಾಡ್ತಾರೆ ಸಿಗ್ನಲ್ ಜಂಪ್ ಮಾಡೋದು, ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸೋದು ಹೀಗೆ ಅನೇಕ ನಿಯಮಗಳನ್ನು ಪೊಲೀಸರು ಕೂಡ ಉಲ್ಲಂಘನೆ ಮಾಡ್ತಾ ಇರ್ತಾರೆ ಅದಕ್ಕೆ ಏನು ಮಾಡೋದು ಎಂದು ಜನರು ಸಾಮಾಜಿಕ ಜಾಲತಾಣಗಳಲ್ಲಿ ದೂರುತ್ತಿರುತ್ತಾರೆ ?
ಹುಬ್ಬಳ್ಳಿ ನಗರದ ರಸ್ತೆಗಳಲ್ಲಿ ಪೊಲೀಸಪ್ಪ ಹೆಲ್ಮೆಟ್ ಧರಿಸದೆ ಬೈಕನಲ್ಲಿ ಹೋಗುತ್ತಿದ್ರು. ಈ ವೇಳೆ ರೂಲ್ಸ್ ಬ್ರೇಕ್ ಮಾಡ್ತಿರೋದು ಟ್ರಾಫಿಕ್ ಪೊಲೀಸ್ ಕಣ್ಣಿಗೆ ಬಿದ್ದಿದೆ. ಪೊಲೀಸ್ ರೂಲ್ಸ್ ಬ್ರೇಕ್ ಮಾಡಿದ್ದಕ್ಕೆ ಈ ದಂಡ ವಿಧಿಸಲಾಗಿದೆ. ಹುಬ್ಬಳ್ಳಿ ಧಾರವಾಡ ಸಿಟಿ ಪೋಲೀಸ್ ಫೇಸ್ಬುಕ್ ಮತ್ತೆ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ಫೈನ್ ಹಾಕಿದ ಬೈಕ್ ಮತ್ತು ರಶೀದಿಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಫೋಟೋ ಅಪ್ಲೋಡ್ ಮಾಡುತ್ತಿದ್ದಂತೆಯೆ ಅನೇಕರು ಇದಕ್ಕೆ ರೀ ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಂತಹ ಕೆಲಸವನ್ನು ಇನ್ನು ಹೆಚ್ಚಾಗಿ ಮಾಡ್ಬೇಕಿದೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ. ನಿಯಮಗಳು ಪ್ರತಿಯೊಬ್ಬರಿಗೂ ಅನ್ವಯವಾಗುತ್ತದೆ. ದಯಮಾಡಿ ಸಂಚಾರ ನಿಯಮಗಳನ್ನು ಅನುಸರಿಸಿ ಎಂದು ಹುಬ್ಬಳ್ಳಿ – ಧಾರವಾಡ ಪೊಲೀಸರು ತಿಳಿಸಿದ್ದಾರೆ.
DKS Question: ಶಾಸಕರು ನೋವು ಹೇಳಿಕೊಳ್ಳುವುದರಲ್ಲಿ ತಪ್ಪೇನಿದೆ?: ಡಿಸಿಎಂ ಶಿವಕುಮಾರ್ ಪ್ರಶ್ನೆ