Banglore News : ಬೆಂಗಳೂರು ಫಾಸ್ಟ್ ಪ್ಯಾಸೆಂಜರ್ ರೈಲು ಸಂಚಾರ ಆರಂಭಿಸಿ ಆಗಸ್ಟ್ .3ಕ್ಕೆ 10 ವರ್ಷ ಪೂರೈಸಿದ ಹಿನ್ನೆಲೆ ತುಮಕೂರು- ಬೆಂಗಳೂರು ರೈಲ್ವೆ ಪ್ರಯಾಣಿಕರ ವೇದಿಕೆ ಪದಾಧಿಕಾರಿಗಳು ನಗರ ರೈಲು ನಿಲ್ದಾಣದಲ್ಲಿ ಇಂದು ಫಾಸ್ಟ್ ಪ್ಯಾಸೆಂಜರ್ ರೈಲಿನ ಹುಟ್ಟು ಹಬ್ಬವನ್ನಾಚರಿಸಿ ಸಂಭ್ರಮಿಸಲಾಯಿತು.
ತುಮಕೂರು ರೈಲು ನಿಲ್ದಾಣದಿಂದ ಬೆಂಗಳೂರಿಗೆ ತೆರಳುವ ಫಾಸ್ಟ್ ಪ್ಯಾಸೆಂಜರ್ ರೈಲು ಸಂಚಾರ ಆರಂಭವಾಗಿ 10 ವರ್ಷ ಸಂದಿರುವ ಸಂಭ್ರಮವನ್ನು ಪ್ರತಿ ವರ್ಷದಂತೆ ಈ ವರ್ಷವೂ ವೇದಿಕೆಯಿಂದ ವಿಶೇಷವಾಗಿ ಆಚರಿಸಲಾಯಿತು.
ರೈಲನ್ನು ಬಾಳೆ ಕಂದು, ಮಾವಿನ ತೋರಣ, ಬಲೂನ್ ಹಾಗೂ ಬಣ್ಣಬಣ್ಣದ ಹೂವುಗಳಿಂದ ಸಿಂಗರಿಸಲಾಗಿತ್ತು. ರೈಲ್ವೆ ಲೋಕೋ ಪೈಲೆಟ್‌ಗಳಿಂದ ಕೇಕ್ ಕತ್ತರಿಸಿ, ನೆರೆದಿದ್ದ ಪ್ರಯಾಣಿಕರಿಗೆ ಸಿಹಿ ಹಂಚಲಾಯಿತು.
ನಿತ್ಯದ ಜಂಜಾಟದ ನಡುವೆ ಫಾಸ್ಟ್ ಪ್ಯಾಸೆಂಜರ್ ರೈಲಿನ ಸಂಭ್ರಮಾಚರಣೆ ಮಾಡುತ್ತಿರುವುದು ಪ್ರಯಾಣಿಕರಲ್ಲಿ ಉತ್ಸಾಹ, ಸಂತೋಷ ಉಂಟು ಮಾಡಿದೆ.
Narendra Modi : ಮಂಗಳೂರು: ಆಗಸ್ಟ್ 6ರಂದು ಅಂತರಾಷ್ಟ್ರೀಯ ಮಟ್ಟದ ರೈಲು ನಿಲ್ದಾಣಕ್ಕೆ ಪ್ರಧಾನಿಯವರಿಂದ ಶಿಲಾನ್ಯಾಸ
Lal bagh: ನಾಳೆ ಲಾಲ್ ಬಾಗ್ ನಲ್ಲಿ ಫವರ್ ಶೋ ಉದ್ಗಾಟಿಸಲಿರುವ ಸಿದ್ದರಾಮಯ್ಯ..!




