www.karnatakatv.net :ತುಮಕೂರು : ಇತ್ತೀಚೆಗೆ ಯುವ ಸಮುದಾಯ ಕೃಷಿಯತ್ತ ಒಲವು ತೋರಿಸುತ್ತಿರೋ ನಿಟ್ಟಿನಲ್ಲಿ ಯುವಕರಿಗೆ ಪ್ರಯೋಜನವಾಗಲೆಂದು ಪಶುವೈದ್ಯಕೀಯ ಇಲಾಖೆಯ ಸಹಯೋಗದೊಂದಿಗೆ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಕೇಂದ್ರವೂ, ಸುಮಾರು 20ಕ್ಕೂ ಹೆಚ್ಚು ಯುವಕರಿಗೆ ಎರಡು ದಿನಗಳ ಕಾಲ ತರಬೇತಿ ನೀಡಿ ಪ್ರಮಾಣ ಪತ್ರ ವಿತರಿಸಿದ್ರು.
ಹೌದು, ಪಶುವೈದ್ಯಕೀಯ ಪರೀಕ್ಷಕರ ತರಬೇತಿ ಕೇಂದ್ರ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯು ಯುವಕರಿಗೆ ಮತ್ತು ರೈತರಿಗಾಗಿ ಇದೇ ಆಗಸ್ಟ್ 30 ಮತ್ತು 31 ರಂದು ಎರಡು ದಿನಗಳ ಕುರಿ ಮತ್ತು ಮೇಕೆ ಸಾಕಾಣಿಕೆ ಕಾರ್ಯಗಾರ ಹಮ್ಮಿಕೊಂಡಿತ್ತು.
ಈ ವೇಳೆ ಮಾತನಾಡಿದ ಕಾರ್ಯಗಾರದ ಮುಖ್ಯಸ್ಥರಾದ ನಾಗಣ್ಣ, ಯುವಕರು ಹೆಚ್ಚು ಹೆಚ್ಚಾಗಿ ಕೃಷಿಯತ್ತ ಒಲವು ತೋರುತ್ತಿದ್ದಾರೆ. ಹೈನುಗಾರಿಕೆ, ಮೇಕೆ ಮತ್ತು ಕುರಿ ಸಾಕಾಣಿಕೆಯಡೆಗೂ ಆಕರ್ಷಿತರಾಗುತ್ತಿದ್ದಾರೆ. ಹೀಗಾಗಿ ಅಂತ ಯುವಕರಿಗೆ ತರಬೇತಿ ನೀಡಲೆಂದು ಕೇಂದ್ರಲ್ಲಿ ನೊಂದಾವಣೆ ಪ್ರಾರಂಭಿಸಿದ್ದೆವು. ಅದ್ರಂತೆ ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತ ಯುವಕರು ಆಗಮಿಸಿ ತರಬೇತಿ ಪಡೆದಿದ್ದಾರೆ. ಕುರಿ ಮತ್ತು ಮೇಕೆ ಸಾಕಾಣಿಕೆಗೆ ಸಬ್ಸಿಡಿ ಲೋನ್ ಸಿಗಲಿದ್ದು, ಇದರ ಸದುಪಯೋಗ ಪಡೆದುಕೊಳ್ಳಲು ಯುವ ಜನತೆಗೆ ಕರೆ ನೀಡಿದ್ರು.
ತರಬೇತಿ ಸಂದರ್ಭದಲ್ಲಿ ಆಗಮಿಸಿದ್ದ ಯುವಕರಿಗೆ ಉಚಿತವಾಗಿ ಊಟ ನೀಡಲಾಗಿದ್ದು, ಎರಡು ದಿನಗಳ ಕಾರ್ಯಗಾರದ ಬಳಿಕ ಪ್ರಮಾಣ ಪತ್ರ ವಿತರಿಸಿ ತರಬೇತಿ ಪಡೆದ ಯುವಕರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ರು.
ದರ್ಶನ್ ಕೆಡಿಆರ್, ತುಮಕೂರು