Special News:
ಆಧುನಿಕ ಜಗತ್ತಿನಲ್ಲಿ ಅಸಾಧ್ಯ ಎಂಬುವುದು ಅಪರೂಪ ಇದೀಗ ತೃತೀಯ ಲಿಂಗಿಯೊಬ್ಬಳು ತನ್ನ ಅಪರೂಪದ ಪ್ರಾಣಿ ಪ್ರೀತಿಗೆ ತನ್ನ ದೇಹವನ್ನೇ ವಿಭಿನ್ನವಾಗಿ ಬದಲಾಯಿಸಿಕೊಂಡಿದ್ದಾರೆ. ತಾನು ಅತೀವವಾಗಿ ಪ್ರೀತಿಸುವ ಡ್ರಾಗನ್ ಪ್ರಾಣಿಯಂತೆ ಕಾಣಬೇಕೆಂಬ ಬಯಕೆಯಿಂದ ಯಾವುದೇ ರೀತಿಯ ಹಿಂಜರಿಕೆ ಭಯ ಇಲ್ಲದೆ ಮುಖವನ್ನು ಸಂಪೂರ್ಣವಾಗಿ ಡ್ರಾಗನ್ ರೂಪಕವಾಗಿ ಬದಲಾಯಿಸಿ ತನ್ನ ಮುಖದಲ್ಲಿನ ಮೂಗಿನ ಹೊಳ್ಳೆ ಹಾಗು ಕಿವಿಯ ಹೊಳ್ಳೆಯನ್ನೇ ಕತ್ತರಿಸಿ ಬಿಟ್ಟಿದ್ದಾರೆ.
ಮಾಜಿ ಬ್ಯಾಂಕರ್ ಟಿಯಾಮತ್ ಇವಾ ಮೆಡುಸಾ ಎಂಬ ಮಹಿಳೆ ಡ್ರ‍್ಯಾಗನ್ ರೂಪಕ್ಕೆ ಬದಲಾದವರು. ಈ ರೀತಿಯ ಮನುಷ್ಯರನ್ನು ಥೆರಿಯನ್ಸ್ ಎಂದು ಕರೆಯಲಾಗುತ್ತದೆ. ಈಕೆ ಡ್ರ‍್ಯಾಗನ್‌ನಂತೆ ಕಾಣಲು ತನ್ನ ಮೂಗಿನ ಹೊಳ್ಳೆ, ಕಿವಿಗಳನ್ನು ತೆಗೆದು ಹಾಕಿದ್ದಾಳೆ. ಕಣ್ಣನ್ನು ಹಸಿರು ಬಣ್ಣಕ್ಕೆ ಬದಲಾಯಿಸಿಕೊಂಡಿದ್ದು, ಕೊಂಬು ಮತ್ತು ಹಚ್ಚೆ ಮಾಪಕದಿಂದ ದೇಹವನ್ನು ಡ್ರ‍್ಯಾಗನ್ ರೂಪಕ್ಕೆ ಪರಿವರ್ತಿಸಿಕೊಂಡಿದ್ದಾಳೆ. ಇನ್ನು ಕವಲೊಡೆದ ನಾಲಿಗೆಯನ್ನು ಪಡೆದುಕೊಳ್ಳಲು ಆಕೆ ಸಾವಿರಾರು ಪೌಂಡ್‌ಗಳನ್ನು ಖರ್ಚು ಮಾಡಿದ್ದಾಳೆ.