Dharwad News: ಧಾರವಾಡ: ಧಾರವಾಡದ ಮುಮ್ಮಿಗಟ್ಟಿ ಗ್ರಾಮದ ಶಾಲೆಯ ಶಿಕ್ಷಕಿ, ವರ್ಗಾವಣೆಗೊಂಡಿದ್ದು, ಆಕೆಯನ್ನು ಬಿಳ್ಕೋಡುವಾಗ ವಿದ್ಯಾರ್ಥಿಗಳು ಕಣ್ಣೀರಿಟ್ಟಿದ್ದಾರೆ.
ಗೀತಾ ಸುರೇಶ್ ಬೆಟಗೇರಿ ಎಂಬ ಶಿಕ್ಷಕಿ ವರ್ಗಾವಣೆಗೊಂಡಿದ್ದು, ನಮ್ಮನ್ನು ಬಿಟ್ಟು ಹೋಗಬೇಡಿ ಎಂದು ಮಕ್ಕಳುಕಣ್ಣೀರಿಟ್ಟಿದ್ದಾರೆ. ಕಳೆದ 30 ವರ್ಷದಿಂದ ಮುಮ್ಮಿಗಟ್ಟಿ ಶಾಲೆಯಲ್ಲಿ ಈ ಶಿಕ್ಷಕಿ ಸೇವೆ ಸಲ್ಲಿಸಿದ್ದು, ಈಗ ಧಾರವಾಡದ ಗಾಂಧಿನಗರ ಬಡಾವಣೆಯ ಶಾಲೆಗೆ ವರ್ಗಾವಣೆಯಾಗಿದೆ.
ಈ ಹಿನ್ನೆಲೆಯಲ್ಲಿ ಶಿಕ್ಷಕಿ ಗೀತಾರನ್ನು ಬೀಳ್ಕೊಡಲು ಸಮಾರಂಭ ಮಾಡಲಾಗಿತ್ತು, ಈ ಸಮಾರಂಭದಲ್ಲಿ ಮಕ್ಕಳು, ನಮ್ಮನ್ನು ಬಿಟ್ಟು ಹೋಗಬೇಡಿ ಎಂದು ಕಣ್ಣೀರು ಹಾಕಿದ್ದಾರೆ. ಏಕೆಂದರೆ ಗೀತಾ ಗ್ರಾಮಸ್ಥರ ಮತ್ತು ಮಕ್ಕಳ ಮೆಚ್ಚಿನ ಶಿಕ್ಷಕಿಯಾಗಿದ್ದರು. ಅಲ್ಲದೇ ಶಾಲೆ ಮತ್ತು ಮಕ್ಕಳ ಸುಧಾರಣೆಗೆ ಶಿಕ್ಷಕಿ, ಸಾಕಷ್ಟು ಕೊಡುಗೆ ನೀಡಿದ್ದರು. ಹಾಗಾಗಿ ಮಕ್ಕಳಿಗೆ ಈಕೆ ವರ್ಗಾವಣೆಗೊಂಡು ಹೋಗುತ್ತಿದ್ದಾರೆಂಬ ಬಗ್ಗೆ ಬೇಸರವಿತ್ತು.
ಹಾಗಾಗಿ ಮಕ್ಕಳು ಕಣ್ಣೀರಿಟ್ಟಿದ್ದು, ಮಕ್ಕಳ ಕಣ್ಣೀರು ನೋಡಿ ಶಿಕ್ಷಕಿಯರು ಭಾವುಕರಾಗಿದ್ದಾರೆ. ಇದಾದ ಬಳಿಕ ಗ್ರಾಮದಲ್ಲಿ ಸಾರೋಟದ ಮೇಲೆ ಈ ಶಿಕ್ಷಕಿಯನ್ನು ಕೂರಿಸಿ, ಅದ್ಧೂರಿ ಮೆರವಣಿಗೆ ಮಾಡಿ ಬೀಳ್ಕೊಟ್ಟಿದ್ದಾರೆ.




