Wednesday, September 24, 2025

Latest Posts

ಬೆಳಗಾವಿಗೆ ಗಿಫ್ಟ್ ಕೊಟ್ಟ ಸಾರಿಗೆ ಸಚಿವ – ಬೆಳಗಾವಿಗೆ 300 ಹೊಸ ಬಸ್‌ಗಳು!

- Advertisement -

ಬೆಳಗಾವಿ ಜಿಲ್ಲೆಯಲ್ಲಿ ಹೊಸ ಬಸ್‌ಗಳಿಗೆ ಬೇಡಿಕೆ ಇದೆ. ಇನ್ನು ಮುಂದೆ 300 ಹೊಸ ಬಸ್ ಗಳು, 100 ಎಲೆಕ್ಟಿಕಲ್‌ ಬಸ್‌ಗಳು ಬರಲಿದೆ. ಬೆಳಗಾವಿ ಜಿಲ್ಲೆಯಲ್ಲಿನ ಬಸ್‌ಗಳ ಕೊರತೆಯಿಂದಾಗಿ ಸಾರ್ವಜನಿಕರು ಪರದಾಡುತ್ತಿದ್ದಾರೆ. ಇನ್ನು ಮುಂದೆ ಆ ಸಮಸ್ಯೆ ಪರಿಹಾರವಾಗಲಿದೆ. ಶೀಘ್ರದಲ್ಲೇ 300 ಹೊಸ ಬಸ್‌ಗಳನ್ನು ಜಿಲ್ಲೆಗೆ ಒದಗಿಸಲಾಗುವುದು. ಇದರ ಪೈಕಿ 100 ಎಲೆಕ್ಟ್ರಿಕ್ ಬಸ್‌ಗಳು ಇರಲಿವೆ. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಇದು ಅನುಕೂಲವಾಗಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರು ಹೇಳಿದರು.

ಸಾರಿಗೆ ಇಲಾಖೆಯಲ್ಲಿ ಇನ್ನೂ ಸಿಬ್ಬಂದಿ ಕೊರತೆ ಇದೆ. ಆದರೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ನಗರ ಬಸ್ ನಿಲ್ದಾಣ ಶೀಘ್ರ ಲೋಕಾರ್ಪಣೆಗೊಳ್ಳಲಿದೆ.
ಈ ವರ್ಷದಂತ್ಯಕ್ಕೆ ₹15,000 ಕೋಟಿ ಆದಾಯ ಸಂಗ್ರಹ ಗುರಿ ಹೊಂದಿದ್ದು, ಎಲ್ಲ ಸಿಬ್ಬಂದಿ ಶ್ರಮಿಸಬೇಕು.

ಬೆಳಗಾವಿ ಮತ್ತು ಚಿಕ್ಕೋಡಿ ವಿಭಾಗಗಳಿಗೆ 200 ಹೊಸ ಬಸ್‌ಗಳ ಅಗತ್ಯವಿದೆ. ಬಸ್‌ಗಳ ಕೊರತೆಯಿಂದ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ. ಈ ಕುರಿತು ತ್ವರಿತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಬೆಳಗಾವಿಯ ಸಾರಿಗೆ ಬೃಹತ್ ಬದಲಾವಣೆಯ ಹಾದಿಯಲ್ಲಿದೆ. ಹೊಸ ಕಟ್ಟಡ, ಹೊಸ ಬಸ್‌ಗಳು, ಮತ್ತು ಸುರಕ್ಷಾ ಕ್ರಮಗಳ ಜಾರಿಗೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳೊಂದಿಗೆ ಸಾರ್ವಜನಿಕರಿಗೆ ಒಳಿತಾಗುವ ಯೋಜನೆಗಳು ಆರಂಭವಾಗುತ್ತಿವೆ. ಈ ಗತಿಯು ಮುಂದುವರಿದರೆ ಬೆಳಗಾವಿ ಜಿಲ್ಲೆಯ ಸಾರಿಗೆ ವ್ಯವಸ್ಥೆ ಉಳಿದ ಭಾಗಗಳಿಗೆ ಮಾದರಿಯಾಗುವ ನಿರೀಕ್ಷೆ ಇದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss