Thursday, August 7, 2025

Latest Posts

ಇಂದು ‘ತ್ರಿಬಲ್ ರೈಡಿಂಗ್’ ಟ್ರೇಲರ್ ಬಿಡುಗಡೆ

- Advertisement -

 

ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ತ್ರಿಬಲ್ ರೈಡಿಂಗ್ ಚಿತ್ರದ ಟ್ರೇಲರ್ ಇಂದು ಬಿಡುಗಡೆಯಾಗಿದೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನಡೆದಿದ್ದು,ಚಿತ್ರ ಬಿಡುಗಡೆಗೆ ಸಜ್ಜಾಗಿದೆ.

ಇನ್ನು ಬಿಡುಗಡೆ ಸಂದರ್ಭದಲ್ಲಿ ಖ್ಯಾತ ಹಾಸ್ಯ ನಟ ಸಾಧು ಕೋಕಿಲ ಎಲ್ಲರೊಂದಿಗೆ ಡ್ಯಾನ್ಸ್ ಮಾಡಿ ಮನರಂಜಿಸಿದರು. ಟ್ರಿಬಲ್ ರೈಡಿಂಗ್ ಮಹೇಶ್ ಗೌಡ ನಿರ್ದೇಶನದ ರೋಮ್ಯಾಂಟಿಕ್ ಆಕ್ಷನ್ ಎಂಟರ್ ಟೈನರ್ ಚಿತ್ರವಾಗಿದೆ. ಚಿತ್ರದಲ್ಲಿ ಗಣೇಶ್, ಮೇಘಾ ಶೆಟ್ಟಿ, ರಚನಾ ಇಂದರ್ ಮತ್ತು ಅದಿತಿ ಪ್ರಭುದೇವ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಅಡುಗೆ ಮನೆಯಲ್ಲಿ ಈ ವಸ್ತುಗಳನ್ನು ಬಳಸಿದರೆ..ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚುತ್ತದೆ ಎಚ್ಚರ..!

ಸಾಧು ಕೋಕಿಲ, ಕುರಿ ಪ್ರಾತಾಪ್, ರವಿಶಂಕರ್, ರಂಗಾಯಣ ರಘು, ಶೋವರಾಜ್ ಮತ್ತು ಅನೇಕರು ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಂಗೀತವನ್ನು ಸಾಯಿ ಕಾರ್ತಿಕ್ ಸಂಯೋಜಿಸಿದ್ದು, ಜೈ ಆನಂದ್ ಅವರ ಛಾಯಾಗ್ರಹಣ ಮತ್ತು ಕೆ.ಎಂ ಪ್ರಕಾಶ್ ಸಂಕಲನ ಮಾಡಿದ್ದಾರೆ. ಕೃಪಾಲು ಎಂಟರ್ ಟೈನ್ ಮೆಂಟ್ ಬ್ಯಾನರ್ ಅಡಿಯಲ್ಲಿ ರಾಮಗೋಪಾಲ್ ವೈ ಎಂ ಈ ಚಿತ್ರವನ್ನು ನಿರ್ಮಿಸಿದ್ದಾರೆ.

 

ತಮಿಳುನಾಡಿನ 14 ಜನ ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ

- Advertisement -

Latest Posts

Don't Miss