Tuesday, April 15, 2025

Latest Posts

ಕೊರೊನಾ ವಾರಿಯರ್ಸ್‌ಗೆ ಪುಷ್ಪಾಲಂಕಾರದ ಮೂಲಕ ಗೌರವ ಸಲ್ಲಿಕೆ

- Advertisement -

ಮಂಡ್ಯ: ಬೆಂಗಳೂರಿನ ವಿಧಾನಸೌಧದ ಬಳಿ ಕೊರೊನಾ ವಾರಿಯರ್ಸ್‌ಗೆ ಪುಷ್ಪಾಲಂಕಾರದ ಮೂಲಕ ಗೌರವ ಸಲ್ಲಿಸಲಾಯಿತು.

ತೋಟಗಾರಿಕೆ ಇಲಾಖೆ ಸಹಭಾಗಿತ್ವದಲ್ಲಿ ಫ್ಲವರ್ ಕೌನ್ಸಿಲ್ ಆಫ್ ಇಂಡಿಯಾ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ತೋಟಗಾರಿಕಾ ಸಚಿವ ನಾರಾಯಣಗೌಡ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಗೌರವ ಸಮರ್ಪಿಸಿದರು.

ಬೆಂಗಳೂರಿನ ವಿವಿಧೆಡೆ ಇಂದಿನಿಂದ ಮೂರು ದಿನಗಳ ಕಾಲ ಪುಷ್ಪಾಲಂಕರದ ಮೂಲಕ ಗೌರವ ಸಮರ್ಪಣೆ ಮಾಡಲಾಗುತ್ತಿದ್ದು, 1 ಲಕ್ಷದ 72 ಸಾವಿರ ಹೂಗಳನ್ನ ಬಳಸಿ ಅಲಂಕಾರ ಮಾಡಲಾಗುತ್ತಿದೆ.

ಕಾರ್ಯಕ್ರಮದಲ್ಲಿ ಎಸಿಎಸ್ ವಂದಿತ ಶರ್ಮ, ತೋಟಗಾರಿಕೆ ಇಲಾಖೆ ಕಾರ್ಯದರ್ಶಿ ರಾಜೇಂದ್ರ ಕಠಾರಿಯಾ, ತೋಟಗಾರಿಕೆ ಇಲಾಖೆ ನಿರ್ದೇಶಕ ವೆಂಕಟೇಶ್ ಮತ್ತಿತರರು ಭಾಗಿಯಾಗಿದ್ದರು.

- Advertisement -

Latest Posts

Don't Miss