Tuesday, July 22, 2025

Latest Posts

ತೃತೀಯ ಲಿಂಗಿಗಳ ವಿರುದ್ಧ ಪೊಲೀಸರ ದೌರ್ಜನ್ಯ..?: ಲಿಂಗ ಪತ್ತೆ ಹಚ್ಚಲು ವಿವಸ್ತ್ರಗೊಳಿಸಿದ ಆರೋಪ..!

- Advertisement -

ಅಗರ್ತಲಾ: ನಾಲ್ಕು ಜನ ತೃತೀಯ ಲಿಂಗಿಗಳನ್ನು ಬಂಧಿಸಿದ ಪೊಲೀಸರು, ಅವರು ತೃತೀಯ ಲಿಂಗಿಗಳು ಹೌದೋ ಅಲ್ಲವೋ ಎಂದು ಸಾಬೀತುಪಡಿಸಲು ಆ ನಾಲ್ವರನ್ನು ವಿವಸ್ತ್ರಗೊಳಿಸಿದ್ದರೆಂದು ಆರೋಪಿಸಲಾಗಿದೆ. ಅರೆಸ್ಟ್ ಆದ ನಾಲ್ವರಲ್ಲಿ ಒಬ್ಬರು ಈ ಬಗ್ಗೆ ಮತ್ತೊಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅಲ್ಲದೇ, ಅವರು ಧರಿಸುವ ಬಟ್ಟೆ ಬಗ್ಗೆಯೂ ವಿರೋಧ ಪಡಿಸಿದ್ದು, ಇನ್ನು ಮುಂದೆ ಅವರು ಕ್ರಾಸ್ ಡ್ರೆಸ್ ಧರಿಸಿ ಎಲ್ಲಿಯೂ ಓಡಾಡಬಾರದು, ಎಲ್ಲಾದರೂ ಅವರು ಕ್ರಾಸ್ ಡ್ರೆಸ್ ಧರಿಸಿ ಓಡಾಡಿದರೆ, ಅವರನ್ನ ಜೈಲಿಗೆ ಹಾಕಲಾಗುವುದು ಎಂದು ಹೇಳಿದ್ದಾರೆ.

ಶನಿವಾರ ರಾತ್ರಿ ಈ ನಾಲ್ವರು ಪಾರ್ಟಿ ಮುಗಿಸಿ ಹೊಟೇಲ್‌ನಿಂದ ಬರುತ್ತಿರುವಾಗ ಈ ಘಟನೆ ನಡೆದಿದ್ದು, ಸೋಮವಾರದ ತನಕ ನಾಲ್ವರನ್ನು ಜೈಲಿನಲ್ಲಿ ಇರಿಸಲಾಗಿತ್ತು. ಇನ್ನು ತಮ್ಮ ಮೇಲೆ ಸುಲಿಗೆ ಮಾಡಿದ ಆರೋಪ ಹೊರಿಸಿ, ಅಗರ್ತಲಾದಲ್ಲಿರುವ ಮಹಿಳಾ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಮಹಿಳಾ ಮತ್ತು ಪುರುಷ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ತಮ್ಮನ್ನು ವಿವಸ್ತ್ರಗೊಳಿಸಲಾಗಿದೆ. ಮತ್ತು ಸೋಮವಾರದ ದಿನ ತಮ್ಮನ್ನು ಬಿಟ್ಟು ಕಳುಹಿಸಿದರೂ ಕೂಡ, ತಮ್ಮ ಒಳ ಉಡುಪನ್ನ ಕೊಡದೇ ದೌರ್ಜನ್ಯವೆಸಗಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೇ ಈ ವಿಷಯವಾಗಿ ನಮಗೆ ನ್ಯಾಯ ಕೊಡಿಸಬೇಕಾಗಿದೆ ಎಂದು ಕೋರಿದ್ದಾರೆ. ಅಲ್ಲದೇ ಯಾವ ಪುರಾವೆ ಇಲ್ಲದೇ, ತಮ್ಮ ಮೇಲೆ ಸುಳ್ಳು ಆರೋಪ ಹೊರಿಸಿದ್ದಾರೆ ಎಂದು ಹೇಳಿದ್ದಾರೆ.

ಅಲ್ಲದೇ ಆ ಪೊಲೀಸರ ಜೊತೆ ಫೋಟೋಜರ್ನಲಿಸ್ಟ್ ಕೂಡ ಇದ್ದರು. ಅವರು ಪಾರ್ಟಿಯಲ್ಲಿ ನಮ್ಮ ಜೊತೆ ಡಾನ್ಸ್ ಮಾಡಲು ಯತ್ನಿಸಿದರು, ಆದರೆ ನಾವದಕ್ಕೆ ಒಪ್ಪಲಿಲ್ಲ. ಅವರು ನಮ್ಮನ್ನು ಗೇಲಿ ಮಾಡಿದ ಕಾರಣಕ್ಕೆ ನಾವು ಅವರಿಂದ ದೂರ ಬಂದೆವು. ಆ ಕಾರಣಕ್ಕೆ ನಾವು ಪಾರ್ಟಿ ಮುಗಿಸಿ ಬರುವಾಗ, ನಮ್ಮನ್ನು ಹಿಂಬಾಲಿಸಿಕೊಂಡು ಬಂದು, ಪೊಲೀಸರೊಂದಿಗೆ ಸೇರಿ, ಸುಳ್ಳು ಆರೋಪ ಮಾಡಿ ನಮ್ಮನ್ನು ಜೈಲಿಗೆ ಹಾಕಿದ್ದಾರೆ. ಮತ್ತು ನಮ್ಮ ಲಿಂಗ ಪತ್ತೆ ಮಾಡಿ ನಮ್ಮ ಗೌಪ್ಯತೆಯ ಹಕ್ಕನ್ನು ಉಲ್ಲಂಘಿಸಿದ್ದಾರೆಂದು ತೃತೀಯ ಲಿಂಗಿಯಲ್ಲಿ ಒಬ್ಬರು ಆರೋಪಿಸಿದ್ದಾರೆ.

ಈ ಆರೋಪದ ಕುರಿತು ಹೇಳಿಕೆ ನೀಡಲು ಅಗರ್ತಲಾದ ಪಶ್ಚಿಮ ಠಾಣೆಯ ಯಾವ ಪೊಲೀಸ್ ಅಧಿಕಾರಿ ಕೂಡ ಮುಂದೆ ಬರುತ್ತಿಲ್ಲ. ಆದರೆ ಈ ಬಗ್ಗೆ ಮಾತನಾಡಿರುವ ಇನ್ನೋರ್ವ ಪೊಲೀಸ್ ಅಧಿಕಾರಿ, ತಪ್ಪಿತಸ್ಥರಿಗೆ ಖಂಡಿತ ಶಿಕ್ಷೆಯಾಗಲಿದೆ ಎಂದು ತಿಳಿಸಿದ್ದಾರೆ.

- Advertisement -

Latest Posts

Don't Miss