Sunday, September 8, 2024

Latest Posts

ಟ್ರೂ ಕಾಲರ್ ನಲ್ಲಿ ಈಗ ಹೊಸ ಅಪ್ಲಿಕೇಶನ್….!

- Advertisement -

Technology News:

ಹೊಸ ಅಪ್ಡೇಟ್‌ ಟ್ರೂ ಕಾಲರ್‌ ಸ್ಪ್ಯಾಮ್ ಕರೆಗಳ ವಿರುದ್ಧ ರಕ್ಷಣೆಯನ್ನು ನೀಡಲಿದೆ. ಜೊತೆಗೆ ವೆರಿಫೈಡ್‌ ಬ್ಯುಸಿನೆಸ್‌ ಅನ್ನು ಗುರುತಿಸಲಿದೆ. ಇದಲ್ಲದೆ ಸ್ಪ್ಯಾಮ್ ಸಂಖ್ಯೆಗಳನ್ನು ನೈಜ ಸಮಯದಲ್ಲಿ ವರದಿ ಮಾಡಲು ಅವಕಾಶ ನೀಡಲಿದೆ. ಸ್ಪ್ಯಾಮ್‌ ಕರೆಗಳ ಬಗ್ಗೆ ರಿಪೋರ್ಟ್‌ ಮಾಡುವುದಕ್ಕೆ ಕೂಡ ಅವಕಾಶ ದೊರೆಯಲಿದೆ. ನಿಖರ ಮತ್ತು ಸಂಪೂರ್ಣ ಕರೆ ಮಾಡುವ ಐಡಿ ಮತ್ತು ಸ್ಪ್ಯಾಮ್ ಪತ್ತೆಹಚ್ಚುವಿಕೆಯನ್ನು ಅಪ್ಲಿಕೇಶನ್ ಅಭಿವೃದ್ಧಿಪಡಿಸಿದೆ.

ಇನ್ನು ಈ ಹೊಸ ಅಪ್ಲಿಕೇಶನ್ ಪ್ರವೇಶಿಸುವುದು ತುಂಬಾ ಸರಳವಾಗಿದೆ. ಬಳಕೆದಾರರು ಈಗ ಸುಲಭವಾಗಿ ಲಾಗ್ ಇನ್ ಮಾಡಬಹುದಾಗಿದೆ. ಅಪ್ಲಿಕೇಶನ್ ಮೂಲಕ ತ್ವರಿತವಾಗಿ ನ್ಯಾವಿಗೇಟ್ ಮಾಡಬಹುದಾಗಿದೆ. ಇದಲ್ಲದೆ ಅಪ್ಲಿಕೇಶನ್‌ ತೆರೆಯದೆ ನಂಬರ್‌ಗಳನ್ನು ಸರ್ಚ್‌ ಮಾಡಲು ಸಹಾಯ ಮಾಡಲಿದೆ. ಒಂದು ವೇಳೆ ನೀವು ಅಪರಿಚಿತ ಸಂಖ್ಯೆಯಿಂದ ಕರೆಯನ್ನು ಸ್ವಿಕರಿಸಿದರೆ , ನೀವು ನಿಮ್ಮ ಕರೆ ಲಾಗ್‌ಗೆ ಹೋಗಬಹುದು, ಮಾಹಿತಿ ಬಟನ್ ಟ್ಯಾಪ್ ಮಾಡಬಹುದು. ಇದರಿಂದ ನಿಮಗೆ ಕರೆ ಮಾಡಿದವರ ಹೆಸರನ್ನು ತಿಳಿಯಬಹುದು.

ಇದಲ್ಲದೆ ಟ್ರೂ ಕಾಲರ್‌ ಅಪ್ಲಿಕೇಶನ್‌ ಹೊಸ ಓಪನ್‌ ಡೋರ್ಸ್‌ ಅಪ್ಲಿಕೇಶನ್‌ ಲಾಂಚ್‌ ಮಾಡಿದೆ. ಇದು ಆಡಿಯೋ ಸೊಶೀಯಲ್‌ ಮೀಡಿಯಾ ಅಪ್ಲಿಕೇಶನ್‌ ಆಗಿರುವ ಕ್ಲಬ್‌ಹೌಸ್‌ ಮಾದರಿಯನ್ನೇ ಹೋಲುತ್ತದೆ ಎನ್ನಲಾಗಿದೆ. ಟ್ರೂ ಕಾಲರ್‌ ಪರಿಚಯಿಸಿರುವ ಓಪನ್‌ ಡೋರ್ಸ್‌ ಅಪ್ಲಿಕೇಶನ್‌ ಕೂಡ ಕಮ್ಯೂನಿಕೇಟ್‌ ಪ್ಲಾಟ್‌ಫಾರ್ಮ್‌ ಆಗಿದ್ದು, ಆಡಿಯೋ ಸಂಭಾಷಣೆಗಳನ್ನು ಪ್ರಾರಂಭಿಸಲು ಮತ್ತು ಸೇರಲು ಟ್ರೂಕಾಲರ್ ಬಳಕೆದಾರರಿಗೆ ಅವಕಾಶ ಸಿಗಲಿದೆ ಎನ್ನಲಾಗುತ್ತಿದೆ.

ಟ್ರೂ ಕಾಲರ್‌ನ ಓಪನ್‌ ಡೋರ್ಸ್‌ ಅಪ್ಲಿಕೇಶನ್‌ನಲ್ಲಿ ಆಡಿಯೋ ಸಂಭಾಷಣೆಗಳನ್ನು ನಡೆಸಬಹುದು. ಅಲ್ಲದೆ ಆಡಿಯೋ ಸಂಭಾಷಣೆಗಳಿಗೆ ಟ್ರೂ ಕಾಲರ್‌ ಬಳಕೆದಾರರು ಸೇರ್ಪಡೆಯಾಗಬಹುದಾಗಿದೆ. ಅಲ್ಲದೆ ಈ ಆಡಿಯೋ ಸಂಭಾಷಣೆಗಳು ಟ್ರೂಕಾಲರ್ ಕರೆಗಳು, ‘ನೆಟ್‌ವರ್ಕ್ ಎಫೆಕ್ಟ್’ ಮೂಲಕ ಹೆಚ್ಚಿನ ಜನರನ್ನು ಆಹ್ವಾನಿಸುತ್ತವೆ. ಇದರಲ್ಲಿ ಒಮ್ಮೆ ನೀವು ನಿಮ್ಮ ಸ್ನೇಹಿತರನ್ನು ಸಂಭಾಷಣೆಗೆ ಸೇರ್ಪಡೆ ಮಾಡಿದರೆ, ಅವರು ಅವರ ಸ್ನೇಹಿತರನ್ನು ಸೇರ್ಪಡೆ ಮಾಡುವುದಕ್ಕೆ ಅವಕಾಶವಿದೆ ಎಂದು  ಹೇಳಿದೆ.

ಓಪನ್‌ ಡೋರ್ಸ್‌ ಅಪ್ಲಿಕೇಶನ್‌ ವಿಶೇಷತೆ ಎಂದರೆ ಆಡಿಯೋ ಸಂಭಾಷಣೆಯಲ್ಲಿ ಭಾಗವಹಿಸುವವರು ಯಾರು ಕೂಡ ಪರಸ್ಪರರ ಫೋನ್ ಸಂಖ್ಯೆಗಳನ್ನು ನೋಡುವುದಕ್ಕೆ ಸಾಧ್ಯವಾಗುವುದಿಲ್ಲ. ಇದರಿಂದ ನಿಮ್ಮ ಫೋನ್‌ ನಂಬರ್‌ಗಳು ಬೇರೆಯವರಿಗೆ ದೊರಕುವ ಸಾಧ್ಯತೆಯನ್ನು ತಪ್ಪಿಸುತ್ತದೆ. ಆಡಿಯೋ ಸಂಭಾಷಣೆಯ ಸಮಯದಲ್ಲಿ ನಿಮ್ಮ ಹೆಸರುಗಳು ಮತ್ತು ಪ್ರೊಫೈಲ್ ಚಿತ್ರಗಳು ಮಾತ್ರ ಗೋಚರಿಸುತ್ತವೆ. ಅಲ್ಲದೆ ಓಪನ್‌ ಡೋರ್ಸ್‌ ಅಪ್ಲಿಕೇಶನ್‌ಗೆ ಕೇವಲ ಎರಡು ಅನುಮತಿಗಳ ಅಗತ್ಯವಿರುವುದರಿಂದ ಬಳಕೆದಾರರು ತಮ್ಮ ವೈಯಕ್ತಿಕ ಡೇಟಾದ ಮೇಲೆ ಕಂಪ್ಲೀಟ್‌ ಕಂಟ್ರೋಲ್‌ ಹೊಂದಿರುತ್ತಾರೆ ಎಂಬುವುದು  ಗಮನಾರ್ಹ.

- Advertisement -

Latest Posts

Don't Miss