ಇತ್ತೀಚಿಗೆ ಅಮೆರಿಕದ ಟೆಕ್ಸಾಸ್ ನಲ್ಲಿ 90 ಅಡಿ ಎತ್ತರದ ಬೃಹತ್ ಹನುಮಂತನ ಪ್ರತಿಮೆ ಸ್ಥಾಪನೆಯಾಗಿದೆ. ಇದನ್ನು ಸ್ಟ್ಯಾಚ್ಯೂ ಆಫ್ ಯೂನಿಯನ್ ಎಂದು ಕರೆಯಲಾಗಿದ್ದು, ಪ್ರತಿಮೆ ಭಕ್ತಿ, ಶಕ್ತಿ ಮತ್ತು ಏಕತೆಯನ್ನು ಸಂಕೇತಿಸುತ್ತದೆ. ಆದರೆ ಈಗ ಟೆಕ್ಸಾಸ್‌ನ ರಿಪಬ್ಲಿಕ್ ಪಕ್ಷದ ನಾಯಕರೊಬ್ಬರು ಹನುಮಂತನನ್ನು ಟೀಕಿಸಿದ್ದು, ಮತ್ತೊಂದು ವಿವಾದವನ್ನು ಹುಟ್ಟುಹಾಕಿದೆ.
ನಮ್ಮದು ಕ್ರಿಶ್ಚಿಯನ್ ರಾಷ್ಟ್ರ ಆದರೆ ಸುಳ್ಳು ಹಿಂದೂ ದೇವರ ಪ್ರತಿಮೆಯನ್ನು ಇಲ್ಲೇಕೆ ನಿರ್ಮಿಸಲು ಅನುಮತಿ ನೀಡಿದ್ದೇವೆ ಎಂದು ಪ್ರಶ್ನಿಸಿದ್ದಾರೆ. ಹನುಮಂತನ ಪ್ರತಿಮೆಯನ್ನು ಟೀಕಿಸಿದ್ದಲ್ಲದೆ ಇಂತಹ ಹೇಳಿಕೆ ನೀಡಿದ್ದು ಈಗ ಹಿಂದೂ ಸಮುದಾಯದಲ್ಲಿ ಆಕ್ರೋಶ ಮೂಡಿಸಿದೆ. ಸ್ಥಳೀಯ ರಿಪಬ್ಲಿಕನ್ ನಾಯಕ ಮತ್ತು ಸೆನೆಟ್ ಅಭ್ಯರ್ಥಿ ಅಲೆಕ್ಸಾಂಡರ್ ಡಂಕನ್ ಅವರ ಪ್ರತಿಮೆಯ ಕುರಿತು ಹೇಳಿಕೆಯು ಹಿಂದೂ ಸಮುದಾಯ ಮತ್ತು ಇತರರ ಭಾವನೆಗಳನ್ನು ನೋವುಂಟು ಮಾಡಿದೆ.
ರಿಪಬ್ಲಿಕನ್ ನಾಯಕ ಟೆಕ್ಸಾಸ್‌ನ ಶುಗರ್ ಲ್ಯಾಂಡ್‌ನಲ್ಲಿರುವ ಶ್ರೀ ಅಷ್ಟಲಕ್ಷ್ಮಿ ದೇವಸ್ಥಾನದಲ್ಲಿ ಹನುಮಾನ್ ಜೊತೆಗೆ ಇರುವ ವಿಗ್ರಹದ ವೀಡಿಯೊವನ್ನು ಸಹ ಹಂಚಿಕೊಂಡಿದ್ದಾರೆ. ಹಿಂದೂ ಅಮೆರಿಕನ್ ಫೌಂಡೇಶನ್ ಅವರ ಹೇಳಿಕೆಯು ಹಿಂದೂ ವಿರೋಧಿ ಎಂದು ತೀರ್ಮಾನಿಸಲಾಗಿದೆ ಮತ್ತು ಡಂಕನ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ. ಈ ವಿವಾದ ಈಗಾಗಲೇ ಭಾರತ–ಅಮೆರಿಕ ಸಂಬಂಧಗಳ ಮೇಲೆಯೂ ಪ್ರಶ್ನೆಗಳನ್ನು ಹುಟ್ಟಿಸಿದೆ.
ವರದಿ : ಲಾವಣ್ಯ ಅನಿಗೋಳ




