Tuesday, October 14, 2025

Latest Posts

ಟ್ರಂಪ್ ಜೀಮೇಲ್ ಯಡವಟ್ಟು : ಅಮಿತ್ ಶಾ ಕೊಟ್ರು ಬಿಗ್ ಹಿಂಟ್!

- Advertisement -

ಭಾರತದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಅಧಿಕೃತ ಇಮೇಲ್ ವಿಳಾಸವನ್ನು ಜೊಹೊ ಮೇಲ್ ಪ್ಲಾಟ್ಫಾರ್ಮ್ಗೆ ಬದಲಾಯಿಸಿರುವುದಾಗಿ ಬುಧವಾರ ಘೋಷಿಸಿದ್ದಾರೆ. ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಎಲ್ಲರಿಗೂ ನಮಸ್ಕಾರ, ನಾನು ನನ್ನ ಇಮೇಲ್ ವಿಳಾಸವನ್ನು ಜೊಹೊ ಮೇಲ್ಗೆ ಬದಲಾಯಿಸಿದ್ದೇನೆ. ದಯವಿಟ್ಟು ಈ ಬದಲಾವಣೆಯನ್ನು ಗಮನಿಸಿ. ಮುಂದಿನ ಎಲ್ಲ ಪತ್ರ ವ್ಯವಹಾರಗಳಿಗೆ ನನ್ನ ಹೊಸ ಇಮೇಲ್ ವಿಳಾಸ amitshah.bjp@zohomail.in ಅನ್ನು ಬಳಸಿರಿ ಎಂದು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಮೊದಲ ನೋಟಕ್ಕೆ ಈ ಟ್ವೀಟ್ ಕೇವಲ ಇಮೇಲ್ ಬದಲಾವಣೆಯ ಕುರಿತು ಎಂದೇ ತೋರುತ್ತದೆ. ಆದರೆ ಟ್ವೀಟ್ನ ಕೊನೆಯ ಸಾಲಿನಲ್ಲಿದೆ ನಿಜವಾದ ಟ್ವಿಸ್ಟ್. ಅಮಿತ್ ಶಾ ತಮ್ಮ ಪೋಸ್ಟ್ನ ಕೊನೆಯಲ್ಲಿ Thank you for your kind attention to this matter ಎಂಬ ವಾಕ್ಯವನ್ನು ಬಳಸಿದ್ದಾರೆ. ಇದು ಡೊನಾಲ್ಡ್ ಟ್ರಂಪ್ ತಮ್ಮ ಭಾಷಣಗಳ ಕೊನೆಯಲ್ಲಿ ಎಂದಿಗೂ ಬಳಸುವ ಖಾಸಗಿ ಶೈಲಿ. ಇದೇ ವಾಕ್ಯವನ್ನು ಭಾರತೀಯ ಗೃಹ ಸಚಿವರು ಬಳಸಿರುವುದು ಗಮನ ಸೆಳೆದಿದೆ. ಇದರಿಂದ ಭಾರತದ ಸ್ವದೇಶಿ ಜೊಹೊ ಮೇಲ್, ಗೂಗಲ್ ಜಿಮೇಲ್ ಮತ್ತು ಮೈಕ್ರೋಸಾಫ್ಟ್ ಔಟ್ಲುಕ್ಗೆ ನೇರವಾಗಿ ಸ್ಪರ್ಧೆ ನೀಡಲಿರುವುದು ಸ್ಪಷ್ಟವಾಗುತ್ತದೆ.

ಸ್ವದೇಶಿ ತಂತ್ರಜ್ಞಾನ ಬಳಕೆಯನ್ನು ಉತ್ತೇಜಿಸುವ ಪ್ರಧಾನಿ ನರೇಂದ್ರ ಮೋದಿಯವರ ಅಭಿಯಾನದ ಭಾಗವಾಗಿ ಈಗಾಗಲೇ ಹಲವಾರು ಸರ್ಕಾರಿ ವಿಭಾಗಗಳು ಜೊಹೊ ಪ್ಲಾಟ್ಫಾರ್ಮ್ಗಳಿಗೆ ಕ್ರಮೇಣ ತಿರುಗುತ್ತಿವೆ. ಅಮಿತ್ ಶಾ ಅವರ ಸೇರ್ಪಡೆ ಈ ಕ್ರಮಕ್ಕೆ ಮತ್ತಷ್ಟು ವೇಗ ನೀಡಲಿದೆ ಎಂಬ ನಿರೀಕ್ಷೆಯಿದೆ. ಮುಂದಿನ ದಿನಗಳಲ್ಲಿ ಇತರ ಹಿರಿಯ ಅಧಿಕಾರಿಗಳೂ ಈ ಮಾರ್ಗವನ್ನು ಅನುಸರಿಸುವ ಸಾಧ್ಯತೆ ಇದೆ.

ಇತ್ತೀಚಿನ ವಾರಗಳಲ್ಲಿ ಸ್ವದೇಶಿ ತಂತ್ರಜ್ಞಾನ ಮತ್ತು ಅಪ್ಲಿಕೇಶನ್ಗಳಿಗೆ ಹೆಚ್ಚು ಬೆಂಬಲ ದೊರೆಯುತ್ತಿರುವ ಹಿನ್ನಲೆಯಲ್ಲಿ, ಜೊಹೊ ಮೇಲ್ ಮತ್ತು ಅದರ ಸಂದೇಶ ಅಪ್ಲಿಕೇಶನ್ ಅರಟ್ಟೈ ದೇಶೀಯ ಪರ್ಯಾಯವಾಗಿ ಹೆಚ್ಚು ಜನಪ್ರಿಯತೆ ಗಳಿಸುತ್ತಿದೆ. ಇದು ಭಾರತದಲ್ಲಿ ತಯಾರಾದ ಪ್ಲಾಟ್ಫಾರ್ಮ್ಗಳತ್ತ ಸರ್ಕಾರದ ನಿಷ್ಠೆಯನ್ನು ತೋರಿಸುವ ಮಹತ್ವದ ಹೆಜ್ಜೆ ಎಂದು ವಿಶ್ಲೇಷಕರು ಹೇಳಿದ್ದಾರೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss