ಸಾಮಾನ್ಯವಾಗಿ ಎಲ್ಲರು ಮಾನಸಿಕ ಪ್ರಶಾಂತತೆಗಾಗಿ ಯೋಗಾಸನಗಳನ್ನು ಮಾಡುತ್ತಾರೆ. ಆದರೆ, ಕೆಲವು ರೀತಿಯ ಆಸನಗಳೊಂದಿಗೆ ಕೆಲವು ರೀತಿಯ ಪ್ರಯೋಜನಗಳಿವೆ. ಅನೇಕ ಜನರು ದೈಹಿಕ ಆರೋಗ್ಯಕ್ಕಾಗಿ ವ್ಯಾಯಾಮ ಮಾಡುತ್ತಾರೆ. ಆದರೆ ಕೆಲವು ಯೋಗಾಸನಗಳಿಂದ ಮಾನಸಿಕ ನೆಮ್ಮದಿಯೂ ದೊರೆಯುತ್ತದೆ.
ಬಹಳ ಮಂದಿ..ದೈಹಿಕ ಆರೋಗ್ಯಕ್ಕಾಗಿ ವ್ಯಾಯಾಮಗಳು ಮಾಡುತ್ತಾರೆ ಆದರೆ ಕೆಲವು ಯೋಗಾಸನಗಳಿಂದ ಮಾನಸಿಕ ನೆಮ್ಮದಿಯೂ ದೊರೆಯುತ್ತದೆ.ಅನೇಕ ಜನರು ಮಾನಸಿಕ ಪ್ರಶಾಂತತೆ ಇಲ್ಲದೆ ಅವರಲ್ಲಿ ಅವರೇ ಕುಂದು ಹೋಗುತ್ತಿರುತ್ತಾರೆ ,ಮಾನಸಿಕ ನೆಮ್ಮದಿಗಾಗಿ ಈ ಆಸನಗಳನ್ನು ಮಾಡಿದರೆ ತಕ್ಷಣ ವಿಶಾಂತ್ರಿ ಪಡೆಯಬಹುದು ಎನ್ನುತ್ತಾರೆ ಯೋಗ ತಜ್ಞರು, ದೈಹಿಕ ಆರೋಗ್ಯಕ್ಕಾಗಿ ಹಲವಾರು ರೀತಿಯ ವ್ಯಾಯಾಮಗಳಿವೆ ಆದರೆ ಯೋಗವು ಮಾನಸಿಕ ಆರೋಗ್ಯಕ್ಕೆ ಉತ್ತಮ ಆಯ್ಕೆಯಾಗಿದೆ. ಯೋಗದಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಮಾನಸಿಕ ಆರೋಗ್ಯದ ಬಗ್ಗೆ ಗಮನ ಹರಿಸುತ್ತಿದ್ದಾರೆ. ಇಂದಿನ ಆಧುನಿಕ ಯುಗದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಹೆಚ್ಚಿನ ಒತ್ತಡಕ್ಕೆ ಗುರಿಯಾಗುತ್ತಾನೆ ,ಪ್ರತಿಯೊಬ್ಬ ಮನುಷ್ಯನಲ್ಲೂ ಒತ್ತಡವನ್ನು ಹೆಚ್ಚಿಸುವ ಕೆಲವು ರೀತಿಯ ಸನ್ನಿವೇಶಗಳಿರುತ್ತದೆ . ಈ ಹಂತದಲ್ಲಿ ಯೋಗವು ಮಾನಸಿಕ ಆರೋಗ್ಯಕ್ಕೆ ಅಪಾರ ಪ್ರಯೋಜನಗಳನ್ನು ನೀಡುತ್ತದೆ. ಇದು ಮನಸ್ಥಿತಿ, ಏಕಾಗ್ರತೆ, ಒತ್ತಡವನ್ನು ನಿವಾರಿಸುವುದು, ಆತಂಕ, ಖಿನ್ನತೆ ಮತ್ತು ನಿದ್ರಾಹೀನತೆಯ ಲಕ್ಷಣಗಳನ್ನು ಸುಧಾರಿಸುವಂತಹ ಪ್ರಯೋಜನಗಳನ್ನು ಒದಗಿಸುತ್ತದೆ. ಆದರೆ ಮಾನಸಿಕ ಆರೋಗ್ಯಕ್ಕೆ ಉತ್ತಮ ಯೋಗಾಸನಗಳ ಬಗ್ಗೆ ತಿಳಿಯೋಣ.
ಉತ್ತಾನಾಸನ
ಮನುಷ್ಯನ ಮಾನಸಿಕ ಆರೋಗ್ಯವನ್ನು ಸುಧಾರಿಸಲು ಉತ್ತಾನಾಸನವು ತುಂಬಾ ಉಪಯುಕ್ತವಾಗಿದೆ. ಈ ಆಸನವು ಬೆನ್ನಿನ ಸ್ನಾಯುಗಳ ಮೇಲೆ ಕೆಲಸ ಮಾಡುತ್ತದೆ. ಶಕ್ತಿ ಮತ್ತು ನಮ್ಯತೆಯನ್ನು ಸುಧಾರಿಸುತ್ತದೆ. ಈ ಭಂಗಿಯಲ್ಲಿ ತಲೆ ಹೃದಯದ ಕೆಳಗಿರುತ್ತದೆ. ಉತ್ತಾನಾಸನವು ಮೆದುಳಿಗೆ ಆಮ್ಲಜನಕ-ಭರಿತ ರಕ್ತದ ಹರಿವನ್ನು ಸುಧಾರಿಸುತ್ತದೆ. ಪ್ರತಿದಿನ ಉತ್ತಾನಾಸನ ಮಾಡುವುದರಿಂದ ಆತಂಕ ಮತ್ತು ಒತ್ತಡ ಕಡಿಮೆಯಾಗುತ್ತದೆ. ಅಲ್ಲದೆ ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ.
ತೀವ್ರ ಕರನಿ ಆಸನ
ಈ ಆಸನವು ತುಂಬಾ ಸರಳವಾಗಿದೆ. ಈ ಆಸನವನ್ನು ಮಾಡುವುದರಿಂದ ವ್ಯಕ್ತಿಯಲ್ಲಿ ಆತಂಕ ಕಡಿಮೆಯಾಗುತ್ತದೆ. ಇದು ಮನಸ್ಸನ್ನು ಶಾಂತವಾಗಿಡಲು ಸಹಾಯ ಮಾಡುತ್ತದೆ. ನರಮಂಡಲವನ್ನು ಉತ್ತೇಜಿಸುತ್ತದೆ. ವಿಪರೀತ ಕರಣಿಯು ರಕ್ತದ ಹರಿವನ್ನು ಸಹ ನಿಯಂತ್ರಿಸುತ್ತದೆ. ಈ ಆಸನವು ಖಿನ್ನತೆ ಮತ್ತು ನಿದ್ರಾಹೀನತೆಗೆ ಉಪಯುಕ್ತವಾಗಿದೆ.
ಶವಾಸನ
ಈ ಆಸನವು ಮನುಷ್ಯನಿಗೆ ಬಹಳ ಪ್ರಶತತೆಯನ್ನು ಕೊಡುತ್ತದೆ. ಸುಮ್ಮನೆ ಮಲಗುವುದು ಉಸಿರು ತೆಗೆದುಕೊಂಡಂತೆ ಅಲ್ಲ. ಈ ಆಸನವನ್ನು ಮಾಡಲು ಕೆಲವು ವಿಧಾನಗಳಿವೆ. ಅವರನ್ನು ಅನುಸರಿಸಿ ಮತ್ತು ಈ ಆಸನವನ್ನು ಮಾಡಿ. ಈ ಆಸನವು ಮಾನಸಿಕ ಆರೋಗ್ಯವನ್ನು ಹೆಚ್ಚಿಸಲು ಮತ್ತು ದೇಹವನ್ನು ವಿಶ್ರಾಂತಿ ಮಾಡಲು ಅದ್ಭುತವಾಗಿದೆ .