Friday, November 22, 2024

Latest Posts

ಮಂಗಳವಾರ ಹನುಮನ ಕೃಪೆಗೆ ಪಾತ್ರರಾಗಬೇಕಾದರೆ ಹೀಗೆ ಪೂಜಿಸಿ….!

- Advertisement -

Devotional story:

ಒಂದೊಂದು ವಾರ ಒಂದೊಂದು ದೇವರಿಗೆ ಪೂಜಿಸುವುದು ಹಿಂದೂ ಸಂಪ್ರದಾಯದಲ್ಲಿ ಪ್ರಾಚೀನ ಕಾಲದಿಂದ ನಡೆದುಕೊಂಡು ಬಂದಿದೆ. ಹಾಗೆಯೇ ಮಂಗಳವಾರ ಹನುಮಂತನನ್ನು ಭಕ್ತಿ, ಶ್ರದ್ದೆ ಇಂದ ಭಕ್ತರು ಪೂಜಿಸುತ್ತಾರೆ. ಹನುಮ ಚಿರಂಜೀವಿ ಬೇಡಿದ ವರಗಳನ್ನು ಶೀಘ್ರವಾಗಿ ಪ್ರಸಾದಿಸುವ ಕರುಣಾಮಯಿ, ಆದರೆ ಮಂಗಳವಾರ ಹನುಮಂತನನ್ನು ಹೇಗೆ ಪೂಜಿಸಿದರೆ ಅವರ ಕೃಪೆಗೆ ಪಾತ್ರರಾಗಬಹುದು ಎಂಬ ಗೊಂದಲ ಸಾಮಾನ್ಯಾಗಿ ಎಲ್ಲರಲ್ಲಿ ಇರುತ್ತದೆ. ಹಾಗೂ ಕೆಲವರು ಎಷ್ಟೇ ಪೂಜೆ ಮಾಡಿದರು ಫಲ ಸಿಗಲಿಲ್ಲವೆಂದು ನಿರಾಸೆಯಿಂದ ಪೂಜಿಸುವುದನ್ನೇ ಬಿಟ್ಟುಬಿಡುತ್ತಾರೆ, ಆದರೆ ಪ್ರತಿಯೊಬ್ಬರು ನೆನಪಿನಲ್ಲಿ ಇಟ್ಟು ಕೊಳ್ಳಬೇಕಾದ ವಿಷಯವೇನೆಂದರೆ, ಪ್ರತಿ ಪೂಜೆಗೂ ಅದ್ದರದ್ದೇ ಆದ ಶಕ್ತಿ ಇರುತ್ತದೆ, ಕ್ರಮವಾಗಿ ಪೂಜೆ ಮಾಡಿದರೆ ಖಂಡಿತ ಫಲ ಸಿಗುತ್ತದೆ. ಹಾಗಾದರೆ ಮಂಗಳವಾರ ಹನುಮನ ಕೃಪೆಗೆ ಪಾತ್ರರಾಗಬೇಕಾದರೆ ಯಾವ ರೀತಿ ಪೂಜೆಯನ್ನು ಮಾಡಬೇಕು ಎಂದು ತಿಳಿದುಕೊಳ್ಳೋಣ.

ಹನುಮಂತ ಶ್ರೀರಾಮನ ಪರಮ ಭಕ್ತ ಹನುಮನ ಪೂಜೆಯನ್ನು ಪ್ರಾರಂಭಿಸುವ ಮೊದಲು ತಪ್ಪದೆ ಶ್ರೀರಾಮನನ್ನು ಮತ್ತು ಸೀತೆಯನ್ನು ಪೂಜಿಸುವುದು ಮುಖ್ಯವಾಗಿರುತ್ತದೆ ,ರಾಮನನ್ನು ಪೂಜಿಸಿದರೆ ಹನುಮ ಸಹಜವಾಗಿ ಸಂತೋಷಿಸುತ್ತಾನೆ,ಮಂಗಳವಾರ ಹನುಮನಿಗೆ ಕೇಸರಿಯುಕ್ತ ಕೆಂಪು ಚಂದನದಿಂದ ತಿಲಕವನ್ನು ಇಡಬೇಕು. ನಂತರ ಕೆಂಪು ಹೂಗಳಿಂದ, ವೀಳ್ಯದೆಲೆ ಇಂದ ಹನುಮಂತನನ್ನು ಅಲಂಕರಿಸಬೇಕು. ನಂತರ ಎಳ್ಳೆಣ್ಣೆಯ ದೀಪವನ್ನು ಬೆಳಗಬೇಕು ಹನುಮಂತನಿಗೆ ತುಪ್ಪದಲ್ಲಿ ಮಾಡಿದ ಕೆಂಪು ಅಥವಾ ಕೇಸರಿ ಬಣ್ಣದ ಸಿಹಿ ತಿಂಡಿಯನ್ನು ನೈವೇದ್ಯವಾಗಿ ಅರ್ಪಿಸಬೇಕು .ಹನುಮಂತನ ಪೂಜೆಯಲ್ಲಿ ಧ್ಯಾನಕ್ಕೆ ವಿಶೇಷ ಮಹತ್ವವಿದೆ ಹನುಮಾನನ್ನು ಧ್ಯಾನಿಸುವಾಗ ಮನಸ್ಸನ್ನು ಕೇವಲ ಹನುಮಂತನ ಮೇಲೆ ಕೇಂದ್ರೀಕರಿಸಬೇಕು.ಮನಸ್ಸಿನಲ್ಲಿ ಕೇವಲ ಹನುಮಂತನ ಸ್ಮರಣೆ ಮಾಡಬೇಕು. ಹಾಗೂ ಯಾವುದೇ ಪೂಜೆ ಮಾಡುವುದ್ದಕ್ಕೂ ಮೊದಲು ನಂಬಿಕೆ ಎನ್ನವುದು ಮುಖ್ಯವಾಗಿರುತ್ತದೆ, ದೇವರನ್ನು ನಂಬಿ ಪೂಜೆಮಾಡಿದರೆ ಫಲಗಳು ಖಂಡಿತ ಸಿಗುತ್ತದೆ.

ಪ್ರತಿ ಮಂಗಳವಾರ ಭಕ್ತಿ,ಶ್ರದ್ದೆ, ಏಕಾಗ್ರತೆ ಇಂದ ಹನುಮಾನ್ ಚಾಲೀಸಾವನ್ನು ಪಠಿಸಬೇಕು. ಹನುಮಾನ್ ಚಾಲಿಸಾವು ನಿಮ್ಮೆಲ್ಲಾ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಗ್ರಹದೋಷಗಳಿಂದ ವಿಮುಕ್ತಿ ಹೊಂದಬೇಕಾದರೆ ಪರಿಹಾರಕ್ಕಾಗಿ 5ಮಂಗಳವಾರಗಳು ಹನುಮನ ವ್ರತವನ್ನು ಆಚರಿಸಿದರೆ ಗ್ರಹದೋಷಗಳು ಪರಿಹಾರವಾಗುತ್ತದ್ದೆ. ಹಾಗೂ ಸಂತಾನವಿಲ್ಲದೆ ಇರುವ ದಂಪತಿಗಳು ,ಶ್ರದ್ದೆ,ಭಕ್ತಿ ಇಂದ ಪ್ರತಿ ಮಂಗಳವಾರ ಉಪವಾಸ ಕೈಗೊಂಡು ಹನುಮನ ಪೂಜೆ ಮಾಡುವುದರಿಂದ ಸಂತಾನವಾಗುವ ಸಾಧ್ಯತೆ ಇದೆ.ಹನುಮಾನ್‌ ಚಾಲಿಸಾ ಪಠಣವು ಮನೆಯ ಋಣಾತ್ಮಕ ಶಕ್ತಿಯನ್ನು ತೆಗೆದುಹಾಕುತ್ತದೆ, ಹಾಗೂ ಸಕಾರಾತ್ಮಕ ಶಕ್ತಿಯನ್ನು ಸೃಷ್ಟಿಸುತ್ತದೆ.

ನಿಮ್ಮ ದಾಂಪತ್ಯದ ಗುಟ್ಟನ್ನು ನಿಮ್ಮ ಮದುವೆ ದಿನಾಂಕದಿಂದ ತಿಳಿಯಬಹುದು….!

ನಿಮಗೆ ಮದುವೆ ಬೇಗ ಆಗ್ತಿಲ್ವ ಹೀಗೆ ಮಾಡಿ ಖಂಡಿತ ಮದುವೆ ಯೋಗ ಕೂಡಿಬರುತ್ತದೆ :

ಜನರ ಕೆಟ್ಟ ದೃಷ್ಟಿ ನಿಮ್ಮ ಮೇಲೆ ಬೀಳದಿರಲು ಹೀಗೆ ಮಾಡಿ …!

 

- Advertisement -

Latest Posts

Don't Miss