ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ದೇವೇಗೌಡ ವಿರುದ್ಧ ಗೆಲುವು ಸಾಧಿಸಿರೋ ಬಿಜೆಪಿ ಅಭ್ಯರ್ಥಿ ಜಿ.ಎಸ್ ಬಸವರಾಜು ತಮ್ಮ ಗೆಲುವಿಗೆ ಕಾರಣ ಏನು ಅನ್ನೋದನ್ನ ಬಿಚ್ಚಿಟ್ಟಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ಬಸವರಾಜು, ನನ್ನ ಗೆಲುವಿಗೆ ದೇವೇಗೌಡರು ವರವಾದ್ರು. ಒಂದುವೇಳೆ ಮುದ್ದಹನುಮೇಗೌಡರು ಸ್ಪರ್ಧಿಸಿದ್ದರೆ ನನ್ನ ಗೆಲುವು ಕಷ್ಟವಾಗುತ್ತಿತ್ತು. ಆದರೆ ಗೌಡರು ಸ್ಪರ್ಧೆ ಮಾಡಿದ್ದರಿಂದ ನನಗೆ ಇನ್ನೂ ಸುಲಭವಾಯ್ತು ಅಂತ ಹೇಳಿದ್ದಾರೆ. ತುಮಕೂರು ಜನ ದೇವೇಗೌಡರನ್ನು ರಿಜೆಕ್ಟ್ ಮಾಡಿದ್ರು ಅಂತ ಬಸವರಾಜು ಹೇಳಿದ್ದಾರೆ.
ದೇವೇಗೌಡ್ರು ಯಾವತ್ತಾದ್ರೂ ಸತ್ಯ ಹೇಳಿದ್ದಾರಾ?
ಇನ್ನು ಪ್ರಜ್ವಲ್ ರೇವಣ್ಣ ಸಂಸದ ಸ್ಥಾನಕ್ಕೆ ರಾಜೀನಾಮೆ ವಿಚಾರವಾಗಿ ಪ್ರತಿಕ್ರಿಯಿಸಿದ ಬಸವರಾಜು, ಗೌಡರ ಕುಟುಂಬ ಎಂದಾದರೂ ಸತ್ಯ ಹೇಳಿದ್ದಾರಾ, ದೇವೇಗೌಡ್ರು ಮೋದಿ ಪ್ರಧಾನಿ ಆದರೆ ದೇಶ ಬಿಡ್ತೀನಿ ಅಂದ್ರು. ಆದ್ರೆ ಅವರು ದೇಶ ಬಿಡಲಿಲ್ಲ. ಮುಸ್ಲಿಂ ಆಗಿ ಹುಟ್ಟುತ್ತೇನೆ ಅಂದಿದ್ದಾರೆ. ಈ ಜನ್ಮದಲ್ಲೇ ಮುಸ್ಲಿಂ ಆಗಲಿ ನೋಡೋಣ ಅಂತ ವ್ಯಂಗ್ಯವಾಡಿದ ಬಸವರಾಜು, ಪ್ರಜ್ವಲ್ ರೇವಣ್ಣ ಜನರ ಕರುಣೆ ಗಿಟ್ಟಿಸಿಕೊಳ್ಳಲು ನಾಟಕ ಮಾಡುತ್ತಿದ್ದಾರೆ, ಮೊಮ್ಮಗ ರಾಜೀನಾಮೆ ಕೊಡೋದೂ ಇಲ್ಲ, ತಾತ ಕೊಡಿಸೋದೂ ಇಲ್ಲ ಅಂತ ಹೇಳಿದ್ದಾರೆ.
ಸುಳ್ಳು ಭವಿಷ್ಯ ನುಡಿದ್ರಾ ರಾಜಗುರು…? ಈ ವಿಡಿಯೋ ತಪ್ಪದೇ ನೋಡಿ