Tumukur News : ತುಮುಕೂರಿನಲ್ಲಿ ಮೈಲಿಗೆ ಎಂದು ಬಾಣಂತಿಯನ್ನು ಊರಿಂದ ಹೊರಗೆ ಜೋಪಡಿಯಲ್ಲಿ ಗಾಳಿ ಮಳೆಗೆ ಇರಿಸಿ ಮಗು ಸಾವನ್ನಪ್ಪಿದ ಘಟನೆ ನಡೆದಿದೆ. ತುಮಕೂರಿನ ಗೊಲ್ಲರಹಟ್ಟಿಯಲ್ಲಿ ಮೈಲಿಗೆ ಎಂದು ಬಾಣಂತಿ ಹಾಗೂ ಮಗುವನ್ನ ಕುಟುಂಬಸ್ಥರು ಊರ ಹೊರಗಿಟ್ಟಿದ್ದರಿಂದ ಅನಾರೋಗ್ಯಕ್ಕೆ ತುತ್ತಾಗಿ ಮಗು ಸಾವನ್ನಪ್ಪಿರುವ ಘಟನೆ ನಡೆದಿದೆ.
ಸಿದ್ದೇಶ್ ಮತ್ತು ವಸಂತಾ ದಂಪತಿಯ ಮಗುವು ಶೀತದಿಂದ ಬಳಲುತ್ತಿದ್ದು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಮಗುವಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ ಎನ್ನಲಾಗಿದೆ.
ಇನ್ನು ಕುಟುಂಬಸ್ಥರು ಮೈಲಿಗೆ ಎಂಬ ಕಾರಣದಿಂದ ಬಾಣಂತಿ ಹಾಗೂ ಮಗುವನ್ನು ಊರ ಹೊರಗಿಟ್ಟಿದ್ದು, ಗಾಳಿ, ಮಳೆ ಇದ್ದರೂ ಕೂಡ ಮಗು ಮತ್ತು ತಾಯಿಯನ್ನು ಊರ ಹೊರಗೆ ಇರಿಸಲಾಗಿತ್ತು. ವಸಂತ ಕಳೆದ ತಿಂಗಳು ಜೂನ್ 22ರಂದು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದು, ಏಳು ತಿಂಗಳಲ್ಲಿ ಹೆರಿಗೆ ಆಗಿದ್ದರಿಂದ ಒಂದು ಮಗು ಸಾವನ್ನಪ್ಪಿದ್ದರೆ, ಇನ್ನೊಂದು ಮಗು ಬದುಕುಳಿದಿತ್ತು ಎಂದು ಹೇಳಲಾಗಿದೆ.
Gruha laxmi:ಗೃಹ ಲಕ್ಷ್ಮೀ ಯೋಜನೆ ನೊಂದಾವಣೆ ಕೇಂದ್ರ ಕುರಿತು ಮುಖ್ಯ ಆಯುಕ್ತರ ಅಧ್ಯಕ್ಷತೆಯಲ್ಲಿ ಸಭೆ:
DKS City rounds: ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ರೌಂಡ್ಸ್
Brand bengalore: ಜನಹಿತ ಮತ್ತು ಆಕರ್ಷಕ ಬೆಂಗಳೂರು ವಿಷಯಕ್ಕೆ ರಚಿಸಿರುವ ಪ್ರತ್ಯೇಕ ಸಮಿತಿ ಜೊತೆ ಸಭೆ: