Tumukur News : ಉಡುಪಿ ಕಾಲೇಜಿನ ವಿಡಿಯೋ ಕೇಸ್‌ಗೆ ಸಂಬಂಧಿಸಿದಂತೆ ಶಕುಂತಲಾ, ‘ಕಾಂಗ್ರೆಸ್‌ನವರ ಪ್ರಕಾರ ವಿಡಿಯೋ ಮಾಡಿದ್ದು ಮಕ್ಕಳಾಟವಂತೆ. ಸಿದ್ದರಾಮಯ್ಯ ಸೊಸೆ ಅಥವಾ ಹೆಂಡತಿ ಅವರ ವಿಡಿಯೋವನ್ನು ಇದೆ ತರ ಮಾಡಿದರೆ ಅದನ್ನು ಮಕ್ಕಳಾಟ ಅಂತ ಒಪ್ಪಿಕೊಳ್ಳುತ್ತೀರಾ?’ ಎಂದು ಪೋಸ್ಟ್ ಮಾಡಿದ್ದರು. ಈ ಕುರಿತು ಪೊಲೀಸರು ದೂರು ದಾಖಲಿಸಿಕೊಂಡಿದ್ದು , ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸರು ಅವರನ್ನು ಬಂಧಿಸಿದ್ದರು.
ತುಮಕೂರು ಸಾಮಾಜಿಕ ಮಾಧ್ಯಮದ ಸಹ ಸಂಚಾಲಕಿಯಾದ ಶ್ರೀಮತಿ ಶಕುಂತಲಾ ನಟರಾಜ್ ಅವರನ್ನು ಬಂಧಿಸಿದ್ದನ್ನು ಖಂಡಿಸಿ, ರಾಜ್ಯ ಸರಕಾರದ ನಡೆಯ ವಿರುದ್ಧ ತುಮಕೂರಿನಲ್ಲಿ ಇಂದು ಜುಲೈ 29ರಂದು ಪ್ರತಿಭಟನೆ ನಡೆಯಿತು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಬಿ.ಸಿ.ನಾಗೇಶ್, ಶಾಸಕರಾದ ಜ್ಯೋತಿ ಗಣೇಶ್, ಜಿಲ್ಲಾಧ್ಯಕ್ಷರಾದ ಶ್ರೀ ರವಿಶಂಕರ್ ಹೆಬ್ಬಾಕ, ಪಕ್ಷದ ಪದಾಧಿಕಾರಿಗಳು, ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.
Kutumbasree : ಪೆರ್ಲ ಬಯಲಿನಲ್ಲಿ ಎಣ್ಮಕಜೆ ಕುಟುಂಬಶ್ರೀ “ವರ್ಷ ಋತು ಸಂಭ್ರಮ”ಯಶಸ್ವಿ ಕಾರ್ಯಕ್ರಮ