Tumukur news:
ತುಮಕೂರಿನಲ್ಲೂ ಕೆಲ ಕಿಡಿಗೇಡಿಗಳು ಸಾವರ್ಕರ್ ಫ್ಲೆಕ್ಸ್ ಹರಿದು ದರ್ಪ ಮೆರೆದಿದ್ದಾರೆ. ಸ್ವಾತಂತ್ರ್ಯೋತ್ಸವದ ಪ್ರಯುಕ್ತ ತುಮಕೂರು ನಗರದ ಹೃದಯ ಭಾಗದಲ್ಲಿರುವ ಎಂಪ್ರೆಸ್ ಕಾಲೇಜು ಮುಂಭಾಗದಲ್ಲಿ ಅಳವಡಿಸಿದ್ದ ಸಾವರ್ಕರ್ ಫ್ಲೆಕ್ಸ್ ಹರಿದು ಹಾಕಲಾಗಿದೆ.
ಅಮೃತ ಮಹೋತ್ಸವದ ಶುಭಕೋರಿ ಬಿಜೆಪಿ ವತಿಯಿಂದ ನಗರ ಶಾಸಕ ಜ್ಯೋತಿಗಣೇಶ್ ಪೋಟೋ ಸಹಿತ ಸಾವರ್ಕರ್ ಫ್ಲೆಕ್ಸ್ ಹಾಕಲಾಗಿತ್ತು. ಆದ್ರೆ ಕೆಲ ಕಿಡಿಗೇಡಿಗಳು ಮಧ್ಯರಾತ್ರಿ ಬಂದು ಫ್ಲೆಕ್ಸ್ ಹರಿದಿದ್ದಾರೆ. ಈ ಸಂಬಂಧ ತುಮಕೂರು SP ರಾಹುಲ್‌ಕುಮಾರ್ ಶಹಾಪುರ್ ವಾಡ್ ಪ್ರತಿಕ್ರಿಯೆ ನೀಡಿದ್ದಾರೆ.ಜನರನ್ನು ಪ್ರಚೋದಿಸಲು ಕಿಡಿಗೇಡಿಗಳು ಈ ರೀತಿ ಕೃತ್ಯವೆಸಗಿದ್ದಾರೆ ಎಂದಿದ್ದಾರೆ.
ಇದನ್ನು ಯಾರೇ ಮಾಡಿರಲಿ ಅವರ ಉದ್ದೇಶ ಏನೆಂಬುದುನ್ನ ಪತ್ತೆ ಹಚ್ಚುತ್ತೇವೆ. ಘಟನೆ ಸಂಬಂಧ ಈಗಾಗಲೇ ಕೇಸ್ ದಾಖಲಿಸಿ ತನಿಖೆ ನಡೆಸ್ತಿದ್ದೇವೆ. ಕೃತ್ಯವೆಸಗಿದ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಜನರು ಎಚ್ಚರ ವಹಿಸಿ. ಏನಾದ್ರೂ ಮಾಹಿತಿ ದೊರೆತರೆ ಪೊಲೀಸರಿಗೆ ತಿಳಿಸಿ ತನಿಖೆಗೆ ಸಹಕರಿಸಿ ಎಂದು ತುಮಕೂರು ಎಸ್‌ಪಿ ರಾಹುಲ್‌ಕುಮಾರ್ ಶಹಾಪುರ್ ವಾಡ್ ಜನರಲ್ಲಿ ಮನವಿ ಮಾಡಿದ್ದಾರೆ.
ಪ್ರಚೋದನಾ ಕಾರಿ ಹೇಳಿಕೆ ನೀಡಿದವರ ವಿರುದ್ದ ಸರ್ಕಾರ ಕ್ರಮ ಕೈಗೊಳ್ಳಲಿ: ಛಲವಾದಿ ನಾರಾಯಣ ಸ್ವಾಮಿ
ಹಿಂದೂಗಳನ್ನು ರಕ್ಷಣೆ ಮಾಡಲಾಗದಿದ್ದರೆ ರಿಸೈನ್ ಮಾಡಿ ಮನೆಗೆ ಹೋಗಿ: ಪ್ರಮೋದ್ ಮುತಾಲಿಕ್