Wednesday, July 2, 2025

Latest Posts

ತನ್ನ ನಾಲಿಗೆಯನ್ನೇ ಕತ್ತರಿಸಿ ದೇವರಿಗೆ ಅರ್ಪಿಸಿದ…! ಇದೆಂತಾ ಭಕ್ತಿ…!

- Advertisement -

Lacknow News:

ತನ್ನ ನಾಲಿಗೆಯನ್ನೇ ಕತ್ತರಿಸಿ ದೇವರಿಗೆ ಅರ್ಪಿಸಿರುವ ಘಟನೆ ಲಕ್ನೋದ  ಶೀಟ್ಲಾ ದೇವಸ್ಥಾನದಲ್ಲಿ ನಡೆದಿದೆ.ಕೌಶಂಬಿ ನಿವಾಸಿ ಸಂಪತ್ ಎಂಬಾತ ದೇವರಿಗೆ ನಾಲಿಗೆ ಕತ್ತರಿಸಿ ಅರ್ಪಿಸಿದ ಭಕ್ತ. ತಕ್ಷಣ ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸಂಪತ್ ಹಾಗು ಆತನ ಪತ್ನಿ ದೇವಸ್ಥಾನಕ್ಕೆ ಬಂದಿದ್ದರು. ಗಂಗಾ ನದಿಯಲ್ಲಿ ಸ್ನಾನ ಮಾಡಿದ ನಂತರ ಪೂಜೆ ಸಲ್ಲಿಸಿದರು. ದೇವಾಲಯ ಪ್ರದಕ್ಷಿಣೆ ಮುಗಿಸಿದ ನಂತರ, ಅವನು ತನ್ನ ನಾಲಿಗೆಯನ್ನು ಬ್ಲೇಡ್‌ನಿಂದ ಕತ್ತರಿಸಿ ದೇವರಿಗೆ ಅರ್ಪಿಸಿದ್ದಾನೆ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಅಧಿಕಾರಿ ಅಭಿಲಾಷ್ ತಿವಾರಿ ತಿಳಿಸಿದ್ದಾರೆ. ಶುಕ್ರವಾರ ರಾತ್ರಿ ದೇವಸ್ಥಾನಕ್ಕೆ ಭೇಟಿ ನೀಡುವ ಇಚ್ಛೆಯನ್ನು ಪತಿ ವ್ಯಕ್ತಪಡಿಸಿದ್ದರು ಎಂದು ಆತನ ಪತ್ನಿ ಬನ್ನೋ ದೇವಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಆಕೆಗೆ 1 ವರ್ಷವಿದ್ದಾಗಲೇ ಮದುವೆ…! ಇನ್ನೂ ನಿಂತಿಲ್ಲ ಬಾಲ್ಯ ವಿವಾಹ ಪದ್ಧತಿ..!

ಆನ್‌ಲೈನ್ ಸಾಲದ ಆ್ಯಪ್‌ನ ಬಾಧೆ : ದಂಪತಿ ಆತ್ಮಹತ್ಯೆ

ರೈಲು ಹಳಿಯಲ್ಲಿ ಸಿಲುಕಿದಾತ ಬದುಕಿ ಬಂದ…! ರೈಲ್ವೇ ನಿಲ್ದಾಣದಲ್ಲಿ ಹೀಗೊಂದು ಪವಾಡ…!

- Advertisement -

Latest Posts

Don't Miss