ದೆಹಲಿ: ಭಾರತೀಯ ದೂರಸಂಪರ್ಕ ಪ್ರಾಧಿಕಾರವು, ಪ್ರಸಾರಕರ ಗುಂಪಿನ ವ್ಯಾಪ್ತಿಯಲ್ಲಿ ಬರುವ ಟಿವಿ ಚಾನೆಲ್ ಗಳ ದರಕ್ಕೆ ಸಂಬಂಧಿಸಿದಂತೆ ತಿದ್ದುಪಡಿ ಮಾಡಿದೆ. ‘ನ್ಯೂ ಟಾರಿಫ್ ಆರ್ಡರ್ 2.0’ ಅನ್ನು ಟ್ರಾಯ್ ಪ್ರಕಟಿಸಿದೆ. ಇದರನ್ವಯ ಟಿವಿ ಚಾನೆಲ್ ಗಳ ದರದಲ್ಲಿ 12 ರೂಪಾಯಿ ಬದಲಾಗಿ 19 ರೂಪಾಯಿಗೆ ನಿಗದಿಪಡಿಸಿದ್ದು, ಪರಿಷ್ಕೃತ ನಿಯಮವು 2023ರ ಫೆಬ್ರುವರಿ 1 ರಿಂದ ಜಾರಿಗೆ ಬರಲಿದೆ.
ಚುನಾವಣಾ ಆಯುಕ್ತ ಅರುಣ್ ಗೊಯೇಲ್ ನೇಮಕಾತಿ ಕಡತವನ್ನು ಕೇಳಿದ ಸುಪ್ರೀಂಕೋರ್ಟ್
ಮೊದಲು ಚಾನೆಲ್ ಗಳಿಗೆ 12 ರೂ. ದರವನ್ನು ನಿಗದಿಪಡಿಸುವುದರ ಬಗ್ಗೆ ಚರ್ಚೆಯಾಗಿತ್ತು. ಈ ದರವನ್ನು ಪ್ರಸಾರಕರು ಮತ್ತು ಆಪರೇಟರ್ ಗಳು ವಿರೋಧಿಸಿದ್ದರು. ಹೀಗಾಗಿ ನೂತನ ನಿಯಮಗಳ ಅನುಷ್ಠಾನ ಹಲವು ಸಲ ಮುಂದೂಡಲಾಗಿತ್ತು. ನ್ಯೂ ಟಾರಿಫ್ ಆರ್ಡರ್ 2.0 ಬಗ್ಗೆ 2020 ಜನವರಿಯಲ್ಲಿ ಮೊದಲು ಪ್ರಸ್ತಾಪಿಸಿತ್ತು. ನಂತರ 3 ವರ್ಷಗಳ ನಂತರ ನಿಯಮಗಳನ್ನು ಟ್ರಾಯ್ ಫೈನಲ್ ಮಾಡಿದೆ. ಈ ನಿಯಮವು ಬೆಲೆಯ ವಿಚಾರದಲ್ಲಿ ಉದ್ಯಮಕ್ಕೆ ಹೆಚ್ಚು ಅನುಕೂಲವಾದ ವಾತವರಣವನ್ನು ಸೃಷ್ಟಿಸುವಲ್ಲಿ ಮತ್ತುಉತ್ತಮ ಪ್ರಗತಿ ಹೊಂದಲು ಅವಕಾಶ ಮಾಡಿಕೊಡುತ್ತದೆ ಎಂದು ಭಾರತೀಯ ಪ್ರಸಾರಕರ ಹಾಗೂ ಡಿಜಿಟಲ್ ಫೌಂಡೇಷನ್ ನ ಅಧ್ಯಕ್ಷ ಕೆ. ಮಾಧವನ್ ಹೇಳಿದ್ದಾರೆ. ಪ್ರಸಾರಕರ ಗುಂಪಿನ ವ್ಯಾಪ್ತಿಯಲ್ಲಿ ಬರುವ ಟಿವಿ ಚಾನೆಲ್ ಗಳು ನೀಡುವ ರಿಯಾಯಿತಿಗಳಿಗೆ ಶೇಕಡಾ 45ರ ಮಿತಿಯನ್ನು ನಿಗದಿಪಡಿಸಿದ್ದು, ಎಲ್ಲ ವಿತರಕರು ಮತ್ತು ಟಿವಿ ಚಾನೆಲ್ ಗಳು 2023ರ ಫೆಬ್ರುವರಿ 1 ರಿಂದ ಅವರು ಆಯ್ಕೆ ಮಾಡಿದ ಚಾನೆಲ್ ಗಳ ಗುಂಪಿನ ಪ್ರಕಾರ ಸೇವೆ ನೀಡಬೇಕು ಎಂದು ಟ್ರಾಯ್ ತಿಳಿಸಿದೆ.
ಮಂಗಳೂರು ಬ್ಲಾಸ್ಟ್ ನಲ್ಲಿ ಗುಪ್ತಚರ ಇಲಾಖೆ ವೈಫಲ್ಯ ಎಂದಿದ್ದ ಸಿದ್ದರಾಮಯ್ಯಗೆ ಸಿಎಂ ಬೊಮ್ಮಾಯಿ ತಿರುಗೇಟು