Tuesday, May 14, 2024

Latest Posts

ಟ್ವಿಟ್ ರೀಟ್ವೀಟ್ ಮಾಡಿದ್ದಕ್ಕಾಗಿ ಸೌದಿ ಮಹಿಳೆ ಜೈಲು ಪಾಲು

- Advertisement -

International news:

ಟ್ವಿಟರ್‌ನಲ್ಲಿ ಭಿನ್ನ ಮತೀಯರ ಟ್ವೀಟ್‌ಗಳನ್ನು ರೀಟ್ವೀಟ್ ಮಾಡಿದ ಆರೋಪದಲ್ಲಿ ಸೌದಿ ಅರೇಬಿಯಾದ ಮಹಿಳೆಯೊಬ್ಬರು 34 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.

ಸಲ್ಮಾ ಅಲ್ ಶೆಹಾಬ್‌ ಜೈಲು ಶಿಕ್ಷೆಗೆ ಗುರಿಯಾದವರು ಎಂದು ತಿಳಿದು ಬಂದಿದೆ. ಬ್ರಿಟನ್‌ನ ಲೀಡ್ಸ್ ವಿಶ್ವವಿದ್ಯಾಲಯದ ಪಿಎಚ್‌ಡಿ ವಿದ್ಯಾರ್ಥಿನಿಯಾಗಿದ್ದ ಸಲ್ಮಾ,ಕಳೆದ ವರ್ಷ ರಜೆಯಲ್ಲಿ ಸೌದಿ ಅರೇಬಿಯಾಕ್ಕೆ ಬಂದಿದ್ದ ವೇಳೆ ಬಂಧಿಸಲ್ಪಟ್ಟಿದ್ದರು. ಇದೀಗ ಅವರಿಗೆ ವಿಶೇಷ ಭಯೋತ್ಪಾದನಾ ನ್ಯಾಯಾಲಯವು 34 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.

ಕಾರ್ಯಕರ್ತರು ಮತ್ತು ಭಿನ್ನ ಮತೀಯರ ಟ್ವೀಟ್‌ಗಳನ್ನು ರೀಟ್ವೀಟ್ ಮಾಡಿದ್ದಕ್ಕಾಗಿ ಈ ಶಿಕ್ಷೆ ವಿಧಿಸಲಾಗಿದೆ. ಆರಂಭದಲ್ಲಿ ಜೈಲು ಶಿಕ್ಷೆಯ ಅವಧಿ ಮೂರು ವರ್ಷ ಇತ್ತು. ಆದರೆ ಬಳಿಕ ರಾಷ್ಟ್ರದ ಭದ್ರತೆ ಅಸ್ಥಿರಗೊಳಿಸಲು ಮತ್ತು ನಾಗರಿಕ ಅಶಾಂತಿ ಉಂಟು ಮಾಡಲು ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡಿಕೊಂಡಿದ್ದಾರೆ ಎಂದು ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿ ಶಿಕ್ಷೆಯ ಅವಧಿಯನ್ನು ಏರಿಕೆ ಮಾಡಿದೆ ಎನ್ನಲಾಗಿದೆ.

ಇನ್ನು ಸಲ್ಮಾಗೆ ವಿಧಿಸಲಾದ ಸುದೀರ್ಘ ಜೈಲು ಶಿಕ್ಷೆಯನ್ನು ಖಂಡಿಸಿರುವ ಮಾನವ ಹಕ್ಕು ಹೋರಾಟಗಾರರು, ಈ ರೀತಿಯ ಶಿಕ್ಷೆ ನೀಡುವುದು ಸರಿಯಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಮಂಗಳೂರು: ಸಾವರ್ಕರ್ ಪ್ರತಿಮೆ ಸ್ಥಾಪಿಸಲು ಯಶ್ ಪಾಲ್ ರಿಂದ ನಗರ ಪಾಲಿಕೆಗೆ ಮನವಿ

ಬೆಂಗಳೂರು: ಗಣೇಶೋತ್ಸವ ಆಚರಣೆ ಕುರಿತು ಬಿ.ಸಿ.ನಾಗೇಶ್ ಸ್ಪಷ್ಟನೆ

- Advertisement -

Latest Posts

Don't Miss