Tuesday, May 21, 2024

Latest Posts

ಭಾರತಕ್ಕೆ ಭೇಟಿ ನೀಡಿ ಕ್ಷಮೆ ಕೇಳಲಿದ್ದಾರೆ ಮಾಲ್ಡೀವ್ಸ್ ವಿದೇಶಾಂಗ ಸಚಿವರು

- Advertisement -

International News: ಮಾಲ್ಡೀವ್ಸ್ ವಿದೇಶಾಂಗ ಸಚಿವ ಮೂಸಾ ಜಮೀರ್ ಭಾರತಕ್ಕೆ ಭೇಟಿ ನೀಡಿ, ಪ್ರವಾಸೋದ್ಯಮದ ಬಗ್ಗೆ ವಿದೇಶಾಂಗ ಸಚಿವ ಎಸ್.ಜೈಶಂಕರ್ ಜೊತೆ ಮಾತುಕತೆ ನಡೆಸಲಿದ್ದಾರೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತಮಾಷೆ ಮಾಡಿದ್ದ ಮಾಲ್ಡೀವ್ಸ್ ಸಚಿವರನ್ನು ಈಗಾಗಲೇ ಸಚಿವ ಸ್ಥಾನದಿಂದ ಕೆಳಗಿಳಿಸಲಾಗಿದೆ. ಪ್ರಧಾನಿ ಅಂಡಮಾನ್ ಭೇಟಿಗೆ, ತಮಾಷೆ ಮಾಡಿದ್ದಕ್ಕಾಗಿ, ಇವರ ಹೇಳಿಕೆಯನ್ನು ಸಿರಿಯಸ್‌ ಆಗಿ ತೆಗೆದುಕೊಂಡಿದ್ದ ಭಾರತೀಯರು, ಮಾಲ್ಡೀವ್ಸ್‌ಗೆ ಹೋಗುವುದನ್ನೇ ಬ್ಯಾನ್‌ ಮಾಡಿ, ಅಂಡಮಾನ್‌ಗೆ ಹೋಗಲು ನಿರ್ಧರಿಸಿದ್ದರು.

ಎಷ್ಟೋ ಟಿಕೇಟ್ ಬುಕಿಂಗ್ಸ್, ಹೊಟೇಲ್ ಬುಕಿಂಗ್ಸ್ ಕ್ಯಾನ್ಸಲ್ ಆಗಿ, ಮಾಲ್ಡೀವ್ಸ್ ಪ್ರವಾಸೋದ್ಯಮ ಪರಿಸ್ಥಿತಿ ಹೀನಾಯಮಾನವಾಗಿತ್ತು. ಮಾಲ್ಡೀವ್ಸ್ ಅಧ್ಯಕ್ಷ, ಮೊಹಮ್ಮದ್ ಮುಯಿಜ್ಜು ಚೀನಾ ಪರವಾಗಿ ಬ್ಯಾಟಿಂಗ್ ನಡೆಸಿದ್ದು, ಭಾರತದ ಸೇನಾ ಪಡೆಯನ್ನು ಹಿಂದೆ ಪಡೆಯುವಂತೆ ತಾಕೀತು ಮಾಡಿತ್ತು. ಇದೀಗ ಮಾಲ್ಡೀವ್ಸ್ ಪ್ರವಾಸೋದ್ಯಮ ಕುಸಿದು ಬಿದ್ದಿದ್ದು, ಭಾರತೀಯರು ಕರುಣೆ ತೋರಿಸಿದರೆ, ಮಾಲ್ಡೀವ್ಸ್ ಉದ್ಧಾರವಾಗುವ ಹಂತಕ್ಕೆ ಬಂದಿದೆ.

ಹಾಗಾಗಿ ಮಾಲ್ಡೀವ್ಸ್ ವಿದೇಶಾಂಗ ಸಚಿವರು ಗುರುವಾರ ಭಾರತಕ್ಕೆ ಬಂದು, ಭಾರತದ ವಿದೇಶಾಂಗ ಸಚಿವರ ಹತ್ತಿರ, ಪ್ರವಾಸೋದ್‌ಯಮದ ಬಗ್ಗೆ ಮಾತನಾಡಲಿದ್ದಾರೆ. ಅಲ್ಲದೇ ಮಾಲ್ಡೀವ್ಸ್ ಪ್ರವಾಸೋದ್ಯಮ ಸಚಿವರು ಕೂಡ ಭಾರತೀಯರೇ, ಮಾಲ್ಡೀವ್ಸ್‌ಗೆ ಭೇಟಿ ನೀಡಿ ಎಂದು ಮನವಿ ಮಾಡಿದ್ದಾರೆ.

ಗೆಲ್ಲುವ ಭರವಸೆ ವ್ಯಕ್ತಪಡಿಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ: ರಿಲ್ಯಾಕ್ಸ್ ಮೂಡ್‌ನಲ್ಲಿ..!

ಪತಿಯ ಬಗ್ಗೆ ನಗೆ ಚಟಾಕಿ ಹಾರಿಸಿದ ಜೋಶಿ ಪತ್ನಿ ಜ್ಯೋತಿ ಜೋಶಿ

ಕಾಂಗ್ರೆಸ್ ನಾಯಕರ ವಿರುದ್ಧ ಬೆಂಗಳೂರಿನ ಬಸ್‌ಸ್ಟ್ಯಾಂಡ್‌ನಲ್ಲಿ ರಾರಾಜಿಸಿದ ಪೋಸ್ಟರ್‌ಗಳು

- Advertisement -

Latest Posts

Don't Miss