Wednesday, March 12, 2025

Latest Posts

ಆಕೆಗೆ ಜನಿಸಿದ್ದು ಅವಳಿ ಮಕ್ಕಳು ತಂದೆ ಮಾತ್ರ ಬೇರೆ ಬೇರೆ,…! ಹೀಗೂ ಆಗುವುದುಂಟೇ..?!

- Advertisement -

International News:

ಬ್ರೆಸ್ಲಿಯಾದಲ್ಲಿ 19 ವರುಷದ ಯುವತಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ಘಟನೆ ನಡೆದಿದೆ. ಆದರೆ ವಿಚಿತ್ರ ಏನೆಂದರೆ ಈ ಮಕ್ಕಳ ತಂದೆ ಬೇರೆ ಬೇರೆ. ಹೌದು ತಂತ್ರಜ್ಞಾನ ಇಷ್ಟು ಮುಂದುವರಿದಿರುವಾಗಲೂ ಕೆಲವು ವೈಶಿಷ್ಟ್ಯಗಳಿಗೆ ಕಾರಣ ಪತ್ತೆ ಮಾಡುವುದು ಸುಲಭವಾಗುವುದಿಲ್ಲ. ಆದರೆ ಬ್ರೆಜಿಲ್‌ನಲ್ಲಿನ ಈ ಪ್ರಕರಣ ಮತ್ತಷ್ಟು ವಿಸ್ಮಯ ಮೂಡಿಸಿದೆ. ೧೯ ರ‍್ಷದ ಬ್ರೆಜಿಲ್ ಮಹಿಳೆಯೊಬ್ಬಳು ಅವಳಿ ಮಕ್ಕಳಿಗೆ ಜನ್ಮನೀಡಿದ್ದಾಳೆ. ವಿಶೇಷವೆಂದರೆ ಈ ಎರಡೂ ಮಕ್ಕಳ ತಂದೆ ಬೇರೆ ಬೇರೆ! ಇದು ಅಪರೂಪದಲ್ಲಿಯೇ ಅತಿ ಅಪರೂಪದ ವಿದ್ಯಮಾನ ಎನ್ನುತ್ತಾರೆ ವೈದ್ಯರು.

ಮಕ್ಕಳಿಗೆ ಜನ್ಮ ಕೊಟ್ಟ ಮಹಿಳೆ ಕೂಡ ಇದರಿಂದ ಆಘಾತಕ್ಕೆ ಒಳಗಾಗಿದ್ದಾಳೆ. ಇಂತಹ ಸನ್ನಿವೇಶ ಸಾಧ್ಯವೇ ಎನ್ನುವುದು ತನಗೆ ಗೊತ್ತೇ ಇರಲಿಲ್ಲ ಎಂದಿದ್ದಾಳೆ. ಒಂದೇ ದಿನ ಇಬ್ಬರು ವ್ಯಕ್ತಿಗಳ ಜತೆ ಆಕೆ ಲೈಂಗಿಕ ಕ್ರಿಯೆ ನಡೆಸಿದ್ದು, ಈ ವಿರಳ ವಿದ್ಯಮಾನಕ್ಕೆ ಕಾರಣ. ೯ ತಿಂಗಳ ಬಳಿಕ ಆಕೆ ಅವಳಿ ಮಕ್ಕಳನ್ನು ಹೆತ್ತಿದ್ದಾಳೆ. ಒಂದು ರ‍್ಷದವರೆಗೂ ಆಕೆಗೆ ಆ ಮಕ್ಕಳ ತಂದೆ ಯಾರು ಎನ್ನುವ ಬಗ್ಗೆ ಯೋಚನೆ ಶುರುವಾಗಿ ಮಕ್ಕಳ ಮೊದಲ ಜನ್ಮದಿನದ ವೇಳೆ. ಅದನ್ನು ಖಚಿತಪಡಿಸಿಕೊಳ್ಳಲು ಆಕೆ ಪಿತೃತ್ವ ಪರೀಕ್ಷೆ ನಡೆಸಲು ನರ‍್ಧರಿಸಿದ್ದಳು. ಆ ಮಕ್ಕಳ ತಂದೆ ಈತನೇ ಎಂದು ಆಕೆ ಬಲವಾಗಿ ನಂಬಿದ್ದ ವ್ಯಕ್ತಿಯ ಡಿಎನ್‌ಎ ಸಂಗ್ರಹಿಸಿದ್ದಳು. ಆದರೆ ಒಂದು ಮಗುವಿನ ಡಿಎನ್‌ಎ ಮಾತ್ರ ಹೊಂದಿಕೆಯಾಗಿತ್ತು ಎನ್ನಲಾಗಿದೆ. “ಅದೇ ದಿನ ನಾನು ಮತ್ತೊಬ್ಬ ವ್ಯಕ್ತಿ ಜತೆಗೂ ಲೈಂಗಿಕ ಕ್ರಿಯೆ ನಡೆಸಿದ್ದು ನನಗೆ ನೆನಪಾಯಿತು. ಆತನಿಗೆ ಕರೆ ಮಾಡಿ ಪರೀಕ್ಷೆ ನಡೆಸಲು ಹೇಳಿದೆ. ಅದರಲ್ಲಿ ಪಾಸಿಟಿವ್ ಕಂಡುಬಂತು. ಫಲಿತಾಂಶ ಕಂಡು ನನಗೆ ಅಚ್ಚರಿಯಾಯ್ತು. ಈ ರೀತಿ ನಡೆಯುತ್ತದೆ ಎನ್ನುವುದು ನನಗೆ ಗೊತ್ತಿರಲಿಲ್ಲ. ಏಕೆಂದರೆ ಎರಡೂ ಮಕ್ಕಳು ಒಂದೇ ಥರ ಇವೆ” ಎಂದು ಮಹಿಳೆ ತಿಳಿಸಿದ್ದಾಳೆ.

ಗೋಯಿಯಾಸ್‌ನ ಮೈನೆರಿಯೋಸ್‌ ಮೂಲದ ಮಹಿಳೆಯ ಹೆರಿಗೆ ಸುಸೂತ್ರವಾಗಿ ನಡೆದಿತ್ತು ಮತ್ತು ಎರಡೂ ಮಕ್ಕಳು ಆರೋಗ್ಯಯುತವಾಗಿ ಜನಿಸಿದ್ದವು ಎಂದು ವೈದ್ಯರು ತಿಳಿಸಿದ್ದಾರೆ.ಇಂತಹ ಅಪರೂಪದ ಘಟನೆ ಹತ್ತು ಲಕ್ಷದಲ್ಲಿ ಒಂದು ಎಂದು ಹೇಳಲಾಗಿದೆ. ಇದು ಬಹಳ ವಿರಳವಾದರೂ ಅಸಾಧ್ಯವಾಗಿದ್ದೇನೂ ಅಲ್ಲ. ಇದನ್ನು ಹೀಟೆರೋಪೇರೆಂಟಲ್ ಸೂಪರ್‌ಫೆಕಂಡೇಷನ್ ಎಂದು ಕರೆಯಲಾಗುತ್ತದೆ.”ಒಂದೇ ತಾಯಿಯ ಎರಡು ಅಂಡಾಣುಗಳು ವಿಭಿನ್ನ ಪುರುಷರ ವರ‍್ಯಾಣುಗಳ ಸೇರಿದಾಗ ಇದು ಸಾಧ್ಯ. ಮಕ್ಕಳು ತಾಯಿಯ ಅನುವಂಶೀಯ ಮೂಲವನ್ನು ಹೊಂದಿರುತ್ತವೆ, ಆದರೆ ಎರಡು ವಿಭಿನ್ನ ಹೊಕ್ಕಳುಬಳ್ಳಿಗಳಲ್ಲಿ ಬೆಳೆಯುತ್ತವೆ” ಎಂದು ಮಹಿಳೆಯ ವೈದ್ಯ ಡಾ. ಟ್ಯುಲಿಯೋ ಜರ‍್ಜ್ ಫ್ರಾಂಕೋ ತಿಳಿಸಿದ್ದಾರೆ.

ಸೆಪ್ಟೆಂಬರ್ 19 ರಂದು ರಾಣಿ ಎಲಿಜಬೆತ್ II ಅಂತ್ಯಕ್ರಿಯೆಗೆ ನಿರ್ಧಾರ

ಸಮುದ್ರದ ಮಧ್ಯೆ ಬೆಂಕಿ…! ವಿನಾಶ ದೂರವಿಲ್ಲ…?!

ಎರಡನೇ ರಾಣಿ ಎಲಿಜಬತ್ ನಿಧನಕ್ಕೆ ಮೋದಿ ಸಂತಾಪ

- Advertisement -

Latest Posts

Don't Miss