Sunday, September 8, 2024

Latest Posts

ಟ್ವಿಟರ್ ಪಕ್ಷಪಾತ, ಸರ್ಕಾರ ಹೇಳುವದನ್ನು ಕೇಳುತ್ತದೆ ; ರಾಹುಲ್ ಗಾಂಧಿ

- Advertisement -

www.karnatakatv.net : ನವದೆಹಲಿ : ಸಾಮಾಜಿಕ ಮಾಧ್ಯಮದ ವೇದಿಕೆಗೆ ‘ನಮ್ಮ ರಾಜಕೀಯ ಪ್ರತಿಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಮತ್ತು ದೇಶದ ಪ್ರಜಾಪ್ರಭುತ್ವದ ರಚನೆಯ ಮೇಲೆ ದಾಳಿ ಮಾಡಿದೆ ಎಂದು ರಾಹುಲ್ ಗಾಂಧಿ ಅವರು ಟ್ವಿಟರ್ ಮೂಲಕ ಆರೋಪಿಸಿದ್ದಾರೆ.

ನನ್ನ ಟ್ವಿಟರ್ ಖಾತೆಯನ್ನು ಮುಚ್ಚುವ ಮೂಲಕ ಅವರು ನಮ್ಮ ರಾಜಕೀಯ  ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ನಮ್ಮ ರಾಜಕೀಯವನ್ನು ವ್ಯಾಖ್ಯಾನಿಸಲು ಕಂಪನಿಯು ತನ್ನ ವ್ಯವಹಾರವನ್ನು ಮಾಡುತ್ತಿದೆ. ಮತ್ತು ರಾಜಕಾರಣಿಯಾಗಿ ನನಗೆ ಇಷ್ಟವಿಲ್ಲ ಎಂದು ಕಾಂಗ್ರೆಸ್ ಸಂಸದರು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಿರುವ ವಿಡಿಯೋ ಹೇಳಿಕೆಯಲ್ಲಿ ಟ್ವಿಟರ್ ಡೇಂಜರಸ್ ಆಟ ಹಾಗೇ ಇದು ದೇಶದ ಪ್ರಜಾಪ್ರಭುತ್ವದ ರಚನೆಯ ಮೇಲೆ ದಾಳಿ ಎಂದು ಹೇಳಿದರು.

ಕಳೆದ ವಾರ ದೆಹಲಿಯ ಅತ್ಯಾಚಾರಕ್ಕೊಳಗಾದ ಮತ್ತು ಕೊಲೆಗಿಡಾದ 9 ವರ್ಷದ ದಲಿತ ಯುವತಿಯ ಕುಟುಂಬದೊಂದಿಗೆ ಕಾಂಗ್ರೆಸ್ ನಾಯಕ ಸಂವಹನ ನಡೆಸುತ್ತಿರುವ ಫೋಟೋಗಳ ಪೋಸ್ಟ್ ಗಳನ್ನು ಹಂಚಿಕೊಂಡಿರುವದರಿಂದ ರಾಹುಲ್ ಗಾಂಧಿ ಮತ್ತು ಇತರ ಹಲವು ಕಾಂಗ್ರೆಸ್ ನಾಯಕರ ಟ್ವಿಟರ್ ಖಾತೆಯನ್ನು ಲಾಕ್ ಮಾಡಲಾಗಿತ್ತು . ಸಂಸತ್ತಿನಲ್ಲಿ ಮಾತನಾಡಲು ನಮಗೆ ಅವಕಾಶವಿಲ್ಲ ಆದಕಾರಣ ನಾವು ಟ್ವಿಟರ್ ಮೂಲಕ ಸಂದೇಶವನ್ನು ಹಂಚಿಕೊಂಡಿದ್ದೆವು  ಎಂದು ರಾಹುಲ್ ಗಾಂಧಿ ಅವರು ಹೇಳಿದರು.

ಪ್ರಭಾಪ್ರಭುತ್ವದ ರಚನೆಯ ಮೇಲೆ ಇದು ವ್ಯವಸ್ಥಿತಿ ದಾಳಿ. ಇದು ರಾಹುಲ್ ಗಾಂಧಿ ಒಬ್ಬನ ಮೇಲೆ ಮಾತ್ರ ಮಾಡಿದ ದಾಳಿ ಅಲ್ಲ. ನನಗೆ ಟ್ವೀಟರ್ ನಲ್ಲಿ 19-20 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಅವರೆಲ್ಲರ ಧ್ವನಿ ಅಡಗಿಸುವ ಒಂದು ರೀತಿಯ ಪೂರ್ವ ಸಿದ್ಧತೆ ಎಂದು ಅವರು ಹೇಳಿದ್ದಾರೆ.

- Advertisement -

Latest Posts

Don't Miss