Technology News : ಕಣ್ಣು ಕುಕ್ಕುವಂತ ನೀಲ ಪಕ್ಷಿಗಳು, ಸುಮಧುರವಾಗಿ ಕಂಗೊಳಿಸುವ ಆ ಮುದ್ದಾದ ಹಕ್ಕಿಗಳು ಆದರೆ ಅದಕ್ಕೆ ವಿದಾಯ ಹೇಳುತ್ತಿದೆ ಆ ಕಂಪೆನಿ ಹಾಗಿದ್ರೆ ಈ ಇದ್ದಕ್ಕಿದ್ದಂತೆ ಈ ನಿರ್ಧಾರ ಯಾಕೆ ಯಾವುದು ಆ ಪಕ್ಷಿ ಹೇಳ್ತೀವಿ ಈ ಸ್ಟೋರಿಯಲ್ಲಿ….
ಭಾನುವಾರದದಂದು ಮೈಕ್ರೋ-ಬ್ಲಾಗಿಂಗ್ ಅಪ್ಲಿಕೇಶನ್ನಲ್ಲಿ ಟ್ವಿಟರ್ ಲೋಗೋವನ್ನುಬದಲಾಯಿಸುತ್ತಿರುವುದಾಗಿ ಘೋಷಿಸಿಕೊಂಡಿದ್ದಾರೆ. ಎಲಾನ್ ಮಸ್ಕ್ ಹೀಗೆ ಟ್ವೀಟ್ ಮಾಡಿದ್ದಾರೆ. ಪ್ರಸ್ತುತ ಟ್ವಿಟರ್‌ನ ಲೋಗೋ ಪಕ್ಷಿ ಆಗಿದ್ದು ಸದ್ಯದಲ್ಲೇ ಇದು ಬದಲಾವಣೆ ಆಗಲಿದೆ.
ʻಶೀಘ್ರದಲ್ಲೇ ನಾವು ಟ್ವಿಟರ್ ಬ್ರಾಂಡ್‌ಗೆ ವಿದಾಯ ಹೇಳುತ್ತೇವೆ & ಕ್ರಮೇಣ ಎಲ್ಲ ಬರ್ಡ್‌ಗಳಿಗೂʼ ಎಂದು ಅವರು ಟ್ವೀಟ್ ಮಾಡಿದ್ದಾರೆ. ಜತೆಗೆ, ಇಂದು ರಾತ್ರಿ ಉತ್ತಮವಾದ ಎಕ್ಸ್ ಲೋಗೋವನ್ನು ಪೋಸ್ಟ್ ಮಾಡಿದ್ದಾರೆ. ಅದನ್ನು ನಾಳೆ ಜಾಗತಿಕವಾಗಿ ಲೈವ್ ಮಾಡಲಾಗುತ್ತದೆ ಎಂದಿದ್ದಾರೆ. ಟೆಸ್ಲಾ ಸಿಇಒ ತನ್ನ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ನಲ್ಲಿ ಹೊಸ ಟ್ವಿಟರ್ ಲೋಗೋದ ವಿನ್ಯಾಸವನ್ನು ಹಂಚಿಕೊಂಡಿದ್ದಾರೆ ಮತ್ತು ಅದಕ್ಕೆ ‘ಎಕ್ಸ್’ ಎಂದು ಹೆಸರಿಸಿದ್ದಾರೆ.
“ಶೀಘ್ರದಲ್ಲೇ ನಾವು ಟ್ವಿಟ್ಟರ್ ಬ್ರ್ಯಾಂಡ್‌ಗೆ ಮತ್ತು ಎಲ್ಲಾ ಪಕ್ಷಿಗಳಿಗೆ ವಿದಾಯ ಹೇಳುತ್ತೇವೆ,” ಎಂದು ಎಲಾನ್ ಮಸ್ಕ್ ಟ್ವೀಟ್ ಮಾಡಿದ್ದಾರೆ. ಪ್ರಸ್ತುತ ಟ್ವಿಟರ್‌ನ ಲೋಗೋ ಪಕ್ಷಿ ಆಗಿದ್ದು ಸದ್ಯದಲ್ಲೇ ಇದು ಬದಲಾವಣೆ ಆಗಲಿದೆ. ಎಲಾನ್ ಮಸ್ಕ್ ಈರೀತಿ ಟ್ವೀಟ್ ಮಾಡಿದ ಬೆನ್ನಲ್ಲೇ ಇದಕ್ಕೆ ಸಾಕಷ್ಟು ಕಮೆಂಟ್ಗಳು ಬಂದಿದ್ದು, ಪರ-ವಿರೋಧದ ಚರ್ಚೆಗಳು ಆರಂಭವಾಗಿದೆ. ಅನೇಕರು ಟ್ವಿಟ್ಟರ್ ಲೋಗೋವನ್ನು ಬದಲಾಯಿಸಬೇಡಿ ಎಂದು ಮರು ಟ್ವಿಟ್ ಮಾಡುತ್ತಿದ್ದಾರೆ.
Ragging: ಯುವತಿಯರನ್ನು ಛೇಡಿಸುತ್ತಿದ್ದ ಮೂವರನ್ನು ಬಂಧಿಸಿ ಬಿಫೋರ್-ಆಫ್ಟರ್ ವಿಡಿಯೋ ಟ್ವೀಟ್ ಮಾಡಿದ ಪೊಲೀಸರು
ಪ್ರೋ ಕಬಡ್ಡಿ 10ನೇ ಆವೃತ್ತಿ ‘ಯು.ಪಿ.ಯೋಧ’ ತಂಡಕ್ಕೆ ಆಯ್ಕೆಯಾದ ಕನ್ನಡಿಗ ಗಗನ್ ಗೌಡ..