ವೈರಲ್ ವೀಡಿಯೋ: ಕೆಲವು ವಾರಗಳಿಂದ ಕೆಂಪು ಸುಂದರಿ ಎಂದೇ ಪ್ರಸಿದ್ದವಾಗಿರುವ ಟೋಮಾಟೋ ಹಣ್ಣು ಈಗ ನಿಲುಕದ ನಕ್ಷತ್ರವಾಗಿದೆ. ಯಾಕೆಂದರೆ ಮೊದಲೆಲ್ಲ ಹತ್ತು ರೂಪಾಯಿಗೆ ಒಂದು ಕೆಜಿ ಸಿಗುತ್ತಿದ್ದ ಈ ಟೊಮಾಟೊಗಳು ಈಗ ಒಂದು ಕೆಜಿ ಕೊಳ್ಳಬೇಕೆಂದರೆ 180 ರಿಂದ 200 ವರೆಗೆ ಬೆಲೆ ತೆರಬೇಕು ಯಾಕಿಷ್ಟು ಬೆಲೆ ಜಾಸ್ತಿಯಾಗಿದೆ ಎಂದು ಕೇಳುವುದಾದರೆ ಅಧಿಕ ಮಳೆಯಿಂದಾಗಿ ಬೆಳೆದಿರುವ ಟೋಮಾಟೊ ಹಣ್ಣು ಮಳೆಗೆ ಕೊಚ್ಚಿ ಹೋಗಿವೆ ಹಾಗಾಗಿ ಬೆಲೆ ಜಾಸ್ತಿಯಾಗಿವೆ ಅಂದುಕೊಂಡಿದ್ದೆವು. ಆದರೆ ಆಸಲಿ ಕಾರಣ ಅದಲ್ಲ
In case you were wondering who is hoarding the tomatoes.#TomatoPrice #Tomato pic.twitter.com/QVRV9W2OPx
— Kaveri (@ikaveri) July 16, 2023
ಹೌದು ಸ್ನೇಹಿತರೆ ಬೆಲೆ ಏರಿಕೆಗೆ ಅಸಲಿ ಕಾರಣ ಒಂದು ನಾಯಿ. ನಾಯಿ ತಮ್ಮ ಮಾಲೀಕ ತಂದಿರುವ ಹಣ್ಣನ್ನು ಬಾಯಿಯಲ್ಲಿ ಬಚ್ಚಿಟ್ಟುಕೊಂಡಿದೆ ಯಾಕೆಂದರೆ ಅದಕ್ಕೆ ಟೊಮಾಟೊ ಬೆಲೆ ಗೊತ್ತಾಗಿದೆ. ಹೀಗೆ ಇನ್ನೆಷ್ಟು ಪ್ರಾಣಿಗಳು ಹಣ್ಣನ್ನು ಬಚ್ಚಿಟ್ಟುಕೊಂಡಿರಬೇಕು ಅಲ್ಲವೆ ? ಹಾಗಾಗಿ ಟೊಮಾಟೋ ಹಣ್ಣಿಗೆ ಬೇಡಿಕೆ ಜಾಸ್ತಿಯಾಗಿದೆ ಎಂದಿದ್ದಾರೆ.
ಇನ್ನು ನಾಯಿಯ ಮಾಲೀಕರಿಗೆ ನಾಯಿಯ ಬಾಯಿಯಲ್ಲಿರುವ ಟೊಮಾಟೊ ಹಣ್ಣನ್ನು ನೀವು ತಿನ್ನುವಿರಾ ಎಂದು ಕೇಳಿದಾಗ ತೊಳೆದು ತಿನ್ನುತ್ತೇನೆಂದು ಹೇಳಿದ್ದಾಳೆ