ಇಬ್ಬರು ಜನತೆಗೆ ಮಾತು ಕೊಟ್ಟಿದ್ದಾರೆ : 140 ಶಾಸಕರು ನಮ್ಮವರೇ – ಡಿಕೆ ಸುರೇಶ್‌

ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿಯ ಕಾದಾಟ ಕಾವೇರುತ್ತಿದ್ದಂತೆ ಇಂದು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್‌ ಅವರು ಬ್ರೇಕ್‌ ಫಾಸ್ಟ್ ಮೀಟಿಂಗ್‌ ಮಾಡಿದ್ದಾರೆ. ಇದಾದ ನಂತರ ಜಂಟಿ ಸುದ್ದಿಗೋಷ್ಠಿ ನಡೆಸಿ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ಇನ್ನು ಇತ್ತ ದೆಹಲಿಯಲ್ಲಿರುವ ಮಾಜಿ ಸಂಸದ ಡಿಕೆ ಸುರೇಶ್‌ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಯಾರನ್ನು ಈವರೆಗೂ ಭೇಟಿ ಮಾಡಿಲ್ಲ. ಯಾರು ಮುಖಂಡರು ಇದ್ದಾರೆ ಅವರನ್ನು ಭೇಟಿ ಅಡುವುದಕ್ಕೆ ಪ್ರಯತ್ನ ಮಾಡುತ್ತೇನೆ, ನಂತರ ನಡೆದಿರುವುದನ್ನು ಹೇಳ್ತೀನಿ. ರಾಜ್ಯದ ಜನತೆಗೆ ಮಾತು ಕೊಟ್ಟಿದ್ದಾರೆ. ಅದರಂತೆ ನಡೆದುಕೊಳ್ಳುವುದು ಅವರ ಕರ್ತವ್ಯ ಆಗಿದೆ. ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಈ ಮಾತನ್ನು ಈಡೇರಿಸುತ್ತಾರೆ ಎನ್ನುವ ಭರವಸೆ ನನಗಿದೆ ಎಂದು ಹೇಳಿದರು.

ಇನ್ನು ಅಧಿಕಾರ ಹಂಚಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಡಿಕೆ ಸುರೇಶ್‌, ಈಗ ಇಬ್ಬರು ನಾಯಕರು ಸ್ವತಃ ಅವರ ಬಾಯಿಂದಲೇ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿರುವುದರಿಂದ ಮತ್ತೊಬ್ಬರು ಅದ ಬಗ್ಗೆ ಮಾತನಾಡಿದ್ರೆ ಅದಕ್ಕೆ ಹೆಚ್ಚಿನ ಅರ್ಥ ಬರುವುದಿಲ್ಲ ಎಂದರು. ಶಿವಕುಮಾರ್‌ ಅವರು ಪ್ರತಿಯೊಂದು ಹಂತದಲ್ಲೂ ಗಾಂಧಿ ಕುಟುಂಬದ ತ್ಯಾಗ ಮತ್ತು ಬಲಿದಾನದ ವಿಚಾರಗಳನ್ನು ಎಲ್ಲಾ ಸಂದರ್ಭಗಳಲ್ಲೂ ಹೇಳ್ತಾ ಇರ್ತಾರೆ. ಇದು ಒಂದೇ ಸಂದರ್ಭ ಅಲ್ಲ. ಸೋ ಶ್ರೀಮತಿ ಸೋನಿಯಾ ಗಾಂಧಿಯವರು ತೆಗೆದುಕೊಂಡ ಅನೇಕ ನಿರ್ಧಾರಗಳನ್ನು ಅವರು ಯಾವತ್ತೂ ಕೂಡ ಹೃದಯದಿಂದ ಪದೇ ಪದೇ ವಿಚಾರಗಳನ್ನು ತಿಳಿಸುವಂತ ಕೆಲಸವನ್ನು ಕಾರ್ಯಕರ್ತರಿಗೆ ಮಾಡುತ್ತಲೇ ಬಂದಿದ್ದಾರೆ ಇದೇನು ಹೊಸದಲ್ಲ.

ಇನ್ನು ಕೂಲಿ ವಿಚಾರಕ್ಕೆ ಸಂಬಂದಿಸಿದಂತೆ ಮಾತನಾಡಿದ ಅವರು, ಇಲ್ಲಿ ಕೂಲಿ ಸಿಗುತ್ತಾ ಅಥವಾ ಇಲ್ವಾ ಅನ್ನೋದು ಅಲ್ಲಾ. ಅವರು ಅಧ್ಯಕ್ಷರಾಗಿದ್ದಾರೆ, ಉಪಮುಖ್ಯಮಂತ್ರಿಗಳಾಗಿದ್ದಾರೆ ಅದೆಲ್ಲಾವೂ ಕೂಡ ಪಕ್ಷದ ಕೊಡುಗೆ. ಹಾಗಾಗಿ ಅದರ ಬಗ್ಗೆ ಮತ್ತೆ ಮಾತನಾಡುವುದರಲ್ಲಿ ಅರ್ಥವಿಲ್ಲ ಎಂದು ಹೇಳಿದರು.

ಗೊಂದಲಗಳಿಗೆ ತೆರೆ ಎಳೆಯುವಂತ ಕೆಲಸವನ್ನು ಸಿಎಂ, ಡಿಸಿಎಂ ಇಬ್ಬರೂ ಸೇರಿ ಮಾಡಿದ್ದಾರೆ, ಸ್ಪಷ್ಟನೆ ಕೂಡ ಕೊಟ್ಟಿದ್ದಾರೆ. ಅದನ್ನು ವರಿಷ್ಠರು ಇನ್ನು ಹೆಚ್ಚಿನದು ಏನಾದ್ರೂ ಇತ್ತು ಅಂದ್ರೆ ಅದನ್ನು ಬಗೆ ಹರಿಸುತ್ತಾರೆ ಎಂದರು. ಬಣದ ರಾಜಕಾರಣ ಇಲ್ಲ ಡಿಕೆಶಿವಕುಮಾರ್‌ ಅವರ ಮಾತು ಒಂದೇ 140 ಶಾಸಕರು ನಮ್ಮ ಪಕ್ಷದವರೇ, ನಾನು ಅವರ ಅಧ್ಯಕ್ಷ ಎಂದ. ಅಂತಾ ಡಿಕೆ ಸುರೇಶ್‌ ಹೇಳಿದ್ದಾರೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

About The Author