Sunday, September 8, 2024

Latest Posts

ರಾಯಭಾರಿ ಕಚೇರಿಯನ್ನು ಓಪನ್ ಮಾಡಿದ ಯುಎಇ ಇಸ್ರೇಲ್

- Advertisement -

www.karnatakatv.net ಯುಎಇ ಇಸ್ರೇಲ್​ನಲ್ಲಿ ತನ್ನ ರಾಯಭಾರಿ ಕಚೇರಿಯನ್ನು ಓಪನ್​ ಮಾಡಿದೆ. ಇಸ್ರೇಲ್ ಮತ್ತು ಯುಎಇ ನಡುವಿನ ಸಂಬಂಧ ಗಟ್ಟಿಯಾಗಿದ್ದು ಅದರಂತೆ  ಇಸ್ರೇಲ್​ನಲ್ಲಿ ರಾಯಭಾರಿ ಕಚೇರಿ ತೆರೆದ ಮೊದಲ ಮಧ್ಯಪೂರ್ವ ದೇಶ ಎನಿಸಿಕೊಂಡಿದೆ. ಕಚೇರಿ ಉದ್ಘಾಟನೆ ವೇಳೆ ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಗೋಜ್ ಕೂಡ ಇದ್ರು. ಈ ವೇಳೆ ಮಾತನಾಡಿದ ಅವರು, ಇಸ್ರೇಲ್​​ನಲ್ಲಿ ಯುಎಇ ರಾಯಭಾರಿ ಕಚೇರಿ ತೆರೆದಿರೋದು ಮಿಡಲ್ ಈಸ್ಟ್​ನ ಶಾಂತಿ, ಅಭಿವೃದ್ಧಿ ಮತ್ತು ರಕ್ಷಣೆಯ ಭವಿಷ್ಯದ ಹಾದಿಯಲ್ಲಿ ಒಂದು ಮೈಲಿಗಲ್ಲಾಗಿದೆ ಅಂತ ಹೇಳಿದ್ದಾರೆ. ಇಸ್ರೇಲ್ ರಾಜಧಾನಿ ಜೆರುಸಲೆಂನಲ್ಲಿ ಶಾಂತಿಯ ಕೊರತೆ ಇದ್ದು, ಸಂಘರ್ಷ ನಡೀತಾನೇ ಇರುತ್ತೆ.ಇನ್ನು ಒಂದು ವಾರ ಹಿಂದೆ ಯುಎಇ ಪ್ರವಾಸ ಕೈಗೊಂಡಿದ್ದ ಇಸ್ರೇಲ್ ವಿದೇಶಾಂಗ ಸಚಿವ ಯಾರ್ ಲ್ಯಾಪಿಡ್​ ಅಬುದಾಬಿಯಲ್ಲಿ ಇಸ್ರೇಲ್ ರಾಯಭಾರಿ ಕಚೇರಿ ಉದ್ಘಾಟಿಸಿದ್ರು

- Advertisement -

Latest Posts

Don't Miss