www.karnatakatv.net: ರಾಜ್ಯ- ಮೈಸೂರು : ಮೈಸೂರು ಜಿಲ್ಲೆ ಪಿರಿಯಾಪಟ್ಟಣ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ, ಉದಯ್ ಕೊಲೆಗೆ ಸಂಬಂಧಪಟ್ಟ ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ. ಸೈಯದ್ ಜಲೀಲ್, ಫಯಾಜ್ ಅಹ್ಮದ್, ಪುಟ್ಟರಂಗ ಬಂಧಿತ ಆರೋಪಿಗಳು. ಇದೇ ಜೂನ್ 25ರಂದು ಉದಯ್ ಎಂಬಾತನ ಶವ ಪಿರಿಯಾಪಟ್ಟಣ ವ್ಯಾಪ್ತಿಯ ಅರಸಿನಕೆರೆಯಲ್ಲಿ ಪತ್ತೆಯಾಗಿತ್ತು. ಶವ ತೇಲುತ್ತಿರುವುದನ್ನ ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ರು. ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ರು. ಪೊಲೀಸರ ತನಿಖೆ ವೇಳೆ ಉದಯ್ ನನ್ನ ಕೊಲೆಗೈದು ಬಳಿಕ ಶವವನ್ನ ಕೆರೆಗೆ ಎಸೆದಿರುವ ಸಂಗತಿ ಬೆಳಕಿಗೆ ಬಂದಿದೆ. ಫಯಾಜ್ ಅಹ್ಮದ್ ರವರ ಗುಜರಿಯಲ್ಲಿ ಉದಯ್ ಹಾಗೂ ಸೈಯದ್ ಜಲೀಲ್ ಇಬ್ಬರು ಕೆಲಸ ಮಾಡುತ್ತಿದ್ರು. ಕೆಲಸ ಮುಗಿದ ಬಳಿಕ ಬೆಡ್ ಶೀಟ್ ನ ಉದಯ್ ತೆಗೆದುಕೊಂಡಿದ್ದ. ಇದನ್ನ ಪ್ರಶ್ನಿಸಿದ ಜಲೀಲ್ ಗೆ ಉದಯ್ ಹೊಡೆದಿದ್ದ. ಇದರಿಂದ ಕುಪಿತಗೊಂಡ ಜಲೀಲ್ ಉದಯ್ ಗೆ ಕಲ್ಲಿನಿಂದ ಜಜ್ಜಿ ಕೊಂದಿದ್ದ. ಇದಕ್ಕೆ ಫಯಾಜ್ ಅಹ್ಮದ್ ಮತ್ತು ಪುಟ್ಟರಂಗ ಎಂಬುವರು ನೆರವು ನೀಡಿದ್ರು. ಇದೀಗ ಮೂವರನ್ನು ಬಂಧಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.