- Advertisement -
ರಾಮ ಮಂದಿರ ಸ್ಥಳವನ್ನು ಪರಿಶೀಲಿಸಲು ಉದ್ಧವ್ ಠಾಕ್ರೆ ನವೆಂಬರ್ 24 ಕ್ಕೆ ಆಯೋಧ್ಯೆಗೆ ಭೇಟಿ ನೀಡಲಿದ್ದಾರೆ. ಹಿಂದುತ್ವಕ್ಕೆ ನ್ಯಾಯ ಸಿಕ್ಕಿದೆ, ಸುಪ್ರೀಂ ತೀರ್ಪು ಸ್ವಾಗತಾರ್ಹ ಎಂದು ತಿಳಿಸಿದಾರೆ. ಇಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಇತಿಹಾಸ ಪುಟ ಸೇರಲಿದೆ ಎಂದು ತಿಳಿಸಿದರು .
ರಾಮ ಮಂದಿರ ನಿರ್ಮಾಣಕ್ಕೆ ಎಲ್ಲಾ ಧರ್ಮದವರು ಸಹಕಾರ ನೀಡಬೇಕು ಹಾಗೂ ಯಾವುದೇ ಅಹಿತಕರ ಘಟನೆ ಜನರು ಅವಕಾಶ ನೀಡಬಾರದು. ರಾಮ ಮಂದಿರ ನಿರ್ಮಾಣ ಬಹು ವರ್ಷಗಳ ಕನಸು ಅದಕ್ಕೆ ಇಂದು ಅವಕಾಶ ಸಿಕ್ಕಿದೆ. ಎಲ್ಲಾರು ಒಟ್ಟಾಗಿ ರಾಮಮಂದಿರ ನಿರ್ಮಾಣ ಮಾಡಬೇಕು ಎಂದು ತಿಳಿಸಿದ್ದಾರೆ.
- Advertisement -