Udupi News: ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆಯ ಈ ಒಂದು ಕಾರ್ಯಕ್ಕೆ ಜನರಿಂದ ಶ್ಲಾಘನೆ ದೊರೆತಿದೆ. ಜನಪರ ಕಾರ್ಯದಲ್ಲಿ ತೊಡಗಿದ ಆ ಒಂದು ತಂಡ ಇಂದು ನಗರಕ್ಕೆ ಮಾದರಿಯಾಗಿದ್ರೆ. ಈ ಉತ್ತಮ ಕಾರ್ಯ ಏನು ಅಂತೀರಾ ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್…
ಕಿಂಡಿ ಅಣೆಕಟ್ಟಿನಲ್ಲಿ ಸಿಲುಕಿಕೊಂಡಿರುವ ಮರದ ದಿಮ್ಮಿ, ಗಿಡಗಂಟಿ, ಕಸಗಳಿಂದ ಸರಾಗವಾಗಿ ನೀರು ಹರಿಯಲು ಸಮಸ್ಯೆಯಾಗುತ್ತಿದ್ದು ಕೂಡಲೇ ತ್ಯಾಜ್ಯವನ್ನು ತೆರವುಗೊಳಿಸಿ ನದಿಯಲ್ಲಿ ನೀರು ಸರಾಗವಾಗಿ ಹರಿಯುವಂತೆ ಶೌರ್ಯವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಮಾಡಿದ್ದಾರೆ.
ಮಳೆಗಾಲದಲ್ಲಿ ನೀರಿನೊಂದಿಗೆ ಕೊಚ್ಚಿಕೊಂಡು ಬರುವ ಮರದ ದಿಮ್ಮಿ ಸಹಿತ ಇತರ ಗಿಡಗಂಟಿ ತ್ಯಾಜ್ಯಗಳು ಸೇತುವೆಯ ತಳಭಾಗದಲ್ಲಿ ಶೇಖರಣೆಯಾಗುವುದು ಮಾಮೂಲು. ಆದರೆ ಜೋರಾಗಿ ಮಳೆ ಸುರಿದು ನದಿ ತುಂಬಿ ಹರಿಯುವ ಸಂದರ್ಭ ಗಿಡಗಂಟಿಗಳಿಂದ ಸರಾಗವಾಗಿ ನೀರು ಹರಿಯದೆ ಸಮೀಪದ ಕೃಷಿ ಭೂಮಿಗಳು ಕೃತ ನೆರೆಯಿಂದ ಜಲಾವೃತಗೊಳ್ಳುವುದು ಸಾಮಾನ್ಯ ಇದೇ ರೀತಿಯಲ್ಲಿ ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೇಪುಲು ಬಳಿ ಭಾರಿ ಮಳೆಯಿಂದ ತುಂಬಿ ಹರಿಯುತ್ತಿರುವ ಶಾಂಭವಿ ನದಿಗೆ ಅಡ್ಡದಾಗಿ ನಿರ್ಮಿಸಲಾದ ಕಿಂಡಿ ಅಣೆಕಟ್ಟುವಿನಲ್ಲಿ ಇಂತದ್ದೆ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಕಡಿದು ಹಾಕಿದ ಬೃಹತ್ ಗಾತ್ರದ ಮರದ ದಿಮ್ಮಿ, ಗಿಡ, ಕಸ, ಪ್ಲಾಸ್ಟಿಕ್ ತ್ಯಾಜ್ಯಗಳು ಸಿಕ್ಕಿಹಾಕಿಕೊಂಡು ನದಿಯ ನೀರು ಸರಾಗವಾಗಿ ಹರಿಯಲು ತೊಡಕಾಗಿ ಹತ್ತಿರದ ಕೃಷಿ ಭೂಮಿ, ಅಡಿಕೆ ತೋಟ, ಮನೆಗಳು ನೆರೆಯ ನೀರಿನಿಂದ ಮುಳುಗುವ ಭೀತಿಯಲ್ಲಿದ್ದವು ಕೂಡಲೇ ಮುಂದೆ ಉಂಟಾಗಬುಹುದಾದ ದೊಡ್ಡ ಅನಾಹುತವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ಘಟಕದ ಸದಸ್ಯರು ತಪ್ಪಿಸಿದ್ದಾರೆ.
ಸವಾಲಾಗಿದ್ದ ತ್ಯಾಜ್ಯ : ಸಾಣೂರು ಗ್ರಾಮ ಪಂಚಾಯತಿಗೆ ಪ್ರತೀ ವರ್ಷವೂ ನದಿಯಲ್ಲಿ ಶೇಖರಣೆಗೊಳ್ಳುವ ತ್ಯಾಜ್ಯದ ಕಠಿಣ ಸವಾಲಾಗಿತ್ತು ಈ ಬಾರಿ ತಕ್ಷಣ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪ್ರಸಾದ್ ಪೂಜಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಖಾ ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಾಣೂರು ಒಕ್ಕೂಟದ ಸೇವಾ ಪ್ರತಿನಿಧಿ ಅರುಣಿಯವರಿಗೆ ಮಾಹಿತಿಯನ್ನು ನೀಡಿದ್ದು ಕೂಡಲೇ ಸಾಣೂರು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರಿಂದ ಅಣೆಕಟ್ಟುವಿನಲ್ಲಿ ಸಿಕ್ಕಿಹಾಕಿಕೊಂಡ ಮರದ ದಿಮ್ಮಿ ಹಾಗು ತ್ಯಾಜ್ಯವನ್ನು ವಿಲೇವಾರಿ ಮಾಡಿ ನದಿ ಸಮೀಪದ ನೂರಾರು ಎಕರೆ ಪ್ರದೇಶಗಳಿಗೆ ನುಗ್ಗುತ್ತಿದ್ದ ನದಿ ನೀರಿನ್ನು ತಪ್ಪಿಸಿದ್ದಾರೆ.
ಮೆಚ್ಚುಗೆಯ ಕೆಲಸ : ಅಣೆಕಟ್ಟಿನ ತಳಭಾಗದಲ್ಲಿ ಕಸಕಡ್ಡಿ ತುಂಬಿ ನೀರು ಹರಿಯದೆ ಸ್ಥಳೀಯರಿಗೆ ಸಮಸ್ಯೆಯಾಗುತ್ತಿರುವ ಬಗ್ಗೆ ಮಾಹಿತಿ ಬಂದ ಕೂಡಲೇ ಸಾಣೂರು ವಲಯದ ಶೌರ್ಯ ವಿಪತ್ತು ಘಟಕದ 25 ಜನ
ಸದಸ್ಯರು ಫಲಾಪೇಕ್ಷೆ ಇಲ್ಲದೆ ಬಿಡದೆ ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೆ ತುಂಬಿ ಹರಿಯುತ್ತಿರುವ ಶಾಂಭವಿ ನದಿಗೆ ಇಳಿದು ಸತತ ನಾಲ್ಕು ಗಂಟೆಗಳ ಕಾರ್ಯಾಚರಣೆಯನ್ನು ಮಾಡಿ ಸಿಕ್ಕಿಹಾಕಿಕೊಂಡ ಮರದ ದಿಮ್ಮಿ ಹಾಗೂ ತ್ಯಾಜ್ಯವನ್ನು ವಿಲೇವಾರಿ ಮಾಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಶೌರ್ಯ ತಂಡದ ಇದೊಂದೆ ಮೆಚ್ಚುಗೆಯ ಕೆಲಸವಲ್ಲದೆ ಈಗಾಗಲೇ ಹಲವಾರು ಸಮಾಜಮುಖಿ ಕಾರ್ಯವನ್ನು ಮಾಡಿದ್ದಾರೆ. ಪ್ರತೀ ವಾರದಲ್ಲಿ ಒಂದು ದಿನ ಸ್ಥಳೀಯ ಸರ್ಕಾರಿ ಶಾಲೆಗಳಲ್ಲಿ ಸ್ವಚ್ಚತಾ ಕಾರ್ಯ, ಹಾಗೂ ಮುರತಂಗಡಿಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕೈ ತೋಟದ ರಚನೆ, ಮತ್ತು ಇತ್ತಿಚ್ಚೆಗೆ ಸಾಣೂರು ಸೇತುವೆಯ ಬಳಿಯಲ್ಲಿ ವಿದ್ಯುತ್ ಕಂಬದ ಮೇಲೆ ಮರ ಬಿದ್ದು ಸಮಸ್ಯೆಯಾದಾಗ ಕೂಡಲೇ ಮೆಸ್ಕಂ ಇಲಾಖೆ ಸಿಬ್ಬಂದಿಗಳ ಜೊತೆಯಲ್ಲಿ ಶೌರ್ಯ ವಿಪತ್ತು ಘಟಕದ ಸದಸ್ಯರು ಕೈ ಜೋಡಿಸಿದ್ದಾರೆ. ಅಣೆಕಟ್ಟಿನಲ್ಲಿ ಸಿಲುಕಿರುವ ತ್ಯಾಜ್ಯವನ್ನು ವಿಲೇವರಿ ಮಾಡುವ ಸಂದರ್ಭದಲ್ಲಿ ಪಂಚಾಯಿತಿ ಸಿಬ್ಬಂದಿ ವಸಂತ, ಸ್ಥಳೀಯರಾದ ಅಶೋಕ್ ಪಿಂಟೊ ಮೊದಲಾದವರು ಸಹಕರಿಸಿದ್ದಾರೆ.
Hubli : ಹುಬ್ಬಳ್ಳಿಯ ಹೃದಯ ಭಾಗದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯ ಬಂಧನ
D.K.Shivakumar : ಸಾರ್ವಜನಿಕರಿಗಾಗಿ ಡಿಸಿಎಂ ಡಿಕೆಶಿ ಹೊಸ ವೆಬ್ ಸೈಟ್…!