Udupi News : ಕೇರಳಕ್ಕೆ ವಿದ್ಯುತ್ ಸರಬರಾಜಿಗಾಗಿ ಬೃಹತ್ ವಿದ್ಯುತ್ ಟವರ್‍ಗಳನ್ನು ನಿರ್ಮಿಸಲು ಜಾಗದ ಸರ್ವೆ ಕಾರ್ಯಕ್ಕೆ ಗ್ರಾಮಸ್ಥರು ಆಕ್ರೋಶಗೊಂಡು ತಡೆ ಹಿಡಿದ ಘಟನೆ ಇನ್ನಾ ಗ್ರಾಮದ ಅನ್ನೋಜಿಗೋಲಿ ಬಳಿಯಲ್ಲಿ ನಡೆದಿದೆ. ಶುಕ್ರವಾರ ಸರ್ವೆ ಕಾರ್ಯಕ್ಕೆ ಬಂದ ಅಧಿಕಾರಿಗಳನ್ನು ಇನ್ನಾ ಗ್ರಾಮದ ಜನ ತರಾಟೆಗೆ ತೆಗೆದುಕೊಂಡಿದ್ದು ನಮ್ಮ ಒಪ್ಪಿಗೆ ಇಲ್ಲದೆ ಯಾವುದೇ ಸರ್ವೆ ಕಾರ್ಯವನ್ನು ನಡೆಸಲು ಬಿಡುವುದಿಲ್ಲ ಎಂದು ಜನ ಪಟ್ಟು ಹಿಡಿದರು.
ಈಗಾಗಲೇ ಇನ್ನಾ ಗ್ರಾಮದಲ್ಲಿ ಮೊದಲ ಹಂತದ ವಿದ್ಯುತ್ ಲೈನ್ ಹಾದುಹೋಗಿದ್ದು ಜನ ಹಲವಾರು ಎಕರೆ ಭೂಮಿಯನ್ನು ಈಗಾಗಲೇ ಕಳೆದುಕೊಂಡಿದ್ದು ಇದೀಗ ಮತ್ತೆ ಕೃಷಿ ಭೂಮಿಯಲ್ಲೇ ಮತ್ತೊಂದು ಟವರ್ ವಿದ್ಯುತ್ ಲೈನ್ ಹಾದು ಹೋಗುವುದಕ್ಕೆ ಮತ್ತೆ ಸರ್ವೆ ಕಾರ್ಯ ಆರಂಭಗೊಂಡಿದ್ದು ಗ್ರಾಮದ ಜನ ಆತಂಕಗೊಂಡಿದ್ದಾರೆ.
ಈ ಭಾಗದಲ್ಲಿ ವಿದ್ಯುತ್ ತಂತಿ ಹಾದುಹೋಗಲು ಟವರ್‍ಗಳನ್ನು ನಿರ್ಮಿಸುವ ಸಲುವಾಗಿ ಸರ್ವೆ ಕಾರ್ಯದ ಬಗ್ಗೆ ಸಭೆಗಳು ನಡೆದಿದ್ದು ಜನ ಮಾತ್ರ ಯಾವುದಕ್ಕೂ ಒಪ್ಪದ ಕಾರಣ ಮತ್ತೆ ಎ.ಸಿ, ತಹಶೀಲ್ದಾರ್, ಜಿಲ್ಲಾಧಿಕಾರಿಗಳು ಕೂಡ ಸಭೆಯನ್ನು ನಡೆಸಿದ್ದರು. ಇದೀಗ ಮತ್ತೆ ಶುಕ್ರವಾರ ಸರ್ವೆ ಕಾರ್ಯಕ್ಕೆ ಅಧಿಕಾರಿಗಳು ಸ್ಥಳಕ್ಕೆ ಭೇಟಿಯನ್ನು ನೀಡಿದನ್ನು ಗಮನಿಸಿ ಗ್ರಾಮದ ಜನ ಒಟ್ಟುಗೂಡಿ ಆಕ್ರೋಶವನ್ನು ವ್ಯಕ್ತಪಡಿಸಿ ಸರ್ವೆ ಕಾರ್ಯಕ್ಕೆ ತಡೆ ಹಿಡಿದು ವಾಪಸ್ಸು ಕಳುಹಿಸಿದ ಘಟನೆ ನಡೆದಿದೆ.
Siddaramaiah : ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ : ಸಿಎಂ ಸಿದ್ದರಾಮಯ್ಯ
Nandini Milk : ನಂದಿನಿ ಹಾಲು ಪ್ರತಿ ಲೀಟರ್ಗೆ, ಮೊಸರಿನ ದರ ಪ್ರತಿ ಕೆ.ಜಿಗೆ 3 ರೂಪಾಯಿ ಹಚ್ಚಳ
Bridge : ನಿರ್ಮಾಣ ಹಂತದಲ್ಲಿರೋ ಸೇತುವೆಯಲ್ಲಿ ಯುವಕರ ಹುಚ್ಚು ಸಾಹಸ..!