- Advertisement -
Udupi News:
ಉಡುಪಿಯಲ್ಲಿ ಮತ್ತೆ ಮಳೆಯಾಗುತ್ತಿರುವ ಪರಿಣಾಮವಾಗಿ ನಿರಂತರ ಜ್ವರದ ಸಮಸ್ಯೆ ಕಾಡುತ್ತಿದೆ. ಜೊತೆಗೆ ಇಲಿಜ್ವರ ಪ್ರಕರಣ ಕೂಡಾ ದಾಖಲಾಗುತ್ತಿದೆ. ಇದರಿಂದ ಜನ ಆತಂಕಕ್ಕೆ ಒಳಗಾಗಿದ್ದಾರೆ.ಉಡುಪಿ ತಾಲೂಕಿನಲ್ಲಿ 54 ಮಂದಿ, ಕುಂದಾಪುರದಲ್ಲಿ 76 ಮಂದಿ ಹಾಗೂ ಕಾರ್ಕಳದಲ್ಲಿ 28 ಮಂದಿಯಲ್ಲಿ ಇಲಿ ಜ್ವರ ದೃಢಪಟ್ಟಿದೆ ಎಂದು ತಿಳಿದು ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರೆಗೆ 305 ಮಂದಿಗೆ ಇಲಿ ಜ್ವರ ಬಾಧಿಸಿದೆ. ಕೊರೋನಾ- ಮಂಕಿ ಫಾಕ್ಸ್ ಆತಂಕ ಕಡಿಮೆಯಾಗುತ್ತಿದ್ದಂತೆ ಇಲಿ ಜ್ವರದ ಭೀತಿ ಜನರಲ್ಲಿ ಹೆಚ್ಚಾಗಿದೆ.
- Advertisement -

