ಕರ್ನಾಟಕ ಟಿವಿ : ಪದವಿ ವಿದ್ಯಾರ್ಥಿಗಳ ಪರೀಕ್ಷೆ ದೇಶಾದ್ಯಂತ ಯುಜಿಸಿಗೆ ಭಾರೀ ಕಸಿವಿಸಿ ಮಾಡಿದೆ. ಯುಜಿಸಿ ಈ ಮೊದಲು ಕಡ್ಡಾಯ ಪರೀಕ್ಷೆಗೆ ಆದೇಶ ಮಾಡಿ ಆಕ್ರೋಶಕ್ಕೆ ತುತ್ತಾಗಿತ್ತು.. ಸ್ಟೂಡೆಂಟ್ಸ್ ಲೈವ್ ಮ್ಯಾಟರ್, ಪ್ರಮೋಟ್ ಫೈನಲ್ ಇಯರ್ ಸ್ಟುಡೆಂಟ್ಸ್ ಅನ್ನುವ ಹ್ಯಾಷ್ ಟ್ಯಾಗ್ ಮೂಲಕ ಅಭಿಯಾನ ಕೈಗೊಂಡಿದ್ರು.. ಇದೀಗ ಯುಜಿಸಿ ಹೊಸದಾಗಿ ಸುತ್ತೋಲೆ ಹೊರಡಿಸಿದ್ದು ಸೆಪ್ಟಂಬರ್ ವೇಳೆಗೆ ಪರೀಕ್ಷೆ ನಡೆಸುವಂತೆ ಸೂಚಿಸಿದೆ. ಫೈನಲ್ ಇಯರ್ ವಿದ್ಯಾರ್ಥಿಗಳು ಹಾಗೂ ಫೈನಲ್ ಸೆಮಿಸ್ಟರ್ ಪರೀಕ್ಷೆಗಳನ್ನ ಆಫ್ ಲೈನ್ ಅಥವಾ ಆನ್ ಲೈನ್ ನಲ್ಲಾದದರೂ ಪರೀಕ್ಷೆ ನಡೆಸಿ ಅಂತ ಸೂಚಿಸಿದೆ.. ಈ ನಡುವೆ ಪರೀಕ್ಷೆ ಬಾಕಿ ಉಳಿಸಿಕೊಂಡಿರುವ ಫೈನಲ್ ಇಯರ್ ವಿದ್ಯಾರ್ಥಿಗಳು ತಪ್ಪದೇ ಬಾಕಿ ಪರೀಕ್ಷೆಗಳನ್ನ ಬರೆಯ ಬೇಕಿದೆ. ಬಾಕಿ ಉಳಿಸಿಕೊಂಡವರ ಪರೀಕ್ಷೆಯನ್ನ ಆಫ್ ಲೈನ್ ಅಥವಾ ಆನ್ ಲೈನ್ ನಲ್ಲಿ ನಡೆಸುವಂತೆ ಸೂಚಿಸಿದೆ.
ನ್ಯೂಸ್ ಡೆಸ್ಕ್, ಕರ್ನಾಟಕ ಟಿವಿ,
ನೀವೂ ಚೀನಾ ಆ್ಯಪ್ ಗಳನ್ನ ಬಹಿಷ್ಕಾರ ಮಾಡಿದ್ದೀರಾ..? ಕಾಮೆಂಟ್ ಮಾಡಿ