UK STORIES:
ಯುಕೆ ಪ್ರಧಾನ ಮಂತ್ರಿ ಸ್ಥಾನಕ್ಕೆ ನಡೆಯತ್ತಿರುವ ತುರುಸಿನ ಪೈಪೋಟಿಯಲ್ಲಿ ಭಾರತೀಯ ಮೂಲದ ರಿಷಿ ಸುನಾಕ್ ಅವರ ಪ್ರತಿಸ್ಪರ್ಧಿ ಮತ್ತು ಸಮೀಕ್ಷೆಗಳ ಪ್ರಕಾರ ಸುನಾಕ್ ಅವರಿಗಿಂತ ಬಹಳ ಮುಂದಿರುವ ಲಿಜ್ ಟ್ರಸ್ ಅವರ ಧೋರಣೆ ಮತ್ತು ನಿಲುವುಗಳನ್ನು ಕನ್ಸರ್ವೇಟಿವ್ ಪಕ್ಷದ ಹಿರಿಯ ಸದಸ್ಯ ಮತ್ತು ಹಿಂದೆ ಹಲವಾರು ಜವಾಬ್ದಾರಿಗಳನ್ನು ನಿಭಾಯಿಸಿರುವ ಮೈಕೆಲ್ ಗೋವ್ ಕಟುವಾಗಿ ಟೀಕಿಸಿದ್ದಾರೆ. ಮುಂದಿನ ಹದಿನೈದು ದಿನಗಳಲ್ಲಿ ಮುಂದಿನ ಬ್ರಿಟಿಷ್ ಪ್ರಧಾನ ಮಂತ್ರಿ ಯಾರೆನ್ನುವುದು ಗೊತ್ತಾಗಲಿದ್ದು ಸುನಾಕ್ ಅವರೇ ಟಾಪ್ ಹುದ್ದೆಗೆ ಸೂಕ್ತ ಅಭ್ಯರ್ಥಿ ಎಂದು ಗೋವ್ ಹೇಳಿದ್ದಾರೆ.
ಸೆಪ್ಟೆಂಬರ್ 5 ರಂದು ಫಲಿತಾಂಶ ಹೊರಬೀಳಲಿದ್ದು ವಿದೇಶಾಂಗ ವ್ಯವಹಾರಗಳ ಸಚಿವೆಯಾಗಿರುವ ಟ್ರಸ್ ಇದುವರೆಗೆ ನಡೆದಿರುವ ಎಲ್ಲ ಸುತ್ತುಗಳಲ್ಲಿ ಸುನಾಕ್ ಅವರನ್ನು ಹಿಂದಟ್ಟಿ ನಿರ್ಗಮಿಸುತ್ತಿರುವ ಬೊರಿಸ್ ಜಾನ್ಸನ್ ಸ್ಥಾನಕ್ಕೇರುವ ಸಾಧ್ಯತೆಯನ್ನು ಹೆಚ್ಚುಕಡಿಮೆ ಖಚಿತಪಡಿಸಿಕೊಂಡಿದ್ದಾರೆ.
ಪ್ರಧಾನ ಮಂತ್ರಿ ಸ್ಥಾನಕ್ಕೆ ನಡೆಯುತ್ತಿರುವ ರೇಸ್ನಲ್ಲಿ ಗೆದ್ದವರು ಮರುದಿನವೇ ಅಂದರೆ ಸೆಪ್ಟೆಂಬರ್ 6 ರಂದು ಅಧಿಕಾರ ಸ್ವೀಕರಿಸಲಿದ್ದಾರೆ. ಆದರೆ ಗೆದ್ದ ಅಭ್ಯರ್ಥಿಯ ಹಾದಿ ಸುಗಮವಾಗೇನೂ ಇಲ್ಲ, ಯಾಕೆಂದರೆ ಯುಕೆ ಹಿಂದೆಂದೂ ಕಾಣದ ಹಣದುಬ್ಬರದಿಂದ ಬಳಲುತ್ತಿದೆ, ಈ ವರ್ಷಾಂತ್ಯದಲ್ಲಿ ದೇಶವು ಆರ್ಥಿಕ ಹಿಂಜರಿತಕ್ಕೆ ಸಿಕ್ಕುವ ಸಾಧ್ಯತೆಯಿದೆ.
‘ಈ ಹುದ್ದೆ ಅಲಂಕರಿಸಲು ಅಗತ್ಯವಿರುವ ಕ್ಷಮತೆ ಮತ್ತು ಸಾಮರ್ಥ್ಯ ಏನೆನ್ನುವುದು ನನಗೆ ಚೆನ್ನಾಗಿ ಗೊತ್ತಿದೆ, ಅದು ಸುನಾಕ್ ಅವರಲ್ಲಿದೆ,’ ಎಂದು ಗೋವ್ ಹೇಳಿದ್ದಾರೆ.
ಮಗ್ರಿಬ್ ಪ್ರಾರ್ಥನೆ ವೇಳೆ ಕಾಬೂಲ್‌ನ ಮಸೀದಿಯಲ್ಲಿ ಬಾಂಬ್ ಸ್ಫೋಟ : 21 ಜನರ ಸಾವು