ಕೆಲವೊಮ್ಮೆ ಗೊತ್ತೊ ಗೊತ್ತಿಲ್ಲದೆಯೋ ತಪ್ಪು ನಡೆದು ಹೋಗುತ್ತದೆ. ಅಂಥ ತಪ್ಪು ಕೆಎಫ್‌ಸಿಯಿಂದ ಆಗಿದೆ ಅನ್ನೋದು ಯುಕೆ ಮಹಿಳೆಯ ಆರೋಪ. ಈಕೆ ಕೆಎಫ್‌ಸಿಯ ಹಾಟ್ ವಿಂಗ್ ಮೀಲ್ಸ್ ಆರ್ಡರ್ ಮಾಡಿದ್ದು, ಅದರಲ್ಲಿ ಚಿಕನ್ ಪದಾರ್ಥ ತಿನ್ನುವಾಗ ಆಕೆಗೆ ಕೋಳಿಯ ತಲೆ ಸಿಕ್ಕಿದೆ. ಆ ಫೋಟೋ ಸಮೇತವಾಗಿ ಆಕೆ ರಿವ್ಯೂಕೊಟ್ಟಿದ್ದಾಳೆ. ರಿವ್ಯೂ ಕೊಡುವಾಗ ಎರಡು ಪಾಯಿಂಟ್ಸ್ ಕೊಟ್ಟಿದ್ದಾಳೆ. ಸೋಶಿಯಲ್ ಮೀಡಿಯಾದಲ್ಲಿ ಈ ರಿವ್ಯೂ ನೋಡಿದವರು ಕೆಎಫ್‌ಸಿಯನ್ನ ಸರಿಯಾಗಿ ದಬಾಯಿಸಿದ್ದಾರೆ.
ಯುಕೆ ಮಹಿಳೆ ಗೆಬ್ರಿಯಲ್ ಎಂಬಾಕೆ ಈ ಮೀಲ್ಸ್ ಆರ್ಡರ್ ಮಾಡಿ, ಶಾಕ್‌ಗೆ ಒಳಗಾಗಿದ್ದಾರೆ. ಆಕೆಯ ರಿವ್ಯೂ ಶೇರ್ ಆಗುತ್ತಿದ್ದಂತೆ, ನೆಟ್ಟಿಗರಲ್ಲಿ ಈ ಬಗ್ಗೆ ಕೆಲವರು ಆಕ್ರೋಶ ಹೊರಹಾಕಿದ್ರೆ, ಕೆಲವರು ತಮಾಷೆ ಮಾಡಿದ್ದಾರೆ. ಆದ್ರೆ ಈ ವಿಷಯ ಗೊತ್ತಾಗುತ್ತಿದ್ದಂತೆ, ಕೆಎಫ್‌ಸಿ ಕ್ಷಮೆಯಾಚಿಸಿದೆ. ಮುಂದೆ ಈ ರೀತಿಯಾಗದಂತೆ ಎಚ್ಚರ ವಹಿಸುತ್ತೇವೆಂದು ಭರವಸೆ ನೀಡಿದೆ.
ಈ ಫೋಟೋವನ್ನ ನೋಡಿ ನಾವು ತಬ್ಬಿಬ್ಬಾಗಿದ್ದೇವೆ. ನಾವು ಅಡುಗೆ ಮಾಡುವ ಸ್ಥಳದಿಂದ ಹಿಡಿದು ಸಪ್ಲೈ ಮಾಡುವವರೆಗೂ ಚೆಕ್ ಮಾಡಿಕೊಂಡೇ ಸಪ್ಲೈ ಮಾಡುತ್ತೇವೆ. ಆದರೂ ಕೂಡ ತಪ್ಪಾಗಿದೆ. ಆದ್ರೆ ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇವೆ. ಈ ಬಗ್ಗೆ ನಾವು ಗೆಬ್ರಿಯಲ್ ಜೊತೆ ಮಾತನಾಡಿದ್ದು, ಅವರಿಗೆ ಫ್ರಿ ಚಿಕನ್ ಮೀಲ್ಸ್ ಆಫರ್ ಮಾಡಿದ್ದೆವು. ಅದನ್ನು ಅವರು ಸ್ವೀಕರಿಸಿದ್ದಾರೆ ಕೂಡ. ಅಲ್ಲದೇ ನಾವು ಅವರನ್ನು ಮತ್ತು ಅವರ ಕುಟುಂಬಸ್ಥರನ್ನು ಆಮಂತ್ರಿಸಿದ್ದು, ಅವರು ನಮ್ಮ ಕೆಎಫ್‌ಸಿ ಕಂಪೆನಿಗೆ ಬಂದು ನಾವು ಮಾಡುವ ಚಿಕನ್ ಮೀಲ್ಸ್ ಹೇಗೆ ತಯಾರಾಗುತ್ತದೆ..? ನಮ್ಮ ಎಷ್ಟು ನೀಟ್‌ನೆಸ್ ಮೆಂಟೇನ್ ಮಾಡುತ್ತೇವೆಂದು ನೋಡಲಿ ಎಂದು ಹೇಳಿದ್ದೇವೆ ಎಂದು ಯುಕೆ ಕೆಎಫ್‌ಸಿಯವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಅಪ್ಲೋಡ್ ಮಾಡಿದ್ದಾರೆ.

