Monday, December 23, 2024

Latest Posts

ಉಮೇಶ್ ಕತ್ತಿ ಅಕಾಲಿಕ ಮರಣಕ್ಕೆ ಸಿಎಂ ಬೊಮ್ಮಾಯಿ ಸಂತಾಪ:

- Advertisement -

Banglore News:

ಓರ್ವ ಉತ್ತರ ಕರ್ನಾಟಕದ ಕನಸುಗಾರ, ಹೋರಾಟಗಾರ, ಛಲಗಾರರು. ಇವೆಲ್ಲವುಗಳ ಜೊತೆ ಪ್ರೀತಿ, ವಿಶ್ವಾಸ, ಅಂತ:ಕರುಣೆ, ಅನುಕಂಪ ಗುಣಗಳಿಂದ ಜನಪ್ರಿಯ ನಾಯಕರು. ಎಲ್ಲರನ್ನೂ ಪ್ರೀತಿಸುವ, ಗೌರವಿಸುವ ಗುಣ. ಇಂಥಹ ಗುಣಗಳಿಂದಲೇ ತಮ್ಮ ಕ್ಷೇತ್ರದ ಜನಸಾಮಾನ್ಯರ ಮನ-ಮನದಲ್ಲಿ ಹಾಗೂ ಹೃದಯದಲ್ಲಿ ನೆಲೆಸಿದವರು  ಉಮೇಶ್ ಕತ್ತಿ ಆದರೆ ಇಂದು  ವಿಧಿಯಾಟಕ್ಕೆ ಬಲಿಯಾಗಿ ನಮ್ಮನ್ನಲ್ಲಾ  ಬಿಟ್ಟು ಕಾಣದ  ಲೋಕಕ್ಕೆ  ಪಯಣಿಸಿದ್ದಾರೆ. ಹೃದಯವಂತ ರಾಜಕೀಯ  ಮುತ್ಸಜ್ಜಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.ಉತ್ತರ ಕರ್ನಾಟಕವೇ ಕತ್ತಿ ಕಣ್ಮರೆಯಿಂದ ಶೋಕ ಸಾಗರದಲ್ಲಿ ಮುಳುಗಿದೆ.  ಸಿಎಂ ಬಸವರಾಜ್ ಬೊಮ್ಮಾಯಿ  ಕತ್ತಿ ಮರಣಕ್ಕೆ  ಸಂತಾಪ  ಸೂಚಿಸಿದ್ದಾರೆ. “ಅರಣ್ಯ ಸಚಿವ, ನನ್ನ ಆಪ್ತ ಸಹೋದ್ಯೋಗಿ ಶ್ರೀ ಉಮೇಶ್ ಕತ್ತಿ ಅವರ ಅಕಾಲಿಕ ನಿಧನದಿಂದ ತೀವ್ರ ದುಃಖಿತನಾಗಿದ್ದೇನೆ. ಅವರ ನಿಧನದಿಂದ ರಾಜ್ಯ ಓರ್ವ ನುರಿತ ಮುತ್ಸದ್ಧಿ,ಕ್ರಿಯಾಶೀಲ ಮುಖಂಡ ಹಾಗೂ ನಿಷ್ಠಾವಂತ ಜನಸೇವಕನನ್ನು ಕಳೆದುಕೊಂಡಿದೆ. ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಆ ಭಗವಂತ ಅವರ ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ” ಎಂಬುವುದಾಗಿ  ಟ್ವೀಟ್ ಮೂಲಕ  ಸಿಎಂ ಸಂತಾಪ  ಸೂಚಿಸಿದ್ದಾರೆ.

ಉತ್ತರ ಕರ್ನಾಟಕದ ಮೇರು ನಾಯಕ ಉಮೇಶ್ ಕತ್ತಿ ವಿಧಿವಶ:

ಕೇಂದ್ರ, ರಾಜ್ಯ ಸರ್ಕಾರದ ಪ್ರಾಯೋಜಿತ ಕಾರ್ಯಕ್ರಮಗಳಲ್ಲಿ ಕನ್ನಡ ಬಳಕೆ ಕಡ್ಡಾಯಗೊಳಿಸಿ ಸರ್ಕಾರ ಆದೇಶ

 

ಎಸ್ಸಿ, ಎಸ್ಟಿ ಸಮುದಾಯದವರ ಗಮನಕ್ಕೆ: ಉಚಿತ ವಿದ್ಯುತ್‌ ಅನುಷ್ಠಾನಕ್ಕೆ ಹೊಸ BESCOMನಿಂದ ಆ್ಯಪ್

- Advertisement -

Latest Posts

Don't Miss